SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್‌ಗೆ ಜೋಡಿ ಎಂಟ್ರಿ: ಆಫ್‌ಸ್ಕ್ರೀನ್ ಪತ್ನಿ, ಆನ್‌ಸ್ಕ್ರೀನ್ ಶ್ರೇಷ್ಠಾ; ಕಿಚ್ಚನ ಮುಂದೆ ‘ತಾಂಡವ್’ ಫುಲ್...

ಬಿಗ್ ಬಾಸ್‌ಗೆ ಜೋಡಿ ಎಂಟ್ರಿ: ಆಫ್‌ಸ್ಕ್ರೀನ್ ಪತ್ನಿ, ಆನ್‌ಸ್ಕ್ರೀನ್ ಶ್ರೇಷ್ಠಾ; ಕಿಚ್ಚನ ಮುಂದೆ ‘ತಾಂಡವ್’ ಫುಲ್ ವೈರಲ್

0
21

‘ಬಿಗ್‌ ಬಾಸ್‌ ಕನ್ನಡ ಸೀಸನ್-13’ ಆರಂಭಕ್ಕೆ 2ಗಂಟೆಗಳ ಕ್ಷಣಗಣನೆ ಶುರುವಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇದರ ನಡುವೆಯೇ ಶೋ ವೇದಿಕೆಯಿಂದ ಬಿಡುಗಡೆಯಾಗಿರುವ ಮೊದಲ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಬಾರಿ ಇಬ್ಬರು ಸ್ಪರ್ಧಿಗಳು ಒಟ್ಟಿಗೆ ಎಂಟ್ರಿ ಕೊಟ್ಟಿರುವುದು ಶೋಗೆ ವಿಶೇಷ ಮೆರುಗು ನೀಡಿದೆ.

ಕಲರ್ಸ್ ಕನ್ನಡದ ಜನಪ್ರಿಯ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ತಾಂಡವ್ ಪಾತ್ರದ ಮೂಲಕ ಹೆಸರು ಮಾಡಿದ್ದ ನಟ ಸುದರ್ಶನ್ ರಂಗಪ್ರಸಾದ್ ಅವರ ರಿಯಲ್ ಪತ್ನಿ ಸಂಗೀತಾ ಭಟ್ ಹಾಗೂ ಆನ್‌ಸ್ಕ್ರೀನ್ ಪ್ರೇಯಸಿ (ಶ್ರೇಷ್ಠಾ ಪಾತ್ರಧಾರಿ) ಕಾವ್ಯ ಗೌಡ ಇಬ್ಬರೂ ಒಟ್ಟಿಗೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಸಿನಿಮಾ ನಾಯಕಿ ಸಂಗೀತಾ ಮತ್ತು ಸೀರಿಯಲ್ ನಾಯಕಿ ಕಾವ್ಯ ವೇದಿಕೆಗೆ ಜೊತೆಯಾಗಿ ಆಗಮಿಸಿದ್ದು, ನಿರೂಪಕ ಕಿಚ್ಚ ಸುದೀಪ್ ಮುಂದೆ ಮಜವಾದ ಸನ್ನಿವೇಶ ಸೃಷ್ಟಿಯಾಗಿದೆ.

ರಿಯಲ್ ಪತ್ನಿ ಸಂಗೀತಾ ಭಟ್ ಹಾಗೂ ರೀಲ್ ಸಂಗಾತಿ ಕಾವ್ಯ ಗೌಡ ನಡುವೆ ನಟ ಸುದರ್ಶನ್ ರಂಗಪ್ರಸಾದ್ ತಗ್ಲಾಕೊಂಡಿದ್ದು, ಪ್ರೋಮೋದಲ್ಲಿ ತಮಾಷೆಯ ಕ್ಷಣಗಳು ಮೂಡಿಬಂದಿವೆ. ಸುದರ್ಶನ್ ಕಿಚ್ಚ ಸುದೀಪ್‌ಗೆ ವರದಿ ನೀಡುತ್ತಾ, “ನನ್ನ ಪತ್ನಿಗೆ ಓಸಿಡಿ (OCD) ಸಮಸ್ಯೆ ಇದೆ, ಸಣ್ಣ ಗಲೀಜು ಕಂಡರೂ ಸಹಿಸುವುದಿಲ್ಲ” ಎಂದು ಹೇಳಿದ್ದಾರೆ. ಅಲ್ಲದೆ “ಆನ್‌ಸ್ಕ್ರೀನ್ ವೈಫ್ ಮತ್ತು ಆಫ್‌ಸ್ಕ್ರೀನ್ ವೈಫ್ ಕಿತ್ತಾಡಿದರೆ ಏನು ಮಾಡಲಿ, ಸ್ವಲ್ಪ ಹುಷಾರಾಗಿರು” ಎಂದು ಪತ್ನಿಗೆ ಕಿವಿಮಾತು ಹೇಳಿರುವುದು ಸುದೀಪ್‌ ಮತ್ತು ಅಲ್ಲಿನ ಜನರು ನಗುವಿನ ಮಳೆ ಹರಿಸುತ್ತಾರೆ.

ಒಟ್ಟಾರೆ.. ಕಲರ್ಸ್ ಕನ್ನಡದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಮುಗಿದ ನಂತರ ಸುದರ್ಶನ್ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿರಲಿಲ್ಲ. ಇತ್ತ ಕಾವ್ಯ ಗೌಡ ವಿದೇಶ ಪ್ರವಾಸದಲ್ಲಿದ್ದು ಸೈಲೆಂಟ್ ಆಗಿದ್ದರು. ಇನ್ನು ಸಂಗೀತಾ ಭಟ್ ಇತ್ತೀಚೆಗೆ ಪ್ರಮುಖ ಶಸ್ತ್ರಚಿಕಿತ್ಸೆಯಾಗಿದ್ದು, ಪ್ರೇಮವಿವಾಹವಾದ ಪತಿ ಸುದರ್ಶನ್ ಆರೈಕೆ ಮಾಡಿದ್ದರು. ಇದೀಗ ದೀರ್ಘಾವಧಿ ವಿರಾಮದ ನಂತರ ಸಂಗೀತಾ ಭಟ್ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.