Home Advertisement
Home ಕ್ರೀಡೆ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ರಾಯಭಾರಿಯಾಗಿ ಕಂಗನಾ ರನೌತ್

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ರಾಯಭಾರಿಯಾಗಿ ಕಂಗನಾ ರನೌತ್

0
117

ನವದೆಹಲಿ: 2025 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ನಟಿ ಹಾಗೂ ಸಂಸದೆ ಕಂಗನಾ ರನೌತ್ ಅವರು ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನಟಿ ಕಂಗನಾ ರನೌತ್ ಪೋಸ್ಟ್‌ ಮಾಡಿದ್ದಾರೆ, ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಆಯೋಜನೆಗೊಂಡಿದ್ದು,ಭಾರತದ ಪ್ಯಾರಾ ಅಥ್ಲೆಟ್‌ಗಳು ಛಲ ಹಾಗೂ ಆತ್ಮವಿಶ್ವಾಸದಿಂದ ಪ್ರತಿದಿನವೂ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಇವರನ್ನು ಬೆಂಬಲಿಸುವ ಹಾಗೂ ಅವರ ಅದ್ಭುತ ಸಾಧನೆಯ ಕುರಿತು ಜಾಗೃತಿ ಮೂಡಿಸುವ ಗೌರವ ನನಗೆ ಲಭಿಸಿದ್ದು ಸಂತೋಷ ತಂದಿದೆ. ಪ್ಯಾರಾ ಕ್ರೀಡೆಯು ಕೇವಲ ಒಂದು ಸ್ಪರ್ಧೆಯಲ್ಲ, ಇದು ಧೈರ್ಯದ ಸಂಕೇತ. ನಮ್ಮ ಚಾಂಪಿಯನ್‌ಗಳ ಬೆನ್ನಿಗೆ ನಿಲ್ಲುವ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ’ ಎಂದಿದ್ದಾರೆ. 2025ರ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ದೆಹಲಿಯಲ್ಲಿ ಆಯೋಜನೆಗೊಂಡಿದೆ ಸೆ. 26ರಿಂದ ಅ. 5ರವರೆಗೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಸುಮಾರು ನೂರು ದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

Previous articleನಿಪ್ಪಾಣಿಯ ನಿಸ್ವಾರ್ಥ ನಾಯಕನ ನಿಶ್ಶಬ್ದ ನಿರ್ಗಮನ
Next articleಮೆಟ್ರೋ 10 ರಲ್ಲಿ 8 ಕೆಎಂಎಫ್ ಮಳಿಗೆ