Home Advertisement
Home ಅಪರಾಧ ತುಂಗಾಭದ್ರಾಗೆ ಹಾರಲು ಯತ್ನಿಸಿದ ತಾಯಿ ಮಗು ರಕ್ಷಿಸಿದ ಹೊಯ್ಸಳ ತಂಡ

ತುಂಗಾಭದ್ರಾಗೆ ಹಾರಲು ಯತ್ನಿಸಿದ ತಾಯಿ ಮಗು ರಕ್ಷಿಸಿದ ಹೊಯ್ಸಳ ತಂಡ

0
179

ದಾವಣಗೆರೆ: ತುಂಗಾ ಭದ್ರಾ ನದಿಗೆ ಮಗುವಿನೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಮಹಿಳೆಯನ್ನು 112 ಹೊಯ್ಸಳ ಪೊಲೀಸ್ ತಂಡ ರಕ್ಷಿಸಿದೆ.

ಸೋಮವಾರ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತುಂಗಭದ್ರಾ ಸೇತುವೆ ಬಳಿ ಓರ್ವ ಮಹಿಳೆ ತನ್ನ ಮಗುವಿನೊಂದೊಂದಿಗೆ ತುಂಗಭದ್ರಾ ನದಿಗೆ ಹಾರಲು ಪ್ರಯತ್ನಿಸುತ್ತಿರುವುದು ಕಂಡು ಸ್ಥಳೀಯರೊಬ್ಬರು ಕೂಡಲೇ 112 ಕ್ಕೆ ಕರೆ ಮಾಡಿದಾಗ ಕೂಡಲೇ ಕಾರ್ಯಪ್ರವೃತ್ತರಾದ 112 ಹೊಯ್ಸಳ ಅಧಿಕಾರಿಗಳಾದ ಎ.ಎಸ್.ಐ ಅಶೋಕ ರೆಡ್ಡಿ ಹಾಗೂ ಹೊಯ್ಸಳ ವಾಹನ ಚಾಲಕರಾದ ಲೋಕೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತೆ ಹಾಗೂ ಮಗುವನ್ನು ರಕ್ಷಿಸಿದ್ದಾರೆ.

ಸಂತ್ರಸ್ತೆ ಹೊನ್ನಾಳಿ ತಾಲ್ಲೂಕಿನವರೇ ಆಗುದ್ದು, ಕೌಟುಂಬಿಕ ಕಲಹದಿಂದ ಮನನೊಂದು ತನ್ನ ಮಗುವಿನೊಂದಿಗೆ ನದಿಗೆ ಹಾರಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ. ಸಂತ್ರಸ್ತೆಗೆ ಹೊನ್ನಾಳಿ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಮಹಿಳೆಗೆ ಸಾಂತ್ವನ ಹೇಳಿ, ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.

Previous articleಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ನಾವಿನ್ಯತೆಯೇ ನೂತನ ಮಾರ್ಗ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Next articleಸೊಸೈಟಿ ಮ್ಯಾನೇಜರ್ ದೋಖಾ ಪ್ರಕರಣ: ಬಂಧನ