Home Advertisement
Home ಕಾರ್ಟೂನ್ ತಾರಾತಿಗಡಿ: ನೀವೇನಂತೀರಿ? ನೀವು ಯಾರ ಕಡೆ?

ತಾರಾತಿಗಡಿ: ನೀವೇನಂತೀರಿ? ನೀವು ಯಾರ ಕಡೆ?

0
177

ತಾರಾತಿಗಡಿ: ಏನಾದರೂ ಘಟನೆ ನಡೆಯಿತೆಂದರೆ ಸಾಕು ಕಿವುಡನುಮಿ ಕ್ಯಾಮರಾ ಹೊತ್ತುಕೊಂಡು ದೊಡ್ಡರು…ಸಣ್ಣೂರು… ಓಣಿ..ಓಣಿ ತಿರುಗಾಡಿ…ಅಭಿಪ್ರಾಯ ಕೇಳುತ್ತಿದ್ದಳು. ಈಗ ಮದ್ರಾಮಣ್ಣ- ಬಂಡೇಸಿ ಕುರ್ಚಿ ಸಲುವಾಗಿ ನೀವೇನಂತೀರಿ…? ನೀವು ಯಾರಕಡೆ…? ಎಂದು ಕೇಳಲು ಮುಂದಾದಳು ಇಲ್ಲಿಂದಲೇ ಶುರುವಾಗಿಬಿಡಲಿ ಎಂದು ಆಕೆ ಸೀದಾ ಪಂ. ಲೇವೇಗೌಡರಕಡೆ ಹೋಗಿ..ನೀವೇನಂತೀರಿ? ಅಂದಳು.

ಅದಕ್ಕೆ ಅವರು…ನಾ ಏನ ಹೇಳು…ಈ ಕಡೆ ಹೊರಳಿದರೆ ಲೇವಣ್ಣಾ ಅಂತೀನಿ…ಆ ಕಡೆ ಹೊರಳಿದರೆ ಸುಮಾರಣ್ಣಾ ಅಂತೀನಿ…ಎದುರಿಗೇ ನೋಡಿದರೆ…ಕಿಕಿಲ್ ಕೂಸೂ ಅಂತೀನಿ…ಇದಕ್ಕಿಂತ ಏನನ್ನಲಿ? ಅಂದರು. ಇನ್ನು ನಾನು ಸೋದಿ ಮಾಮೋರ ಕಡೆ ಅಂದರು. ಅಲ್ಲಿಂದ ಬಂದ ಆಕೆ ಕನ್ನಾಳಲ್ಲನ ಕಡೆ ಹೋಗಿ…ಏನಂತೀರಿ? ಅಂದಳು..

ಏನರ ಅಂದರೆ ಯಾರಾದರೂ ಸುಮ್ಮ ಇರ್ತಾರಾ? ಅಂದ. ಹೋಗಲಿ ನೀವು ಯಾರ ಕಡೆ ಅಂದಳು. ಅದಕ್ಕೆ ಆತ ತಲೆಕೆರೆದುಕ ಕೊಳ್ಳುತ್ತ…ನಾನು…ನಿನ್ನ ಕಡೆಯಂತೂ ಅಲ್ಲ ಅಂದ…ಅಯ್ಯಾ ಇವನ ಅಂತ ಸಿಟ್ಟೂರಪ್ಪನ ಕಡೆ ಹೋಗಿ…ಸಾರ್ ಏನಂತೀರಿ ಅಂದಳು…ಏನಾರ ಅನ್ನಬೇಕು ಅಂದರೆ ಆ ಗುತ್ನಾಳ್ ಗೆ ಅನ್ನಬೇಕು…ನಾ ಒಂದು ಅಂದರೆ ಅವನು ನೂರು ಅಂತಾನೆ….ಸುಮ್ಮೆ ಯಾಕಿದ್ದೀತು? ಅಂತ ಸುಮ್ಮೇ ಇದ್ದೀನಿ ನೋಡಿ ಅಂತ ಅಂದರು…

ಹೋಗಲಿ ನೀವು ಯಾರ ಕಡೆ ಅಂದರೆ..ನಾನು ಗುಜೇಂದ್ರನ ಕಡೆ ನೋಡಮ್ಮ ಅಂತ ಅಂದರು..ನಂತರ ಮೇಕಪ್ ಮರೆಮ್ಮ ಬಂದು…ನಾನು ನಮ್ಮೆಜಮಾನರ ಕಡೆ ಅಂದಳು…ಕರಿ ಭಾಗೀರತಿ ನಾ ಏನೂ ಅನ್ನಂಗಿಲ್ಲ ಅಂದಳು…ದನದ ಗೌರವ್ವ ನಾನು ಹುಚ್ಚುಲುಗನ ಕಡೆ ಅಂದಳು…ಇಷ್ಟಕ್ಕೆ ತಲೆ ಚಿಟ್ಟು ಹಿಡಿಸಿಕೊಂಡ ಕಿವುಡನುಮಿ..ನಾ ಕೇಳಿದ್ದು..

ಮದ್ರಾಮಣ್ಣನ ಕಡೆಯೋ? ಬಂಡೇಸಿ ಕಡೆಯೋ ಅಂತ ಕೇಳಿದರೆ.. ಇವರು ಏನೇನೋ ಅನ್ನುತ್ತಿದ್ದಾರೆ….ಭಾನುವಾರದ ವರೆಗೆ ಏನೂ ಮಾತಾಡಲ್ಲ ಎಂದು ಬಯಲನುಮಪ್ಪನ ಮುಂದೆ ಆಣೆ ಮಾಡಿದಳು.

LEAVE A REPLY

Please enter your comment!
Please enter your name here