SK Home Ad
Home ಸಿನಿ ಮಿಲ್ಸ್ ವಾರೆ ವ್ಹಾ ತಮನ್ನಾ.. ದಿ ವಾನ್ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ಸಿಕ್ಕಾಪಟ್ಟೆ ಡಿಫರೆಂಟ್; ಒಂದು ದೃಶ್ಯ...

ವಾರೆ ವ್ಹಾ ತಮನ್ನಾ.. ದಿ ವಾನ್ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ಸಿಕ್ಕಾಪಟ್ಟೆ ಡಿಫರೆಂಟ್; ಒಂದು ದೃಶ್ಯ ಫುಲ್ ವೈರಲ್!

0
11

ಬಾಲಿವುಡ್ ನಟಿ ತಮನ್ನಾ ಭಾಟಿಯಾ ತಮ್ಮ ಮುಂಬರುವ ‘ದಿ ವಾನ್’ಸಿನಿಮಾದ ‘ಛಠಿ ಮೈಯಾʼ ಹಾಡಿನ ವಿಶೇಷ ತಯಾರಿ ಚರ್ಚೆಯಲ್ಲಿದೆ. ಈ ಚಿತ್ರದಲ್ಲಿ ತಮ್ಮನ್ನಾ ಜೊತೆಗೆ ನಟ ಸಿದ್ದಾರ್ಥ ಮಲ್ಹೊತ್ರಾ ಕಾಣಿಸಿಕೊಳ್ಳಲ್ಲಿದ್ದಾರೆ. ಹಾಡಿನ ಚಿತ್ರೀಕರಣದಲ್ಲಿ ತಮನ್ನಾ ಛಠ್ ಪೂಜೆ ಮಾಡುವ ದೃಶ್ಯ ಇದೀಗ ಚರ್ಚೆಯಲ್ಲಿದೆ.

ಸದ್ಯದಲ್ಲೇ ‘ದಿ ವಾನ್’ ಚಿತ್ರದ ‘ಛಠಿ ಮೈಯಾ’ ಹಾಡು ಬಿಡುಗಡೆಯಾಗಲಿದೆ. ಇದು ಕೇವಲ ಭಕ್ತಿಗೀತೆಯಾಗಿರದೆ, ಸಿನಿಮಾದ ಕಥೆ ಹಾಗೂ ಅದರ ಜನಪದ ಹಿನ್ನೆಲೆಯೊಂದಿಗೆ ನೇರವಾಗಿ ಬೆಸೆದುಕೊಂಡಿದೆ. ಭಕ್ತಿ ಮತ್ತು ಆಚರಣೆಯ ಸೊಬಗನ್ನು ತೋರಿಸಲಾಗಿದ್ದು, ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಾಡಿನ ಮುನ್ನ ಅವರು ಛಠ್ ಪೂಜೆಯ ಮಹತ್ವ, ಅದರ ಸಂಪ್ರದಾಯ ಹಾಗೂ ಬಿಹಾರ–ಪಾಟ್ನಾದಲ್ಲಿ ನಡೆಯುವ ಆಚರಣೆಗಳ ಬಗ್ಗೆ ಅಧ್ಯಯನ ಮಾಡಿದ್ದು, ತಾವು ಸ್ವತಃ ಈ ಪೂಜೆ ಮಾಡಿ ಅದನ್ನು ಗೌರವವಾಗಿ ಅರ್ಥಮಾಡಿಕೊಂಡು ಹಾಡಿನಲ್ಲಿನ ಭಕ್ತಿ ಮತ್ತು ಸಾಂಸ್ಕೃತಿಕ ಅಂಶಗಳನ್ನು ನೈಜವಾಗಿ ಮೂಡಿಸಲು ಪ್ರಯತ್ನಿಸಿದ್ದಾರೆ.

ಛಠ್ ಪೂಜೆಯ ಬಗ್ಗೆ ತಮಗೆ ಮೊದಲಿನಿಂದಲೂ ಅಪಾರ ಗೌರವವಿದೆ. ಈ ಪೂಜೆ ವಿಧಾನ ಮತ್ತು ಆಚರಣೆಯ ಕುರಿತು ಬಿಹಾರ ಮತ್ತು ಪಟನಾದಿಂದ ತಿಳಿದುಕೊಂಡು ಅರ್ಥಮಾಡಿಕೊಳ್ಳಲು ಸಮಯ ಕೊಟ್ಟಿದ್ದೇನೆ.

ಈ ಆಚರಣೆಯ ಆಳವಾದ ಅರ್ಥ ಮತ್ತು ಜನರ ನಂಬಿಕೆಯನ್ನು ತಿಳಿದುಕೊಂಡ ಬಳಿಕ ಛಠಿ ಮೈಯಾ ಅವರೊಂದಿಗೆ ವಿಶೇಷ ಆತ್ಮೀಯತೆ ಮೂಡಿತು ಎಂದು ಅವರು ತಿಳಿಸಿದ್ದಾರೆ. ‘ದಿ ವ್ವಾನ್’ ಸಿನಿಮಾದ ಕಥೆಯಲ್ಲಿ ಛಠ್ ಪೂಜೆಗೆ ಪ್ರಮುಖ ಸ್ಥಾನವಿದ್ದು, ಈ ಆಚರಣೆಯನ್ನು ವಿಭಿನ್ನ ರೀತಿಯಲ್ಲಿ ಅನುಭವಿಸಲು ಅವಕಾಶ ಸಿಕ್ಕಿದ್ದು ಸಂತೋಷ ತಂದಿದೆ ಎಂದಿದ್ದಾರೆ.

‘ಛಠಿ ಮೈಯಾ’ ಹಾಡಿಗೆ ವಿಶಾಲ್ ಮಿಶ್ರಾ ಧ್ವನಿ ನೀಡಿದ್ದಾರೆ. ಕೌಶಲ್ ಕಿಶೋರ್ ಸಾಹಿತ್ಯ ಬರೆದಿದ್ದು, ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ದಿ ವ್ವಾನ್’ ಚಿತ್ರವನ್ನು ದೀಪಕ್ ಮಿಶ್ರಾ ನಿರ್ದೇಶಿಸಿದ್ದಾರೆ. ಚಿತ್ರವು ಸೆಪ್ಟೆಂಬರ್ 25, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.