ಮಂಗಳೂರು ಕಮಿಷನರ್ ಸೇರಿ 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ

0
13
SHASHIKUMAR

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸೇರಿದಂತೆ ಏಳು ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎನ್. ಶಶಿಕುಮಾರ್ ಅವರನ್ನು ರೈಲ್ವೆ ಡಿಐಜಿಯಾಗಿ ಹಾಗೂ ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿಯಾಗಿರುವ ಕುಲದೀಪ್ ಕುಮಾರ್ ಆರ್.ಜೈನ್ ಅವರನ್ನು ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರ ಹುದ್ದೆಗೆ ನೇಮಕ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಗುಪ್ತವಾರ್ತೆ ಎಸ್ಪಿಯಾಗಿ ಕಿಶೋರ್ ಬಾಬು, ವೈರ್‌ಲೆಸ್ ವಿಭಾಗದ ಎಸ್ಪಿ ಕೋನವಂಶಿಕೃಷ್ಣ, ಬೆಂಗಳೂರು ದಕ್ಷಿಣ ವಿಭಾಗದ ಟ್ರಾಫಿಕ್​ ಡಿಸಿಪಿಯಾಗಿ ಮೊಹಮ್ಮದ್ ಸುಜೀತ, ಕೇಂದ್ರ ಸಶಸ್ತ್ರ ವಿಭಾಗದ ಡಿಸಿಪಿಯಾಗಿ ಅರುಣಾಂಶು ಗಿರಿ ಹಾಗೂ ಕೊಪ್ಪಳ ಎಸ್ಪಿಯಾಗಿ ಯಶೋಧಾ ವಂಟಗೋಡಿ ವರ್ಗಾವಣೆಗೊಂಡಿದ್ದಾರೆ.

Previous articleತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ
Next article‘ಆಪರೇಷನ್ ಎಲಿಫೆಂಟ್’ ಸಕ್ಸಸ್‌