Home Advertisement
Home ನಮ್ಮ ಜಿಲ್ಲೆ ಆ್ಯಂಬುಲೆನ್ಸ್‌ನಲ್ಲೆ ಹೆರಿಗೆ: ಗಂಡು ಮಗುವಿಗೆ ಜನ್ಮ

ಆ್ಯಂಬುಲೆನ್ಸ್‌ನಲ್ಲೆ ಹೆರಿಗೆ: ಗಂಡು ಮಗುವಿಗೆ ಜನ್ಮ

0
84

ರಾಯಚೂರು: ಆ್ಯಂಬುಲೆನ್ಸ್‌ ವಾಹನದಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹಂಪನಾಳ ಅಂತರಗಂಗೆ ಗ್ರಾಮದ ಮಧ್ಯೆ ಗುರವಾರ ನಡೆದಿದೆ.
ಹಂಪನಾಳ ಗ್ರಾಮದ ಗರ್ಭಿಣಿ ಯಲ್ಲಮ್ಮ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್‌ ವಾಹನ ಆಗಮಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗಲೇ ಹೆರಿಗೆ ಆಗಿದೆ. ಮಸ್ಕಿ ಆಸ್ಪತ್ರೆ ಸಿಬ್ಬಂದಿ ಬಸಲಿಂಗಪ್ಪ ಹಾಗೂ ವಾಹನ ಚಾಲಕ ಮಹಾಂತಸ್ವಾಮಿ ಅವರು ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯದಿಂದ ಇದ್ದಾರೆ. ನಂತರ ಮಸ್ಕಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

Previous articleಬಿಜೆಪಿದು ಗೂಂಡಾಗಿರಿ ಸಂಸ್ಕೃತಿ
Next articleಖಂಡ್ರೆ ವಿರುದ್ಧ ಕಾಗೇರಿ ಕೆಂಡಾಮಂಡಲ