SK Home Ad
Home ಸಿನಿ ಮಿಲ್ಸ್ BBK13: ಒಂದೇ ಮನೆಯಲ್ಲಿ ಇಬ್ಬರು ಹೆಂಡ್ತೀರಾ?: ತಾಂಡವ್-ಸೌಂದರ್ಯ ಜುಗಲ್ ಬಂದಿ ಸೂಪರ್ ವೈರಲ್!

BBK13: ಒಂದೇ ಮನೆಯಲ್ಲಿ ಇಬ್ಬರು ಹೆಂಡ್ತೀರಾ?: ತಾಂಡವ್-ಸೌಂದರ್ಯ ಜುಗಲ್ ಬಂದಿ ಸೂಪರ್ ವೈರಲ್!

0
24

BBK13: ‘ಬಿಗ್‌ ಬಾಸ್ ಕನ್ನಡ ಸೀಸನ್ 13’ ಆರಂಭವಾಗಿ ಕೇವಲ 2 ದಿನದಲ್ಲಿ ಮನೆಯೊಳಗೆ ಸ್ಪರ್ಧಿಗಳ ನಡುವೆ ಆಟ, ತಂಟೆ, ತಮಾಷೆ ಹಾಗೂ ಸ್ವಾರಸ್ಯಕರ ಸಂಭಾಷಣೆಗಳು ಸದ್ದು ಮಾಡುತ್ತಿವೆ. ಇತ್ತೀಚೆಗೆ ನಡೆದ ಟಾಸ್ಕ್ ಮುಗಿದ ನಂತರ ನಟ ತಾಂಡವ್ ರಾಮ್ ಹಾಗೂ ಸೌಂದರ್ಯ ಶೆಟ್ಟಿ ನಡುವೆ ನಡೆದ ಹಾಸ್ಯಮಯ ಮಾತುಕತೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಟಾಸ್ಕ್ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ತಾಂಡವ್, ಸೌಂದರ್ಯಗೆ ಕಾಲಳೆಯಲು ಮುಂದಾದರು. “ಸೌಂದರ್ಯ ಅವರ ಅಕ್ಕ ಈ ಶೋ ನೋಡುತ್ತಿದ್ದರೆ ಖುಷಿಪಡಿ, ಏಕೆಂದರೆ ಸೌಂದರ್ಯ ಮನೆಯಲ್ಲಿ ಯಾವಾಗಲೂ ನಿಮ್ಮ ಹೆಸರನ್ನೇ ನೆನಪಿಸಿಕೊಳ್ಳುತ್ತಿರುತ್ತಾರೆ” ಎಂದರು. ನಂತರ ಸಹಜವಾಗಿ “ನಿಮ್ಮ ಅಕ್ಕನಿಗೆ ಮದುವೆ ಆಗಿದೆಯಾ?” ಎಂದು ವಿಚಾರಿಸಿದರು. ಅದಕ್ಕೆ ಸೌಂದರ್ಯ, “ಇಲ್ಲ, ನನಗೂ ಇನ್ನು ಮದುವೆಯಾಗಿಲ್ಲ” ಎಂದು ಉತ್ತರಿಸಿದರು.

ಸೌಂದರ್ಯ ಅವರ ಅಕ್ಕನ ಹೆಸರು ‘ಐಶ್ವರ್ಯ’ ಎಂದು ತಿಳಿದ ತಾಂಡವ್, “ಐಶೂ ಮತ್ತು ಸೌಂದರ್ಯ…” ಎಂದು ಹೆಸರುಗಳನ್ನು ಪಠಿಸುತ್ತಿದ್ದರು. ತಕ್ಷಣ ಸೌಂದರ್ಯ, “ಏನು.. ನಮ್ಮಿಬ್ಬರನ್ನೂ ಮದುವೆಯಾಗುತ್ತೀರಾ?” ಎಂದು ನೇರವಾಗಿ ಕೇಳಿ ತಾಂಡವ್‌ಗೆ ಶಾಕ್ ನೀಡಿದರು.

ಈ ದಿಢೀರ್ ಪ್ರಶ್ನೆಯಿಂದ ಆಶ್ಚರ್ಯಗೊಂಡ ತಾಂಡವ್ ನಗುತ್ತಾ, “ಅಯ್ಯೋ.. ಹಾಗೇನಾದರೂ ನಾನು ಮಾಡಿದ್ರೆ ನಿಮ್ಮ ಅಪ್ಪ ನನ್ನನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ” ಎಂದು ತಮಾಷೆಯಾಗಿ ಹೇಳಿದರು. ಅದಕ್ಕೆ ಸೌಂದರ್ಯ, “ಇಲ್ಲಪ್ಪ, ಹಾಗೆಲ್ಲ ಹೊಡೆಯುವುದಿಲ್ಲ” ಎಂದಾಗ, “ಹಾಗಾದರೆ ನಿಮ್ಮ ಅಪ್ಪನಿಗೆ ಖುಷಿನಾ?” ಎಂದು ತಾಂಡವ್ ಮರುಪ್ರಶ್ನೆ ಹಾಕಿದರು. ಕೊನೆಗೆ ಸೌಂದರ್ಯ ನಗುತ್ತಲೇ, “ಇಲ್ಲ ಬಿಡಿ, ಒಂದೇ ಮನೆಯಲ್ಲಿ ಇಬ್ಬರು ಹೆಂಡ್ತೀರಾ?” ಎಂದು ಹೇಳಿ ಆ ವಿಷಯಕ್ಕೆ ತಮಾಷೆಯಾಗಿಯೇ ತೆರೆ ಎಳೆದರು.

ಸದ್ಯ ತಾಂಡವ್ ರಾಮ್ ಹಾಗೂ ಸೌಂದರ್ಯ ಶೆಟ್ಟಿ ಈ ಮೋಜಿನ ಹರಟೆ ವೀಕ್ಷಕರ ಗಮನ ಸೆಳೆದಿದ್ದು, ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಮುಂದಿನ ದಿನಗಳಲ್ಲಿ ಸ್ಪರ್ಧಿಗಳು ವೀಕ್ಷಕರಿಗೆ ಯಾವ ರೀತಿ ಮನರಂಜನೆ ನೀಡುತ್ತಾರೆ ಎಂದು ಕಾದುನೋಡಬೇಕಿದೆ.