ಘಟಪ್ರಭಾ, ರಾಯಬಾಗ:  ರೈಲುಗಳ ಪ್ರಾಯೋಗಿಕ ನಿಲುಗಡೆ ಮುಂದುವರಿಕೆ

ಹುಬ್ಬಳ್ಳಿ : ಪ್ರಯಾಣಿಕರ ಅನುಕೂಲಕ್ಕಾಗಿ, ಘಟಪ್ರಭಾ ಮತ್ತು ರಾಯಬಾಗ ನಿಲ್ದಾಣಗಳಲ್ಲಿ ಈ ಕೆಳಗಿನ ರೈಲುಗಳ ಪ್ರಾಯೋಗಿಕ ನಿಲುಗಡೆಗಳನ್ನು ಮುಂದುವರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಈ ನಿಲುಗಡೆಗಳು ೨೦೨೫ರ ಜುಲೈ ೦೧ರಿಂದ ಈಗಿರುವ ಸಮಯಗಳೊಂದಿಗೆ ಜಾರಿಯಲ್ಲಿರುತ್ತವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಹುಬ್ಬಳ್ಳಿ – ಪುಣೆ -ಹುಬ್ಬಳ್ಳಿ (ರೈಲು ಸಂಖ್ಯೆ ೨೦೬೬೯/೨೦೬೭೦) ವಂದೇ ಭಾರತ್ ಎಕ್ಸ್ ಪ್ರೆಸ್ ಘಟಪ್ರಭಾ ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಸಲಿದೆ.
ಯಶವAತಪುರ – ಪಂಢರಪುರ – ಯಶವಂತಪುರ ವೀಕ್ಲಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ ೧೬೫೪೧/೧೬೫೪೨) ಘಟಪ್ರಭಾ ಮತ್ತು ರಾಯಬಾಗ ನಿಲ್ದಾಣಗಳಲ್ಲಿ ನಿಲುಗಡೆ ಮುಂದುವರಿಸಲಿದೆ.
ಅದೇ ರೀತಿ ಯಶವಂತಪುರ – ವಿಜಯಪುರ – ಯಶವಂತಪುರ ಎಕ್ಸ್ ಪ್ರೆಸ್ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ, ಯಶವಂತಪುರ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ ರೈಲುಗಳ (ಸಂಖ್ಯೆ ೦೬೫೪೫/೦೬೫೪೬) ಸಂಚಾರದ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
ಈ ಹಿಂದೆ ಜೂನ್ ೩೦, ೨೦೨೫ ರವರೆಗೆ ಮಾತ್ರ ಸಂಚರಿಸಲಿದೆ ಎಂದು ತಿಳಿಸಲಾಗಿದ್ದ ಯಶವಂತಪುರ -ವಿಜಯಪುರ ಎಕ್ಸ್ ಪ್ರೆಸ್ ವಿಶೇಷ ರೈಲು (ರೈಲು ಸಂಖ್ಯೆ ೦೬೫೪೫ ) ಈಗ ೨೦೨೫ರ ಜುಲೈ ೧ರಿಂದ ೨೦೨೫ರ ಡಿಸೆಂಬರ್ ೩೧ರವರೆಗೆ ಸಂಚಾರ ಮುಂದುವರಿಸಲಿದೆ.
ಅದೇ ರೀತಿ, ಜುಲೈ ೧, ೨೦೨೫ ರವರೆಗೆ ಓಡಾಟ ನಡೆಸುವುದಾಗಿ ಈ ಹಿಂದೆ ಸೂಚಿಸಲಾಗಿದ್ದ ವಿಜಯಪುರ – ಯಶವಂತಪುರ ಎಕ್ಸ್ ಪ್ರೆಸ್ ವಿಶೇಷ ರೈಲು ( ರೈಲು ಸಂಖ್ಯೆ ೦೬೫೪೬) ಈಗ ೨೦೨೫ರ ಜುಲೈ ೨ರಿಂದ ೨೦೨೬ರ ಜನವರಿ ೧ರವರೆಗೆ ವಿಸ್ತರಿಸಲ್ಪಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.