ಕೃಷ್ಣಾನದಿ ಸ್ನಾನಕ್ಕೆ ಬಂದ ಯುವಕ, ನೀರು ಪಾಲು!

0
18

ಅಥಣಿ: ಶ್ರಾವಣ ಮಾಸದ ಪೂಜೆಯ ನಿಮಿತ್ತ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ದೇವರಿಗೆ ನೀರು ಒಯ್ಯಲು ಆಗಮಿಸಿದ ವೇಳೆ ಕೃಷ್ಣಾನದಿಯಲ್ಲಿ ಯುವಕನೋರ್ವ ಆಕಸ್ಮಿಕ ಕಾಲು ಜಾರಿ ಬಿದ್ದು ನೀರು ಪಾಲಾದ ದುರ್ಘಟನೆ ಜರುಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕಾಗಜಿ ಗಲ್ಲಿಯ ನಿವಾಸಿ ಸಾಗರ ರಾಜು ಹೊನಕಟ್ಟಿ(23) ಎಂಬ ಯುವಕ ದೇವರ ಪೂಜೆಗೆ ಕೃಷ್ಣಾನದಿಯಿಂದ ಸ್ನಾನ ಮಾಡಿ ನೀರು ತರಲು ಆಗಮಿಸಿದ ವೇಳೆ ದುರ್ಘಟನೆ ಜರುಗಿದೆ. ಅಥಣಿ ತಾಲೂಕಿನ ಹಲ್ಯಾಳ ದರೂರ ಬ್ರಿಡ್ಜ್‌ನಲ್ಲಿ ಈ ದುರ್ಘಟನೆ ಜರುಗಿದ್ದು, ಈಜು ಬರುತ್ತಿದ್ದ ವ್ಯಕ್ತಿ ಅಚಾನಕ್ ಆಗಿ ನೀರನಲ್ಲಿ ಹರಿದು ಹೋಗಿದ್ದಾನೆ ಎಂದು ತಿಳಿದುಬಂದಿದೆ.

Previous articleಕರ್ತವ್ಯ ಲೋಪ: ನಾಲ್ವರು ಅಮಾನತು
Next articleಗಣೇಶ ಮೂರ್ತಿ ಹಿಡಿದು ಬಿಜೆಪಿ ವಿರುದ್ಧ ಪ್ರಚಾರ: ಮುತಾಲಿಕ್