ತಮಿಳು ಚಿತ್ರರಂಗದ ಜನಪ್ರಿಯ ನಟ ಹಾಗೂ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಧ್ಯಕ್ಷ ವಿಜಯ್ ತಮ್ಮ ಸರಳತೆ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿಯಿಂದ ಸದಾ ಸುದ್ದಿಯಲ್ಲಿ ಇದೇ ಇರುತ್ತಾರೆ. ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತೆರೆದ ವಾಹನದಲ್ಲಿ ಸಂಚರಿಸುತ್ತಿದ್ದಾಗ ನಡೆದ ಅಪರೂಪದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೌದು..ರಸ್ತೆಯ ಅಕ್ಕಪಕ್ಕ ನೆರೆದಿದ್ದ ಅಪಾರ ಜನಸ್ತೋಮಕ್ಕೆ ವಿಜಯ್ ಕೈಬೀಸುತ್ತಾ, ಗೌರವಿಸುತ್ತಾ ಸಾಗುತ್ತಿರುವ ವೇಳೆ ಈ ಘಟನೆ ನಡೆದಿದೆ. ಅಲ್ಲಯೇ ರಸ್ತೆಬದಿಯಲ್ಲಿದ್ದ ಯುವತಿ (ಮಹಿಳಾ ಅಭಿಮಾನಿ) ಯೊಬ್ಬರು ಅತ್ಯಂತ ಪ್ರೀತಿಯಿಂದ ವಿಜಯ್‌ಗೆ ಹಾಯ್ ಮಾಡಿ,’ಫ್ಲೈಯಿಂಗ್ ಕಿಸ್’ (Flying Kiss) ನೀಡಿದ್ದಾರೆ. ಜನಸಂದಣಿಯ ನಡುವೆಯೂ ಆಕೆಯ ಪ್ರೀತಿಯ ಭಿನ್ನ ಸೂಚನೆಯನ್ನು ತಕ್ಷಣವೇ ಗಮನಿಸಿದ ವಿಜಯ್, ಗಾಳಿಯಲ್ಲಿ ಬಂದ ಆ ಫ್ಲೈಯಿಂಗ್ ಕಿಸ್‌ನ್ನು ಕೈಯಿಂದ ಮುಷ್ಠಿ ಮಾಡಿ ಹಿಡಿದು ತಮ್ಮ ಹೃದಯ ಭಾಗಕ್ಕೆ ಒತ್ತಿಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ.
ನಟ ಹಾಗೂ ಸಿಎಂ. ವಿಜಯ್ ಈ ಸ್ಪಂದನೆ ಮತ್ತು ಸರಳ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೇ ಅಭಿಮಾನಿಗಳು ಸಹ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗಷ್ಟೇ ಪ್ರಚಾರದ ವೇಳೆ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದ ವಿಜಯ್,ಅಜ್ಜಿಯೊಬ್ಬರಿಗೆ ತಮ್ಮ ಸನ್‌ಗ್ಲಾಸ್ ಉಡುಗೊರೆಯಾಗಿ ನೀಡಿ ಜನರ ಮನ ಗೆದ್ದಿದ್ದರು. ಶಾಸಕರಾಗಿಯೂ, ತಮ್ಮ ಪಕ್ಷದ ನಾಯಕರಾಗಿಯೂ ಸಕ್ರಿಯರಾಗಿರುವ ವಿಜಯ್, ತಮ್ಮ ಸರಳತೆ ಹಾಗೂ ಅಭಿಮಾನಿಗಳ ಜೊತೆಗಿನ ಅನ್ಯೋನ್ಯ ನಂಟಿನಿಂದಾಗಿ ನಿರಂತರವಾಗಿ ಸುದ್ದಿಯಲ್ಲಿದ್ದಾರೆ.






















