SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಕನ್ನಡ 13′ ಸ್ಪರ್ಧಿ? :’ಸ್ಪ್ಲಿಟ್ಸ್‌ವಿಲ್ಲಾ’ ಫೈನಲಿಸ್ಟ್ ‘; ಸೌಂದರ್ಯ ಶೆಟ್ಟಿ ಕಂಪ್ಲೀಟ್ ಪ್ರೊಫೈಲ್!

ಬಿಗ್ ಬಾಸ್ ಕನ್ನಡ 13′ ಸ್ಪರ್ಧಿ? :’ಸ್ಪ್ಲಿಟ್ಸ್‌ವಿಲ್ಲಾ’ ಫೈನಲಿಸ್ಟ್ ‘; ಸೌಂದರ್ಯ ಶೆಟ್ಟಿ ಕಂಪ್ಲೀಟ್ ಪ್ರೊಫೈಲ್!

0
37

‘ಬಿಗ್ ಬಾಸ್ ಕನ್ನಡ 13’ ಗ್ರ್ಯಾಂಡ್‌ ಓಪನಿಂಗ್‌ಗೆ ಕ್ಷಣಗಣನೆ ಆರಂಭವಾಗಿದೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಮೂಲಕ ಕೆಲವು ಸ್ಪರ್ಧಿಗಳ ಹಿಂಟ್‌ ಕೊಟ್ಟಿದ್ದಾರೆ. ಈಗ ಅವರುಗಳು ಯಾರು ಎಂದು ಪತ್ತೆ ಹಚ್ಚಲು ಜನರಿಗೆ ತಿಳಿಸಿದ್ದಾರೆ. ಈ ಒಂದು ಕುತೂಹಲವನ್ನ ಬಿಗ್‌ ಬಾಸ್‌ ಇನ್ನೂ ಗೌಪ್ಯವಾಗಿಟ್ಟಿದ್ದು, ಜನರು ಆ ಸ್ಪರ್ಧಿಗಳಲ್ಲಿ ಸೌಂದರ್ಯ ಶೆಟ್ಟಿ ಎಂಟ್ರಿ ನೀಡುವುದು ಖಚಿತ ಎನ್ನುತ್ತಿದ್ದಾರೆ. ಆದ್ರೆ ಸೌಂದರ್ಯ ಕನ್ನಡ ವೀಕ್ಷಕರಿಗೆ ಹೊಸಬರಂತೆ ಕಂಡರೂ, ಹಿಂದಿ ಕಿರುತೆರೆ ಹಾಗೂ ಡಿಜಿಟಲ್ ಲೋಕದಲ್ಲಿ ಭಾರೀ ವೈರಲ್ ಆಗಿದ್ದಾರೆ.

ಸೌಂದರ್ಯ ಶೆಟ್ಟಿ ಹಿನ್ನೆಲೆ ಮತ್ತು ವಯಸ್ಸು: ಮೂಲತಃ ಮಂಗಳೂರಿನವರಾದ ಸೌಂದರ್ಯ ಯುವರಾಜ್ ಶೆಟ್ಟಿ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. 17 ಏಪ್ರಿಲ್ 2000 ರಂದು ಜನಿಸಿದ ಇವರಿಗೆ ಈಗ 25 ವರ್ಷ ವಯಸ್ಸು. ಮಾಡೆಲ್ ಹಾಗೂ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿರುವ ಸ್ಯಾಂಡಿ ಫ್ಯಾಷನ್, ಲೈಫ್‌ಸ್ಟೈಲ್ ಕುರಿತು ವಿಡಿಯೋಗಳನ್ನು ಮಾಡುತ್ತಿರುತ್ತಾರೆ. 2019ರಲ್ಲಿ ಇವರು ‘ಮಿಸ್ ವರ್ಲ್ಡ್ ಟೀನ್ ಸೂಪರ್ ಮಾಡೆಲ್’ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಕಿರುತೆರೆ ಜರ್ನಿ ಮತ್ತು ‘ಸ್ಪ್ಲಿಟ್ಸ್‌ವಿಲ್ಲಾ’ ಯಶಸ್ಸು: 2024ರ ‘ಎಂಟಿವಿ ರೋಡೀಸ್’ ಆಡಿಷನ್‌ನಲ್ಲಿ ರಿಜೆಕ್ಟ್ ಆಗಿದ್ದ ಸೌಂದರ್ಯ, ನಂತರ ‘ಸ್ಪ್ಲಿಟ್ಸ್‌ವಿಲ್ಲಾ ಸೀಸನ್ 16’ (ಪ್ಯಾರ್ ಯಾ ಪೈಸಾ) ರಿಯಾಲಿಟಿ ಶೋಗೆ ಆಯ್ಕೆಯಾದರು. ಶೋನಲ್ಲಿ ತಮ್ಮ ಬೋಲ್ಡ್ ವ್ಯಕ್ತಿತ್ವ ಮತ್ತು ಫಿಟ್ನೆಸ್ ಮೂಲಕ ಫೈನಲಿಸ್ಟ್ ಆಗಿ ಗಮನ ಸೆಳೆದರು. ಸನ್ನಿ ಲಿಯೋನ್ ಸೇರಿದಂತೆ ಸಹ-ಸ್ಪರ್ಧಿಗಳು ಇವರನ್ನು ಪ್ರೀತಿಯಿಂದ ‘ಸ್ಯಾಂಡಿ’ ಎಂದೇ ಕರೆಯುತ್ತಿದ್ದರು. ಹಾಗೇ ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು.

ಬಿಗ್ ಬಾಸ್‌ ಮನೆಗೆ ಪಕ್ಕಾ ಗೇಮರ್?: ಸ್ಯಾಂಡಿ ಮಾತಿನ ಶೈಲಿ ತುಂಬಾ ನೇರ ಮತ್ತು ಖಡಕ್‌, ಯಾರ ತಂಟೆಗೂ ಹೋಗಲ್ಲ, ಬಂದ್ರೆ ಬಿಡಲ್ಲ ಎಂಬ ಗುಣದವರು ಸೌಂದರ್ಯ ಶೆಟ್ಟಿ. ಹಾಗೂ ಪ್ರ್ಯಾಕ್ಟಿಕಲ್ ನಿರ್ಧಾರಗಳಿಗೆ ಹೆಸರುವಾಸಿ. ಸ್ಪ್ಲಿಟ್ಸ್‌ವಿಲ್ಲಾದಲ್ಲಿ ಪ್ರೀತಿಯ ಟ್ರ್ಯಾಪ್‌ಗೆ ಬೀಳದೆ ‘ಪೈಸಾ’ ಆಯ್ಕೆ ಮಾಡಿಕೊಂಡು ಕ್ವೀನ್ ಪಟ್ಟಕ್ಕೇರಿದ್ದ ಪಕ್ಕಾ ಗೇಮರ್. ಇದೀಗ ಬಿಗ್ ಬಾಸ್ ಕನ್ನಡ ಮನೆಗೆ ಕಾಲಿಡುತ್ತಿದ್ದು, ತಮ್ಮ ಬೋಲ್ಡ್ ಆಟದ ಮೂಲಕ ಕನ್ನಡ ವೀಕ್ಷಕರನ್ನು ಹೇಗೆ ಗೆಲ್ಲಲಿದ್ದಾರೆ ಎಂಬುದನ್ನು ಸದ್ಯಕ್ಕೆ ಕಾದುನೋಡಬೇಕಿದೆ.