SK Home Ad
Home ಸುದ್ದಿ ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್; ಬಿಡುಗಡೆಗೂ ಮುನ್ನವೇ 18 ಪ್ರೊ ಮ್ಯಾಕ್ಸ್ ಫೀಚರ್ಸ್ ರಿವೀಲ್‌; ಸ್ಪೆಷಲ್ ಏನು...

ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್; ಬಿಡುಗಡೆಗೂ ಮುನ್ನವೇ 18 ಪ್ರೊ ಮ್ಯಾಕ್ಸ್ ಫೀಚರ್ಸ್ ರಿವೀಲ್‌; ಸ್ಪೆಷಲ್ ಏನು ಗೊತ್ತಾ?

0
58

ನವದೆಹಲಿ: ಆ್ಯಪಲ್‌ನ ಐಫೋನ್ 18 ಪ್ರೊ ಮ್ಯಾಕ್ಸ್ ಕುರಿತು ಹಲವು ಮಾಹಿತಿಗಳು ಸೋರಿಕೆಯಾಗಿವೆ. 6.9 ಇಂಚಿನ OLED ಡಿಸ್ಪ್ಲೇ, 48 MP ಟ್ರಿಪಲ್ ಕ್ಯಾಮೆರಾ, 5,400mAh ಬ್ಯಾಟರಿ ಮತ್ತು ಹೊಸ A20 Pro ಚಿಪ್ಸೆಟ್ ಸಿಗಬಹುದು ಎನ್ನಲಾಗಿದೆ. ಭಾರತದಲ್ಲಿ ₹1,69,900 ಆರಂಭಿಕ ಬೆಲೆ ಇರಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಸೆಪ್ಟೆಂಬರ್ 9ರಂದು ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಈ ವೇಳೆ iPhone 18 Pro, iPhone 18 Pro Max ಹಾಗೂ ಕಂಪನಿಯ ಮೊದಲ ಫೋಲ್ಡಬಲ್ iPhone ಅನ್ನು ಪರಿಚಯಿಸುತ್ತದೆ.

ಎಷ್ಟು ಇರಬಹುದು ಬೆಲೆ?
ವರದಿಗಳ ಪ್ರಕಾರ, iPhone 18 Pro ಬೆಲೆ ಹಿಂದಿನ iPhone 17 Proಗಿಂತ ಹೆಚ್ಚಾಗುವ ಸಾಧ್ಯತೆಯಿದೆ. ಭಾರತದಲ್ಲಿ ಇದರ ಆರಂಭಿಕ ಬೆಲೆ ಸುಮಾರು ₹1.40 ಲಕ್ಷ ಇರಬಹುದು ಎಂದು ಕೆಲವು ವರದಿಗಳು ಹೇಳಿವೆ. ಮತ್ತೊಂದೆಡೆ, ಇತ್ತೀಚಿನ ಕೆಲವು ವರದಿಗಳು ಸುಮಾರು ₹1.50 ಲಕ್ಷದ ಆರಂಭಿಕ ಬೆಲೆಯನ್ನೂ ಅಂದಾಜಿಸಿವೆ. ಹೀಗಾಗಿ Apple ಅಧಿಕೃತ ಘೋಷಣೆ ಮಾಡುವವರೆಗೆ ನಿಖರ ಬೆಲೆ ಖಚಿತವಾಗಿಲ್ಲ.

iPhone 18 Proನ ಫೀಚರ್ಸ್
iPhone 18 Proನಲ್ಲಿ 6.3, 6.4 ಇಂಚಿನ LTPO Super Retina XDR OLED ಡಿಸ್ಪ್ಲೇ ಇರಬಹುದು. ಫೋನ್‌ನಲ್ಲಿ ಹೊಸ A20 Pro 2nm ಚಿಪ್ಸೆಟ್, ಇದು ಕಾರ್ಯಕ್ಷಮತೆ ಮತ್ತು ಪವರ್ ಎಫಿಶಿಯನ್ಸಿಯಲ್ಲಿ ಸುಧಾರಣೆ ತರಬಹುದು.

ಕ್ಯಾಮೆರಾ ವಿಭಾಗದಲ್ಲೂ ಪ್ರಮುಖ ಅಪ್ಗ್ರೇಡ್ ನಿರೀಕ್ಷಿಸಲಾಗಿದೆ. ಮೂರು 48MP ಕ್ಯಾಮೆರಾಗಳ ಸೆಟಪ್ ಹಾಗೂ 18MP ಸೆಲ್ಫಿ ಕ್ಯಾಮೆರಾ ಇರುವ ಸಾಧ್ಯತೆಯಿದೆ. ಜೊತೆಗೆ ಮುಖ್ಯ ಕ್ಯಾಮೆರಾದಲ್ಲಿ ವೇರಿಯಬಲ್ ಅಪರ್ಚರ್ ತಂತ್ರಜ್ಞಾನವನ್ನು Apple ಪರೀಕ್ಷಿಸುತ್ತಿದೆ ಎಂಬ ವರದಿಗಳೂ ಬಂದಿವೆ.

iPhone 18 Proನ ಒಟ್ಟಾರೆ ವಿನ್ಯಾಸವು ಹಿಂದಿನ Pro ಮಾದರಿಗಳಿಗೆ ಹೋಲಿಕೆಯಾಗಬಹುದು. ಆದರೆ Dynamic Island ಅನ್ನು ಇನ್ನಷ್ಟು ಚಿಕ್ಕದಾಗಿಸುವ ಸಾಧ್ಯತೆ ಇದೆ. ಹೊಸ ಬಣ್ಣದ ಆಯ್ಕೆಗಳು ಹಾಗೂ ಕ್ಯಾಮೆರಾ ಮತ್ತು ಡಿಸ್ಪ್ಲೇ ವಿಭಾಗದಲ್ಲಿ ಸುಧಾರಣೆಗಳು ಸಿಗುವ ನಿರೀಕ್ಷೆಯಿದೆ.

Apple ಇದೇ ಸಂದರ್ಭದಲ್ಲಿ ತನ್ನ ಮೊದಲ ಫೋಲ್ಡಬಲ್ iPhone ಅನ್ನು ಕೂಡ ಪರಿಚಯಿಸಲಿದ್ದು, ಅದರ ಹೆಸರು iPhone Fold Ultra ಅಥವಾ iPhone Ultra ಆಗಿರಬಹುದು ಎಂದು ವರದಿಗಳು ಹೇಳುತ್ತಿವೆ. ಆದರೆ ಇದರ ಅಧಿಕೃತ ಹೆಸರು ಮತ್ತು ಬೆಲೆ ಇನ್ನೂ ಬಹಿರಂಗವಾಗಿಲ್ಲ.

ಮುಖ್ಯವಾಗಿ: ಇವುಗಳಲ್ಲಿ ಬಹುತೇಕ ಮಾಹಿತಿ ಲೀಕ್‌ಗಳು ಮತ್ತು ಮಾಧ್ಯಮ ವರದಿಗಳ ಆಧಾರಿತವಾಗಿವೆ. ಅಧಿಕೃತ ಬೆಲೆ, ಫೀಚರ್ಸ್ ಮತ್ತು ಸ್ಪೆಸಿಫಿಕೇಷನ್‌ಗಳು Appleನ ಬಿಡುಗಡೆ ಕಾರ್ಯಕ್ರಮದಲ್ಲೇ ಸ್ಪಷ್ಟವಾಗಲಿವೆ.