Home Advertisement
Home ಅಪರಾಧ ಸರಣಿ ಅಪಘಾತ: ಇಬ್ಬರ ಸಾವು-ಹಲವರಿಗೆ ಗಾಯ

ಸರಣಿ ಅಪಘಾತ: ಇಬ್ಬರ ಸಾವು-ಹಲವರಿಗೆ ಗಾಯ

0
169
accident

ಬೆಳಗಾವಿ: ಧಾರವಾಡದಿಂದ ಸವದತ್ತಿ ಕಡೆಗೆ ಬರುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸವದತ್ತಿ ಎಪಿಎಂಸಿ ಬಳಿ ಲಾರಿ, ಕಾರು, ಬೈಕ್ ಮತ್ತು ಆಟೋಗಳ ನಡುವೆ ಸರಣಿ ಅಪಘಾತ ನಡೆದಿದ್ದು, ಘಟನೆಯಲ್ಲಿ ಸವದತ್ತಿ ತಾಲೂಕಿನ ಕುರವಿನಕೊಪ್ಪ ಗ್ರಾಮದ ಬೈಕ್ ಸವಾರ ಸೋಮಲಿಂಗ ಹೂಗಾರ (33), ಸವದತ್ತಿ ತಾಲೂಕಿನ ಮದಿಗೇರಿ ಗ್ರಾಮದ ಕಾರ್ತಿಕ್ ಕುರಬಗಟ್ಟಿ (9) ಮೃತಟ್ಟಿದ್ದಾರೆ. ಬೈಕ್ ಮೇಲಿದ್ದ ಇನ್ನಿಬ್ಬರಾದ ಮಂಜುಳಾ ಕುರಬಗಟ್ಟಿ (36), ಮಲ್ಲವ್ವ ಕುರಬಗಟ್ಟಿ (11) ತೀವ್ರ ಗಾಯಗೊಂಡಿದ್ದು ಆಸ್ಪತ್ರೆ ಗೆ ದಾಖಲಿಸಲಾಗಿದೆ. ಸವದತ್ತಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.