ಐಪಿಎಲ್‌ ಪಂದ್ಯಗಳಿಗೆ ವಿದಾಯ ಘೋಷಿಸಿದ ಆರ್‌.ಅಶ್ವಿನ್‌

0
66

ಐಪಿಎಲ್ ಪಂದ್ಯಾವಳಿಗಳಿಗೆ ಸ್ಪಿನ್ನರ್ ಆರ್‌.ಅಶ್ವಿನ್‌ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಶ್ವಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದರು.

ಅನಿಲ್ ಕುಂಬ್ಳೆ ನಂತರ ಟೆಸ್ಟ್ ನಲ್ಲಿ 500 ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿರುವ ಆರ್.ಅಶ್ವಿನ್ ಬುಧವಾರ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಐಪಿಎಲ್ ಪಂದ್ಯಾವಳಿಗಳಿಗೆ ವಿದಾಯ ಘೋಷಣೆ ಮಾಡಿದ್ದಾರೆ.

ಆರ್‌.ಅಶ್ವಿನ್‌ ತಮ್ಮ ಪೋಸ್ಟ್‌ನಲ್ಲಿ

‘ವಿಶೇಷ ದಿನ ಮತ್ತು ಆದ್ದರಿಂದ ವಿಶೇಷ ಆರಂಭ. ಪ್ರತಿಯೊಂದು ಅಂತ್ಯಕ್ಕೂ ಹೊಸ ಆರಂಭವಿರುತ್ತದೆ ಎಂದು ಅವರು ಹೇಳುತ್ತಾರೆ, ಐಪಿಎಲ್ ಕ್ರಿಕೆಟಿಗನಾಗಿ ನನ್ನ ಸಮಯ ಇಂದು ಮುಕ್ತಾಯಗೊಳ್ಳುತ್ತದೆ, ಆದರೆ ವಿವಿಧ ಲೀಗ್‌ಗಳ ಸುತ್ತಲಿನ ಆಟದ ಅನ್ವೇಷಕನಾಗಿ ನನ್ನ ಸಮಯ ಇಂದು ಪ್ರಾರಂಭವಾಗುತ್ತದೆ’ ಎಂದು ಹೇಳಿದ್ದಾರೆ.

‘ಇಷ್ಟು ವರ್ಷಗಳ ಎಲ್ಲಾ ಅದ್ಭುತ ನೆನಪುಗಳು ಮತ್ತು ಸಂಬಂಧಗಳಿಗಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಮತ್ತು ಮುಖ್ಯವಾಗಿ ಬಿಸಿಸಿಐಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನ್ನ ಮುಂದೆ ಇರುವುದನ್ನು ಆನಂದಿಸಲು ಮತ್ತು ಹೆಚ್ಚಿನದನ್ನು ಪಡೆಯಲು ಎದುರು ನೋಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ. cricketforlife ಎಂದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

221 ಐಪಿಎಲ್ ಪಂದ್ಯಾವಳಿಗಳನ್ನು ಆಡಿರುವ ಆರ್‌.ಅಶ್ವಿನ್‌ ತಮ್ಮ ಸ್ಪಿನ್ ಮೋಡಿಯ ಮೂಲಕ 187 ವಿಕೆಟ್ ಪಡೆದಿದ್ದರು. ಆರ್‌.ಅಶ್ವಿನ್‌ 5 ತಂಡಗಳ ಪರವಾಗಿ ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಚೆನ್ನೈ, ಪಂಜಾಬ್, ದೆಹಲಿ, ರಾಜಸ್ಥಾನ್ ರಾಯಲ್ಸ್ ಮತ್ತು ಪುಣೆ ತಂಡಗಳನ್ನು ಅವರು ಪ್ರತಿನಿಧಿಸಿದ್ದರು.

ಐಪಿಎಲ್ ಪಂದ್ಯಾವಳಿಗಳಲ್ಲಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಆರ್‌.ಅಶ್ವಿನ್‌ 5ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಚಾಹಲ್, ಭುವನೇಶ್ವರ ಕುಮಾರ್, ಸುನೀಲ್ ನರೇನ್, ಪಿಯೂಷ್ ಚಾವ್ಲಾ ಇದ್ದಾರೆ.

2025ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈನಲ್ಲಿ ಕೊನೆಯ ಪಂದ್ಯವನ್ನು ಆಡಿದ ಆರ್‌.ಅಶ್ವಿನ್‌ 33 ರನ್ ನೀಡಿ 7 ವಿಕೆಟ್ ಪಡೆದಿದ್ದರು. 2025ರ ಆವೃತ್ತಿ ವೇಳೆಯಲ್ಲಿ ಚೆನ್ನೈ ತಂಡ 9.75 ಕೋಟಿ ರೂ. ನೀಡಿದ ಆರ್‌.ಅಶ್ವಿನ್‌ ಖರೀದಿ ಮಾಡಿತ್ತು.

2026ರ ಐಪಿಎಲ್ ಪಂದ್ಯಾವಳಿಯ ಸಮಯದಲ್ಲಿ ಫ್ರಾಂಚೈಸಿಗಳಿಂದ ನಾನು ಸ್ಪಷ್ಟನೆಗಳನ್ನು ಬಯಸುತ್ತೇನೆ ಎಂದು ಆರ್‌.ಅಶ್ವಿನ್‌ ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ಬುಧವಾರ ದಿಢೀರ್ ನಿವೃತ್ತಿ ಘೋಷಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಆರ್‌.ಅಶ್ವಿನ್‌ ಕೆಲವು ದಿನಗಳ ಹಿಂದೆ ಯೂಟ್ಯೂಬ್ ಸಂದರ್ಶನದಲ್ಲಿ, “ನಾನು ಆರ್‌ಆರ್‌ಗಾಗಿ ಮೂರು ವರ್ಷ ಆಡಿದ್ದೇನೆ. ನನ್ನ ಮೊದಲ ವರ್ಷದ ನಂತರ, ಸಿಇಒ ಅವರಿಂದ ನನಗೆ ಇ-ಮೇಲ್ ಬಂದಿತು, ನಿಮ್ಮ ಪ್ರದರ್ಶನ, ನಮ್ಮ ನಿರೀಕ್ಷೆಯಂತೆ ಇದೆ ಮತ್ತು ನಾವು ನಿಮ್ಮ ಒಪ್ಪಂದವನ್ನು ನವೀಕರಿಸುತ್ತಿದ್ದೇವೆ. ಪ್ರತಿ ಐಪಿಎಲ್ ಋತುವಿನ ನಂತರ, ಆಟಗಾರನನ್ನು ಉಳಿಸಿಕೊಳ್ಳುವ ಅಥವಾ ಬಿಡುಗಡೆ ಮಾಡುವ ಬಗ್ಗೆ ಅವರಿಗೆ ತಿಳಿಸುವುದು ಫ್ರಾಂಚೈಸಿಯ ಜವಾಬ್ದಾರಿಯಾಗಿದೆ” ಎಂದು ಹೇಳಿದ್ದರು.

Previous articleIndian Navy: ನೌಕಾಪಡೆಗೆ ಇನ್ನೆರಡು ಸ್ವದೇಶಿ ನೌಕೆಗಳ ಸೇರ್ಪಡೆ
Next articleಸಂಪಾದಕೀಯ: ಸಿಎಜಿ ಗ್ಯಾರಂಟಿ ತಕರಾರಿಗೆ ನಿರ್ಲಕ್ಷ್ಯ ಧೋರಣೆ ಸರಿಯಲ್ಲ

LEAVE A REPLY

Please enter your comment!
Please enter your name here