ಎಲ್ಲಿ ಹೋಯಿತು ನಮ್ಮ ನೀರು ನಮ್ಮ ಹಕ್ಕು?

0
17

ಬೆಂಗಳೂರು: ಎಲ್ಲಿ ಹೋಯಿತು ನಮ್ಮ ನೀರು ನಮ್ಮ ಹಕ್ಕು? ಎಂದು ಬಿಜೆಪಿ ನಾಯಕ ಸಿಟಿ ರವಿ ಅವರು ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಪ್ರಶ್ನಿಸಿದ್ದಾರೆ, ಕಾವೇರಿ ನೀರಿನ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು “ಕಾವೇರಿ ನೀರಿಗಾಗಿ ಮೇಕೆದಾಟು ಪಾದಯಾತ್ರೆ ಮಾಡಿದ ಕಾಂಗ್ರೆಸ್ಸಿಗರೆ, ಎಲ್ಲಿ ಹೋಯಿತು ನಮ್ಮ ನೀರು ನಮ್ಮ ಹಕ್ಕು? ನಮ್ಮ ನೀರು ಬಿಟ್ಟಿದ್ದಾರೆ ತಮಿಳುನಾಡಿಗೆ ನಮ್ಮ ಹಕ್ಕು ಅಡವಿಟ್ಟಿದ್ದಾರೆ ಡಿಎಂಕೆಗೆ. ದೇಶದಾದ್ಯಂತ ತನ್ನ ಅಸ್ತಿತ್ವದ ಉಳಿವಿಗೆ ಹೋರಾಡುತ್ತಿರುವ ಕಾಂಗ್ರೆಸ್ ಯಾರನ್ನು ಬೇಕಾದರೂ ಬಲಿಕೊಡಲು “ಸಿದ್ದ” ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ. I.N.D.I.A ಎಂಬ ಸಮಯಸಾಧಕ ಮೈತ್ರಿಕೂಟವನ್ನು ಉಳಿಸಲು, ನೆರೆಯ ತಮಿಳುನಾಡಿನ ಡಿಎಂಕೆ ಸರಕಾರವನ್ನು ಮೆಚ್ಚಿಸಲು, ಮತ್ತವರ ಮೈತ್ರಿ ಉಳಿಸಿಕೊಳ್ಳಲು ರಾಜ್ಯಕ್ಕೆ ಘೋರ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಸರಕಾರ. ಮಳೆ ಕಡಿಮೆಯಾಗಿ ಮಂಡ್ಯ, ಮೈಸೂರು ಭಾಗದ ರೈತರ ಜೀವನಾಡಿ ತಾಯಿ ಕಾವೇರಿಯ ನೀರು ಕಡಿಮೆ ಇದ್ದರೂ KRS ನೀರನ್ನು ತಮಿಳುನಾಡಿಗೆ ನೀಡಿ ಅನ್ಯಾಯ ಮಾಡುತ್ತಿದೆ. ಇದು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರದ “ಆಡಳಿತದ ಮಾಡೆಲ್”. ಮೈಸೂರು – ಮಂಡ್ಯ ಭಾಗದ ರೈತರ ಬದುಕಿಗೆ ಕೊಳ್ಳಿ ಇಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ” ಎಂದಿದ್ದಾರೆ.

Previous articleನಿಮ್ಮನ್ನು ನಿಮ್ಮ ಅಧ್ಯಕ್ಷರೇ ಗಂಭೀರವಾಗಿ ಪರಿಗಣಿಸುವುದಿಲ್ಲ
Next articleನಿಮ್ಮ ಪೊಲೀಸ್ ಕಮೀಷನರ್‌: ಲೈವ್ ಚಾಟ್‌ನಲ್ಲಿ