Home Advertisement
Home ಅಪರಾಧ ಸಾಲಬಾಧೆ ತಾಳಲಾರದೇ ನೇಕಾರ ನೇಣಿಗೆ ಶರಣು

ಸಾಲಬಾಧೆ ತಾಳಲಾರದೇ ನೇಕಾರ ನೇಣಿಗೆ ಶರಣು

0
88

ಬೆಳಗಾವಿ: ಸಾಲಬಾಧೆ ತಾಳಲಾರದೇ ನೇಕಾರನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಲಾರವಾಡದ ಆಶ್ರಯ ಕಾಲೋನಿಯಲ್ಲಿ ನಡೆದಿದೆ.
ನಾರಾಯಣ ಪಿತಾಂಬರಪ್ಪಾ ಭಾಗನ್ನವರ(೪೦) ಎಂಬುವನೇ ಆತ್ಮಹತ್ಯೆ ಮಾಡಿಕೊಂಡ ನೇಕಾರ. ಈತ ಮನೆ ಖರೀದಿ ಮಾಡಲು ವಿವಿಧೆಡೆಗಳಲ್ಲಿ ಸಾಲ ಮಾಡಿಕೊಂಡಿದ್ದ. ಆದರೆ, ಮಾಡಿದ ಸಾಲ ತೀರಿಸಲು ಆಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಈ ಬಗ್ಗೆ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Previous articleಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ
Next articleಪಾಕ್ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ ಮಹಿಳಾಮಣಿಗಳು