ಚಾಮರಾಜ ನಗರ: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ಸರ್ಕಾರ, ವಿದ್ಯುತ್ ನೀಡುವಲ್ಲಿ ವಿಫಲವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಚಾಮರಾಜನಗರದಲ್ಲಿ ಬರ ಅಧ್ಯಯನ ನಡೆಸಿರುವ ಶಾಸಕ ಬಸವನಗೌಡ ಯತ್ನಾಳ್ ಹೇಳಿದ್ದಾರೆ.
ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಮತಕ್ಷೇತ್ರದ ಸಂಸದರು, ಶಾಸಕರು, ಮುಖಂಡರೊಂದಿಗೆ ಬರ ಅಧ್ಯಯನ ತಂಡದ ನೇತೃತ್ವವನ್ನು ವಹಿಸಿರುವ ಅವರು ರೈತರೊಬ್ಬರು ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಳ್ಳೆಯ ಆದಾಯ ನೀಡುತ್ತಿದ್ದ ಹೂವಿನ ಬೆಳೆಯು, ವಿದ್ಯುತ್ ಕಡಿತದಿಂದ ನೀರುಣಿಸಲಾಗದೆ ಹಾಗೂ ಬರಗಾಲದಿಂದ ಹೂ ಪಡಗಳು ಒಣಗಿ, ಜೀವನ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಅಳಲು ತೋಡಿಕೊಂಡರು. ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ಸರ್ಕಾರ, ವಿದ್ಯುತ್ ನೀಡುವಲ್ಲಿ ವಿಫಲವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದರು.