ತಾರಾತಿಗಡಿ: ತೆಂಗಿನಕಾಯಿ ವ್ಯಾಪಾರಿ ಹಲ್ಟಿರ್ ಹಾಕೇಸಿ ಯಾವತ್ತೂ ಕೂತು ವ್ಯಾಪಾರ ಮಾಡಿದವನಲ್ಲ…ಟೆಂತ್ ಫೇಲಾಗಿ ಊರಲ್ಲಿ ಅಡ್ಡಾಡುತ್ತಿದ್ದ.. ಯಂಕೋಬಿ ಊರೂರು ಅಡ್ಡಾಡಿ ತೆಂಗಿನಕಾಯಿ ತಂದು ಸ್ವಲ್ಪ ಹೆಚ್ಚಿನ ದರಕ್ಕೆ ಮಾರಿ ಜೀವನ ಸಾಗಿಸುತ್ತಿದ್ದ. ಹಲ್ಲೀರ ಅವನ ಲಾಭ ನೋಡಿ ಸಹಿಸಲು ಆದಂತಹ ಹೊಟ್ಟೆ ಉರಿ ಮಾಡಿಕೊಂಡು ಹಿಂದಿನಿಂದ ಅವರಿವರಿಗೆ ಚುಚ್ಚಿ ಆತನ ಅಂಗಡಿ ಖಾಲಿ ಮಾಡಿಸಿ..
ತಾನು ಅದೇ ಜಾಗದಲ್ಲಿ ಅಂಗಡಿ ಇಟ್ಟ. ಚಹದ ಅಂಗಡಿ ಅಲ್ಲೇ ಇದ್ದುದರಿಂದ ಊರವರೆಲ್ಲ ಅಲ್ಲಿಗೆ ಚಹ ಕುಡಿಯಲು ಬರುತ್ತಿದ್ದರು. ಅವರು ಕರೆಯಲಿ ಬಿಡಲಿ ಅವರ ಹಿಂದೆ ಹೋಗಿ ಚಹ ಕುಡಿದು ಬಿಲನು ಅವರಿಗೆ ಅಂಬರಿಸಿ ಬರುತಿದ. ಇದು ಆತನಿಗೆ ರೂಡಿ ಆಗಿತು. ಬರೀ ಇಂಥದ್ದೇ ಮಾಡುತ್ತಿದ್ದ ಆತನ ಅಂಗಡಿ ಅಷ್ಟಕ್ಕಷ್ಟೆ ನಡೆಯುತ್ತಿತ್ತು.
ಆತನ ದೋಸ್ತ್ ಕೆಂಪ್ಯಾ ಅದೂ ಅಂಥದ್ದೇ ಗಿರಾಕಿ. ಅಂಗಡಿ ಸರಿಯಾಗಿ ನಡೆಯಲು ಏನು ಮಾಡಬೇಕು ಎಂದು ಕೇಳಿದಾಗ ಕೆಂಪ್ಯಾ..ನಿನ್ನ ಅಂಗಡಿ ನಡೀತಾ ಇಲ್ವ? ನೋಡೂ ಈಗ ಹೆಂಗಿದ್ದರೂ ಮದ್ರಾಮಣ್ಣ..ಬಂಡೇಸಿ ನಡುವೆ ಕುರ್ಚಿ ಲಫಡಾ ನಡದಿದೆ….ತೆಂಗಿನ ಕಾಯಿ ಒಡೆಸಿದರೆ ಕುರ್ಚಿ ಗ್ಯಾರಂಟಿ ಎಂದು ಹೇಳು ಆಗ ನೋಡು ವ್ಯಾಪಾರ ಅಂದ.
ಮರುದಿನವೇ ಕರಿಲಕ್ಷುಂಪತಿ ಕಡಗ ಹೋಗಿ ಹಿಂಗಿಂಗೆ ಭವಿಷ್ಯ ಹೇಳು ಅಂತ ಹೇಳಿಕೊಟ್ಟ, ಕರಿಲಕ್ಷಾಂಪತಿಯು ಇಬ್ಬರ ಗ್ಯಾಂಗಿಗೂ ಜೋಡು ಗಾಯಿ ಒಡೀರಿ..ನಿಮ್ಮ ಬಾಸ್ ಗೆ ಕುರ್ಚಿ ಪಡೆಯಿರಿ ಎಂದು ಭವಿಷ್ಯ ಹೇಳಿದ. ಮರುದಿನದಿಂದಲೇ ಐದು…ಹತ್ತು…ಐವತ್ತು…ನೂರು ಹೀಗೆ ಕಾಂಪಿಟೇಷನ್ ಮೇಲೆ ಕಾಯಿ ಒಡೆಯ ತೊಡಗಿದರು.
ಹಲ್ಟಿರನ ಕಾಯಿ ವ್ಯಾಪಾರವೂ ಹೆಚ್ಚಿಗೆ ಆಗ ತೊಡಗಿತು…ಇಬ್ಬರ ಗ್ಯಾಂಗಿನವರೂ ಬಂದಾಗ ಹಲ್ಮೀರ ಉದ್ರಿ ಕೊಡತೊಡಗಿದ. ಕಾಂಪಿಟೇಷನ್ ಮೇಲೆ ಎರಡೂ ಗ್ಯಾಂಗಿನವರು ಉದ್ರಿ ಒಯ್ದು ಲೆಕ್ಕ ಹಚ್ಚೇ ಅನ್ನ ತೊಡಗಿದರು. ಹಲ್ಮೀರ ಭಯಂಕರ ಖುಷಿ ಆದ. ಹಲ್ಟಿರನ ಕಡೆಯಿಂದ ಮೊದಲು ಮೋಸ ಹೋಗಿದ್ದನಲ್ಲ ಯಂಕೋಬಿ…
ಅವನು ಕರಿಲಕ್ಷಾಂಪತಿಯ ಹತ್ತಿರ ಹೋಗಿ ಡಬಲ್ ದಕ್ಷಿಣೆ ಕೊಟ್ಟು… ಉದ್ರಿ ತೆಂಗಿನಕಾಯಿ ಒಯ್ದವರಿಗೆ ಹಿಂಗಿಂಗೆ ಹೇಳು ಅಂದ. ಕರಿಲಕ್ಷುಂಪತಿ ಎರಡೂ ಗ್ಯಾಂಗಿನವರಿಗೆ ಪ್ರತ್ಯೇಕವಾಗಿ ಕರೆಯಿಸಿ…ನೋಡ್ರಪಾ ಬುಧ..ಕೇತು ಒಂದೇ ಕಡೆ ಇದಾರೆ…ನೀವು ಮಾಡಿದ ಉದ್ರಿ ರೊಕ್ಕಕೊಟ್ಟಿರಿ ಅಂದರೆ ಕುರ್ಚಿ ಹೋಗುತ್ತ ಹುಷಾರ್…
ಎಂದು ಹೇಳಿದ. ಅಷ್ಟರಲ್ಲಿ ಹಲ್ಟಿರನ ಕಿಸೆಯಲ್ಲಿ ರೊಕ್ಕ ಖಾಲಿ ಆಯಿತು..ತೆಂಗಿನಕಾಯಿ ಉದ್ರಿ ಇಸಿದುಕೊಂಡವರಿಗೆ ಹಣ ಕೊಡಿ ಅಂದ…ಹೋಗಲೇ ಹಲ್ಮೀರ…ನಿಂಗ ರೊಕ್ಕ ಕೊಟ್ಟರೆ ಕುರ್ಚಿ ಹುಸಿ ಹೋಗುತ್ತೆ ಅಂತ ಹೇಳಿ ಬಂಬ್ಬಾ ತೋರಿಸಿದರು..ಎಲ್ಲ ಲಾಸ್ ಆಗಿ ಹಲ್ಲೀರ ಅಂಗಡಿ ಬಂದ್ ಮಾಡಿದ. ಯಂಕೋಬಿ ಮೂಲೆಯಲ್ಲಿ ನಿಂತು ಮುಸಿ ಮುಸಿ ನಗತೊಡಗಿದ.
























