SK Home Ad
Home ಸಿನಿ ಮಿಲ್ಸ್ BBK13 ಪ್ರೋಮೋ ರಿಲೀಸ್; ಯಾರು ಈ ಗ್ಲಾಮರಸ್ ತಾರೆಯರು? ಬಿಗ್ ಬಾಸ್ ಹೊಸ ಟ್ವಿಸ್ಟ್‌ಗೆ ತಲೆ...

BBK13 ಪ್ರೋಮೋ ರಿಲೀಸ್; ಯಾರು ಈ ಗ್ಲಾಮರಸ್ ತಾರೆಯರು? ಬಿಗ್ ಬಾಸ್ ಹೊಸ ಟ್ವಿಸ್ಟ್‌ಗೆ ತಲೆ ಕೆಡಿಸಿಕೊಂಡ ನೆಟ್ಟಿಗರು!

0
37

BBK13: ಖ್ಯಾತ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಗ್ರ್ಯಾಂಡ್ ಓಪನಿಂಗ್‌ಗೆ ಕೇವಲ 1 ದಿನ ಮಾತ್ರ ಬಾಕಿ ಉಳಿದಿದೆ. ಈ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿಯು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪ್ರೋಮೋ ಒಂದನ್ನು ಬಿಡುಗಡೆ ಮಾಡುವ ಮೂಲಕ ವೀಕ್ಷಕರಲ್ಲಿ ಮತ್ತು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಬಿಡುಗಡೆಯಾಗಿರುವ ಈ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿರುವ ಕೆಲ ಸ್ಪರ್ಧಿಗಳ ವಿಡಿಯೋ ತುಣುಕುಗಳನ್ನು ತೋರಿಸಲಾಗಿದೆ. ಆದ್ರೆ ವಾಹಿನಿಯು ಇಲ್ಲಿ ಒಂದು ವಿಶೇಷ ಟ್ವಿಸ್ಟ್ ನೀಡಿದ್ದು, ಯಾವುದೇ ಸ್ಪರ್ಧಿಗಳ ಮುಖವನ್ನು ಸ್ಪಷ್ಟವಾಗಿ ಬಹಿರಂಗಪಡಿಸಿಲ್ಲ. ಬದಲಿಗೆ “ಈ ಸ್ಪರ್ಧಿಗಳು ಯಾರೆಂದು ಪತ್ತೆ ಹಚ್ಚಿ” ಎಂದು ವೀಕ್ಷಕರಿಗೆ ಸವಾಲು ಹಾಕಿದೆ. ಇದನ್ನು ನೋಡಿದ ನೆಟ್ಟಿಗರು ಹಾಗೂ ಅಭಿಮಾನಿಗಳು ವಿಡಿಯೋ ಆಧಾರಿಸಿ ಮನೆಗೆ ಹೋಗುವ ಸಂಭಾವ್ಯ ಸ್ಪರ್ಧಿಗಳ ಹೆಸರುಗಳನ್ನು ಊಹಿಸಲು ಪ್ರಾರಂಭಿಸಿದ್ದಾರೆ.

ಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಹೆಸರು, ಮಂಗಳೂರು ಮೂಲದ ಸ್ಪ್ಲಿಟ್ಸ್‌ವಿಲ್ಲಾ ಖ್ಯಾತಿಯ ಸೌಂದರ್ಯ ಶೆಟ್ಟಿ ಹಾಗೂ ಜೀ ಕನ್ನಡದ ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿ ಖ್ಯಾತಿಯ ಆಸಿಯಾ ಫಿರ್ ದೋಸ್ ಬಿಗ್ ಬಾಸ್ ಅಂಗಳಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ನಟ ಸೂರಜ್ ಮತ್ತು ಕಲರ್ಸ್ ಕನ್ನಡದ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ನಟ ಸುದರ್ಶನ್‌ ಪತ್ನಿ ಸಂಗೀತಾ ಭಟ್ ಕೂಡ ಸ್ಪರ್ಧಿಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಕಿರುತೆರೆಯ ಜನಪ್ರಿಯ ಮುಖಗಳಾದ ‘ಜೋಡಿ ಹಕ್ಕಿ’ ಧಾರಾವಾಹಿ ಖ್ಯಾತಿಯ ತಾಂಡವ್ ರಾಮ್, ಮತ್ತು’ರಾಮಾಚಾರಿ’ ಧಾರಾವಾಹಿ ನಟ ರಿತ್ವಿಕ್ ಕೃಪಾಕರ್ ಮತ್ತು ಹಿರಿಯ ನಿರೂಪಕಿ ಹಾಗೂ ನಟಿ ಸುಷ್ಮಾ ಕೆ. ರಾವ್ ಅವರ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ. ಜೊತೆಗೆ ಸಿನಿಮಾ ರಂಗದಿಂದ ಕಾಮಿಡಿ ಮತ್ತು ವಿಲನ್ ಸ್ಟಾರ್ ‘ಡ್ರ್ಯಾಗನ್ ಮಂಜು’ ಹಾಗೂ ‘ಸು ಫ್ರಮ್ ಸೋ’ ಸಿನಿಮಾದ ನಟ-ನಿರ್ದೇಶಕ ಜೆ.ಪಿ. ತುಮಿನಾಡು ಸೇರಿದಂತೆ ಹಲವು ಪ್ರಮುಖರು ಈ ಬಾರಿಯ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಗ್ರ್ಯಾಂಡ್ ಓಪನಿಂಗ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಅಂತಿಮವಾಗಿ ಯಾರೆಲ್ಲಾ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ.