ಮುಂಬೈ: ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಅವರ ಇತ್ತೀಚಿನ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಭಾರತದಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ ಕುರಿತು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಅಡಲ್ಟ್ ಕಂಟೆಂಟ್ ಪುರುಷರಲ್ಲಿ ಇರುವ ಒತ್ತಡ ಮತ್ತು ನಿರಾಶೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ. ಮತ್ತು ಈ ಕಂಟೆಂಟೆಗಳ ಮೂಲಕ ನಾನು ಒಂದು ರೀತಿಯಲ್ಲಿ ಸಾಮಾಜಿಕ ಸೇವೆ ಮಾಡದಂತೆ ಆಗುತ್ತದೆ ಹೇಳಿದರು.
ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಪೂನಂ ಅವರು ಜನರು ತಮ್ಮ ಜೀವನದಲ್ಲಿ ಕೆಲಸದ ಒತ್ತಡದಲ್ಲಿ, ಇರುವವರಿಗೆ ಅದರಲ್ಲಿ ಪುರುಷರು ನನ್ನ ಅಡಲ್ಟ್ ವಿಡಿಯೋ ನೊಡುವುದರಿಂದ ಅವರಿಗೆ ಒತ್ತಡ ಕಡಿಮೆಯಾದರೆ ಅದರಲ್ಲಿ ತಪ್ಪೇನು? ಸಮಾಜದಲ್ಲಿ ಅಪರಾಧ ಸಂಖ್ಯೆ ಹೆಚ್ಚಾಗುತ್ತಲ್ಲೇ ಇದೆ. ದೇಶದಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಸಮಾಜದಲ್ಲಿ ಮಹಿಳೆಯರ ಮೇಲೆ ಆಗುವ ಅಪರಾಧ ಕಡಿಮೆಯಾಗುತ್ತದೆ ಎಂದಿದ್ದಾರೆ.
ಈ ಅಡಲ್ಟ್ ಕಂಟೆಂಟ್‌ನಿಂದ ನಾನು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಟ್ರೋಲ್ ವಾಗುತ್ತೇನೆ. ನನಗೆ ಮಾನಸಿಕವಾಗಿ ತೊಂದರೆಯಾಗುತ್ತದೆ. ಇಂಡಸ್ಟ್ರಿಯ ಹಲವು ಸೆಲೆಬ್ರಿಟಿಗಳು ಹಾಗೂ ನನ್ನ ಸ್ವಂತ ಸ್ನೇಹಿತರೂ ಕೂಡ ಹಿಂದೆ ಮಾತನಾಡುತ್ತಾರೆ ಆದರೆ ಅವರೇ ಯಾರಿಗೂ ಗೊತ್ತಾಗದಂತೆ ವಿಡಿಯೋಗಳನ್ನು ನೋಡುತ್ತಾರೆ ಎಂದು ಅವರು ತಿಳಿಸಿದ್ದಾರೆ. ನನಗೆ ಇದಕ್ಕೆಲ್ಲಾ ಪ್ರತಿ ಉತ್ತರ ಕೊಡಬೇಕು ಅನಿಸುತ್ತಿತ್ತು. ಆದರೆ ನನ್ನ ಇಮೇಜ್ ಹಾಳಾಗುತ್ತೆ ಎಂಬ ಕಾರಣಕ್ಕೆ ನಾನು ಸುಮ್ಮನಾಗುತ್ತೇನೆ.
ಪೂನಂ ಪಾಂಡೆ ಅವರ ಹೇಳಿಕೆ ಇದೀಗ ಮತ್ತೊಮ್ಮೆ ವೇಶ್ಯಾವಾಟಿಕೆ, ಕಾನೂನು, ಮಹಿಳೆಯರ ಸುರಕ್ಷತೆ ಮತ್ತು ಸಾಮಾಜಿಕ ಜವಾಬ್ದಾರಿಯ ಕುರಿತು ಚರ್ಚೆಯನ್ನು ಮುನ್ನೆಲೆಗೆ ತಂದಿದೆ.






















