ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಸಾವು

0
13
ಕೃಷಿ ಹೊಂಡ

ಹಗರಿಬೊಮ್ಮನಹಳ್ಳಿ: ಕೃಷಿ ಹೊಂಡದಲ್ಲಿ ಇಬ್ಬರು ಬಾಲಕರು ಮುಳುಗಿ ಸಾವನ್ನಪ್ಪಿದ ದುರಂತ ಘಟನೆ ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ನಡೆದಿದೆ.
ಬನ್ನಿಕಲ್ಲು ಗ್ರಾಮದ ಅಣ್ಣ ತಮ್ಮಂದಿರ ಮಕ್ಕಳಾದ ಕಡ್ಲ ದಶರಥ ಮಗ ಅಭಿ(೧೪) ಮತ್ತು ಕಡ್ಲ ಚಂದ್ರಪ್ಪ ಇವರ ಜಿತೇಂದ್ರ(೧೦) ಇವರು ಮೃತಪಟ್ಟ ದುರ್ದೈವಿಗಳು. ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಊಟದ ಬುತ್ತಿಯನ್ನು ತೆಗೆದುಕೊಂಡು ಇಬ್ಬರೂ ಹೋಗಿದ್ದರು. ಬುತ್ತಿ ಕೊಟ್ಟ ನಂತರ ತಮ್ಮ ಹೊಲದ ಪಕ್ಕದಲ್ಲಿಯೇ ಇದ್ದ ನಾಗರಾಜ್ ಅವರ ಹೊಲದಲ್ಲಿ ಇದ್ದ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋದಾಗ ಕಾಲು ಜಾರಿ ಒಬ್ಬನು ಬಿದ್ದನು. ಅವನ ರಕ್ಷಣೆ ಮಾಡಲು ಮತ್ತೊಬ್ಬನು ಹೋಗಿದ್ದಾಗ, ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಕುರಿತು ತಂಬ್ರಹಳ್ಳಿ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.

Previous articleವಿಷಾಹಾರ ಸೇವನೆ: ಹಲವರು ಆಸ್ಪತ್ರೆಗೆ
Next articleತುಮಕೂರಿನಲ್ಲಿ ಔದ್ಯೋಗಿಕ ಕ್ರಾಂತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ