ಲಡಾಕ್ ಪ್ರವಾಸದಲ್ಲಿ ರಾಹುಲ್ ಗಾಂಧಿ

0
9

ಲಡಾಕ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಪ್ಯಾಂಗೊಂಗ್ ಸರೋವರಕ್ಕೆ ಬೈಕ್ ನಲ್ಲಿ ಹೋಗುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ರಾಹುಲ್ ಗಾಂಧಿ ಬೈಕ್ ಓಡಿಸುತ್ತಿರುವ ಚಿತ್ರಗಳನ್ನು ಕಾಂಗ್ರೆಸ್ ತನ್ನ ಅಧಿಕೃತ ಟ್ವೀಟ್‌ರನಲ್ಲಿ ಹಂಚಿಕೊಂಡಿದೆ. ಕೆಲವು ಚಿತ್ರಗಳನ್ನು ರಾಹುಲ್ ಗಾಂಧಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಇನ್‌ಸ್ಟಾಗ್ರಾಮ್‌ನಲ್ಲಿ, “ಪ್ಯಾಂಗಾಂಗ್ ಸರೋವರ ಇದು ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ ಎಂದು ನಮ್ಮ ತಂದೆ ಹೇಳುತ್ತಿದ್ದರು, ಈಗ ಪ್ಯಾಂಗಾಂಗ್ ಸರೋವರದತ್ತ ನನ್ನ ಪಯಣ” ಎಂದು ಬರೆದು ಕೊಂಡಿದ್ದಾರೆ.

Previous articleನಿಮ್ಮ ಪೊಲೀಸ್ ಕಮೀಷನರ್‌: ಲೈವ್ ಚಾಟ್‌ನಲ್ಲಿ
Next articleಮಹಾದಾಯಿಗಾಗಿ ರೈತರ ಪ್ರತಿಭಟನೆ