ದಸರಾ 2025 ಹಿನ್ನಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟವನ್ನು ಸೆಪ್ಟೆಂಬರ್ 11 ಮತ್ತು 12ರಂದು ಕಂಠೀರವ ಕ್ರೀಡಾಂಗಣ ಮತ್ತು ಅಕ್ಕಿ ತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಕ್ರೀಡಾಕೂಟವು ಯಾವುದೇ ವಯೋಮಿತಿ ನಿರ್ಬಂಧವಿಲ್ಲದೆ ಮುಕ್ತವಾಗಿದ್ದು, ಎಲ್ಲಾ ವಯೋಮಿತಿಯ ಪುರುಷ ಮತ್ತು ಮಹಿಳೆಯರು ಭಾಗವಹಿಸಬಹುದಾಗಿದೆ. ಕ್ರೀಡೆಗಳಲ್ಲಿ ವಿಜೇತರಿಗೆ ಪ್ರಮಾಣ ಪತ್ರ, ಮೆಡಲ್ಸ್ ಮತ್ತು ಟ್ರೋಫಿ ನೀಡಲಾಗುವುದು. ಇಲ್ಲಿ ವಿಜೇತರಾದವರನ್ನು ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಕಳಿಸಲಾಗುತ್ತದೆ.
ಯಾವ-ಯಾವ ಕ್ರೀಡೆಗಳು: ವಿಭಾಗ ಮಟ್ಟದ ದಸರಾ ಕ್ರಿಡಾಕೂಟದಲ್ಲಿ ಅಥ್ಲೆಟಿಕ್ಸ್, ಯೋಗ, ಜೂಡೋ, ಭಾರ ಎತ್ತುವಿಕೆ, ವುಷು, ಬಾಕ್ಸಿಂಗ್, ಟೆಕ್ಸಾಂಡೋ ಟೆನ್ನಿಸ್, ಕುಸ್ತಿ, ಈಜು, ಟೇಬಲ್ ಟೆನ್ನಿಸ್, ಬಾಡ್ಮಿಂಟನ್, ವಾಲಿಬಾಲ್, ಬಾಸ್ಕೆಟ್ ಬಾಲ್, ಫುಟ್ಬಾಲ್, ಹ್ಯಾಂಡ್ ಬಾಲ್ , ಥ್ರೋಬಾಲ್, ಬಾಲ್ ಬಾಡ್ಮಿಂಟನ್ , ಕಬ್ಬಡಿ, ಖೋ-ಖೋ ನೆಟ್ ಬಾಲ್, ಹಾಕಿ ಆರ್ಚರಿ , ಪೆನ್ಸಿಂಗ್, ಜಿಮ್ಯಾಸ್ಟಿಕ್, ಈಜು ಸ್ಪರ್ಧೆಗಳು ನಡೆಯಲಿವೆ.
ಭಾಗವಹಿಸುವವರು ತಮ್ಮ ಗುರುತಿನ ಚೀಟಿಯೊಂದಿಗೆ ಪಥಸಂಚಲನಕ್ಕಾಗಿ ಕ್ರೀಡಾಪಟುಗಳು ತಮ್ಮ ಕಾಲೇಜು, ಸಂಘ, ಸಂಸ್ಥೆಗಳ ಬಾವುಟವನ್ನು ತರಬೇಕು ಹಾಗೂ ಸೆ. 11ರಂದು ಬೆಳಗ್ಗೆ 9ರೊಳಗೆ ಕಂಠೀರವ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು.
ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳನ್ನು ಆನ್‌ಲೈನ್ ಮೂಲಕ ಮೊಬೈಲ್ ಆಫ್/ ವೆಬ್ ಪೋರ್ಟಲ್ ನೋಂದಾವಣೆ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 080-22239771, 7204266766 ಮೂಲಕ ಸಂಪರ್ಕಿಸಲು ಕೋರಿದೆ.