ಭಾನುವಾರ (ಸೆ.14) ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಕದನಕ್ಕೆ ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಮಹತ್ವದ ಪಂದ್ಯ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿ, ಅಭಿಮಾನಿಗಳ ನಡುವಿನ ಕಿಚ್ಚು ಹೆಚ್ಚಾಗಿದೆ.
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು, ಸಂಜು ಸ್ಯಾಮ್ಸನ್, ಕುಲದೀಪ್ ಯಾದವ್ ಅವರಂತಹ ಅನುಭವಿ ಮತ್ತು ಶುಭಮನ್ ಗಿಲ್ ,ಅಭಿಷೇಕ್ ಶರ್ಮಾ ಅವರಂತಹ ಯುವ ಆಟಗಾರರೊಂದಿಗೆ ಬಲಿಷ್ಠವಾಗಿ ಕಾಣುತ್ತಿದೆ.
ಇತ್ತ ಸಲ್ಮಾನ್ ಅಘಾ ನಾಯಕತ್ವದ ಪಾಕಿಸ್ತಾನ ತಂಡವು ಮೊಹಮ್ಮದ್ ಹ್ಯಾರಿಸ್ ಒಳಗೂಂಡಂತೆ ಶಾಹಿನ್ ಆಫ್ರಿದಿ ಮೂಲಕ ಭಾರತದ ಬ್ಯಾಟಿಂಗ್‌ಗೆ ಸವಾಲು ಒಡ್ಡಲು ಸಜ್ಜಾಗಿದೆ. ಪಾಕಿಸ್ತಾನ ತಂಡವು ಒಮಾನ್ ವಿರುದ್ದ ಮೊದಲ ಜಯಗಳಿಸಿ ಉತ್ಸಾಹದಲ್ಲಿದೆ. ಭಾರತ ಯುಎಇ ವಿರುದ್ಧ 9 ವಿಕೆಟ್‌ಗಳ ಜಯ ಗಳಿಸಿ ಭಾನುವಾರವೂ ಗೆಲ್ಲುವ ಭರವಸೆಯಲ್ಲಿದೆ.
ಉಭಯ ತಂಡಗಳ ಆಟಗಾರರ ವೈಯಕ್ತಿಕ ಪ್ರದರ್ಶನಗಳು ಮತ್ತು ತಂಡದ ಒಗ್ಗಟ್ಟು ಈ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಿದೆ. ಭಾನುವಾರ ನಡೆಯಲಿರುವ ಈ ರೋಚಕ ಕದನ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಯಾರು ಗೆಲ್ಲುತ್ತಾರೆ? ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು. ಆದರೆ ಒಂದು ವಿಷಯ ಖಚಿತ ಕ್ರಿಕೆಟ್ ಅಭಿಮಾನಿಗಳಿಗೆ ಸಂಪೂರ್ಣ ಮನರಂಜನೆ ವಾರಾಂತ್ಯದಲ್ಲಿ ಸಿಗಲಿದೆ.
ಏಷ್ಯಾ ಕಪ್ ಪಂದ್ಯಾವಳಿಯನ್ನು ಭಾರತದಲ್ಲಿ ಸೋನಿ ಗ್ರೂಪ್ ಚಾನೆಲ್‌ಗಳು ಪ್ರಸಾರ ಮಾಡುತ್ತಿವೆ. ಇದನ್ನು ಸೋನಿ ಸ್ಪೋರ್ಟ್ಸ್ 1, ಸೋನಿ ಸ್ಪೋರ್ಟ್ಸ್ 1 HD, ಸೋನಿ ಸ್ಪೋರ್ಟ್ಸ್ 5, ಸೋನಿ ಸ್ಪೋರ್ಟ್ಸ್ 5 HD ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಅದೇ ರೀತಿ, ಪ್ರಾದೇಶಿಕ ಭಾಷೆಗಳಲ್ಲಿ ಪಂದ್ಯಗಳನ್ನು ವೀಕ್ಷಿಸಲು ಬಯಸುವವರು ಸೋನಿ ಸ್ಪೋರ್ಟ್ಸ್ 3 (ಹಿಂದಿ), ಸೋನಿ ಸ್ಪೋರ್ಟ್ಸ್ 3 HD (ಹಿಂದಿ), ಸೋನಿ ಸ್ಪೋರ್ಟ್ಸ್ 4 (ತಮಿಳು, ತೆಲುಗು) ಸಂಜೆ 7 ಗಂಟೆಯಿಂದ ವೀಕ್ಷಿಸಬಹುದು.
ಭಾರತ ತಂಡದ ಆಡುವ ಬಳಗದಲ್ಲಿ ಗೊಂದಲ: ನಾಳೆ ಏಷ್ಯಾಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡ ಆಡು ಹನ್ನೊಂದರ ಬಳಗವನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಯಾವ ಕ್ರಮಾಂಕದಲ್ಲಿ ಆಡಬೇಕು ಎನ್ನುವುದು ಚರ್ಚೆಯ ವಿಷಯವಾಗಿದೆ.
ಪಂದ್ಯದಲ್ಲಿ ಸಂಜು ಅವರನ್ನು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸದೇ ವಿಶ್ರಾಂತಿ ನೀಡಲಾಗಿತ್ತು. ಓಪನರ್ ಅಭಿಷೇಕ್ ಶರ್ಮಾ ಔಟ್ ಆದಾಗ ಮೂರನೇ ಕ್ರಮಾಂಕದಲ್ಲಿ ನಾಯಕ ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗ್ ಮಾಡಿದ್ದರು. ಹೀಗಾಗಿ ಸಂಜು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕೆನ್ನುವುದು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕಾರ್, ಟಿ20 ಆವೃತ್ತಿಯಲ್ಲಿ ಅಂಕಿ ಅಂಶ ಮುಖ್ಯವಾಗುತ್ತದೆ. ಹೀಗಾಗಿ ಸಂಜು ಮೂರನೇ ಕ್ರಮಾಂಕದಲ್ಲಿ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಂಜು ಆರಂಬಿಕನಾಗಿ ಅಥವಾ ಮೂರನೇ ಕ್ರಮಾಂಕದಲ್ಲಿ ಪರಿಣಾಮಕಾರಿಯಾಗಿ ಬ್ಯಾಟಿಂಗ್ ಮಾಡಿಲ್ಲ. ಒಂದು ವೇಳೆ ಸಂಜು ಆರಂಭಿಕನಾಗಿ ಕಣಕ್ಕಿಳಿದರೆ ತಿಲಕ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ.
ಕಳೆದ ಕೆಲವು ವರ್ಷಗಳಿಂದ ಸೂಂರ್ಯ ಕುಮಾರ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು ಯಶಸ್ಸು ಕಂಡಿದ್ದಾರೆ. ಸಂಜು ನಾಲ್ಕನೆ ಕ್ರಮಾಂಕದಲ್ಲಿ 11 ಇನ್ನಿಂಗ್ಸ್‌ಗಳಿಂದ 164 ರನ್ ಗಳಿಸಿ ಕೆಳಗಿನ ಕ್ರಮಾಂಕದಲ್ಲಿ ಯಶಸ್ಸು ಕಂಡಿದ್ದಾರೆ. ಇನ್ನು ಯುವ ಬ್ಯಾಟರ್ ತಿಲಕ್ 13 ಇನ್ನಿಂಗ್ಸ್‌ಗಳಿಂದ 443 ರನ್‌ಗಳಿಸಿದ್ದಾರೆ.