ಬರ ಪರಿಶೀಲನೆಗೆ ‘ವರುಣನ ಅಡ್ಡಿ’

0
29
ಲಾಡ್

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬರ ಪರಿಶೀಲನೆಗೆ ತೆರಳಿದ ಸಚಿವ ಸಂತೋಷ ಲಾಡ್ ಅವರಿಗೆ ವರುಣ ಅದ್ದೂರಿ ಸ್ವಾಗತ ಕೋರಿದ್ದಾನೆ.
ಪರ ಪರಿಶೀಲೆನೆಗೆಂದು ಹುಬ್ಬಳ್ಳಿ ತಾಲೂಕಿನ ಕುಸುಗಲ್ಲ ಗ್ರಾಮಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ ನೀಡಿದ್ದ ವೇಳೆ ಒಂದು ತಾಸಿಗೂ ಅಧಕ ಕಾಲ ಧಾರಾಕಾರ ಮಳೆ ಸುರಿಯಿತು.
ಧಾರಾಕಾರವಾಗಿ ಸುರಿದ ಮಳೆಯಿಂದ ಸಂತೋಷಗೊಂಡ ಲಾಡ್, ಇನ್ನೂ ಎರಡುಮೂರು ದಿನ ಮಳೆ ಹೀಗೆ ಇರಲಿ ಎಂದರು.
ಕುಸುಗಲ್ಲ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಠಿಕಾಣಿ ಹೂಡಿದ ಲಾಡ್ ಮಳೆ ನೋಡುತ್ತ ಗಿರ್ಮಿಟ್ ಸವಿದರು. ಶಾಸಕ ಎನ್.ಹೆಚ್. ಕೋನರಡ್ಡಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.
ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಬರ ವೀಕ್ಷಣೆ ರದ್ದು…

Previous articleನೀರಾವರಿ ಪಂಪ್‍ಸೆಟ್‍ಗಳಿಗೆ 7 ಗಂಟೆಗಳ ವಿದ್ಯುತ್ ಸರಬರಾಜು
Next articleಬರ ಪರಿಶೀಲನೆ ಮೊಟಕು: ರೈತರ ಅಹವಾಲು ಸ್ವೀಕರಿಸಿದ ಲಾಡ್