ಇಸ್ರೇಲ್‌ನಲ್ಲಿ ಸಿಲುಕಿದ ಧಾರವಾಡ ಪ್ರಾಧ್ಯಾಪಕ

0
20

ಧಾರವಾಡ: ಹವಾಮಾನ ಶಾಸ್ತçದ ಕುರಿತು ತರಬೇತಿಗೆ ತೆರಳಿದ್ದ ಧಾರವಾಡ ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಸುಮೇಶ ಇಸ್ರೇಲ್‌ದಲ್ಲಿ ಸಿಲುಕಿದ್ದು, ಸುರಕ್ಷಿತವಾಗಿದ್ದಾರೆ ಎಂದು ಕೃಷಿ ವಿವಿ ತಿಳಿಸಿದೆ.
ಇಸ್ರೇಲ್‌ನ ಜೆರುಸಲೆಂದ ಹೀಬ್ರೂ ವಿಶ್ವವಿದ್ಯಾಲಯದಲ್ಲಿ ಕಳೆದ ಆ. ೭ರಿಂದ ಅ. ೨೨ರ ವರೆಗೆ ಹವಾಮಾನ ಶಾಸ್ತ್ರದ ಕುರಿತು ತರಬೇತಿ ಏರ್ಪಡಿಸಲಾಗಿತ್ತು. ಕೃಷಿ ವಿಶ್ವವಿದ್ಯಾಲಯದಿಂದ ಡಾ. ಸುಮೇಶ ಅವರನ್ನು ಆಯ್ಕೆ ಮಾಡಿ ತರಬೇತಿಗೆ ಕಳುಹಿಸಲಾಗಿತ್ತು. ಆದರೆ, ಇಸ್ರೇಲ್ ಮತ್ತು ಪ್ಯಾಲಿಸ್ಟೀನ್ ಮಧ್ಯೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ತರಬೇತಿಯನ್ನು ರದ್ದುಗೊಳಿಸಲಾಗಿದೆ. ಸದ್ಯ ಡಾ. ಸುಮೇಶ ಅವರು ಜೆರುಸೆಲಂದ ಲಾಡ್ಜ್ನಲ್ಲಿಯೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.
ಒಂದು ವಾರಕ್ಕೆ ಆಗುವಷ್ಟು ಆಹಾರವನ್ನು ಲಾಡ್ಜ್‌ನ ರೂಮಿನಲ್ಲಿಯೇ ಸಂಗ್ರಹಿಸಿ ಇಟ್ಟುಕೊಂಡಿರುವ ಸುಮೇಶ, ಕುಲಪತಿಗಳು ಹಾಗೂ ಕುಟುಂಬದವರೊಂದಿಗೆ ಮಾತನಾಡಿದ್ದಾರೆ. ತಾವು ಅಲ್ಲಿ ಸುರಕ್ಷಿತವಾಗಿ ಇರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Previous article16ರಿಂದ‌ ಶ್ರೀರಂಗಪಟ್ಟಣ ದಸರಾ: ಸಿದ್ಧತೆ ಪರಿಶೀಲಿಸಿದ ಶಾಸಕ ಬಂಡಿಸಿದ್ದೇಗೌಡ
Next articleಸಿಎಂ ಮನೆ ಮೇಲೆ ಕಲ್ಲು