ಅಗ್ಗವಾಗಲಿವೆ ಮೊಬೈಲ್‌ಗಳು ಎಲೆಕ್ಟ್ರಾನಿಕ್ಸ್ ಉದ್ಯಮದ ಮೌಲ್ಯವರ್ಧನೆ

0
12

ಮೊಬೈಲ್‌ಗಳು ಹಾಗೂ ಮೊಬೈಲ್ ಚಾರ್ಜರ್‌ಗಳ ಮೇಲಿನ ಸೀಮಾ ಸುಂಕದಲ್ಲಿ ಶೇ. ೧೫ರಷ್ಟು ಕಡಿತವಾಗಲಿದೆ. ಹಾಗೆಯೇ ದೇಸಿ ಉತ್ಪಾದನೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಮದು ಮಾಡಿಕೊಳ್ಳುವ ನಿರ್ದಿಷ್ಟ ಉಪಕರಣಗಳ ಮೇಲೆ ಶೇ. ೧೫ರಷ್ಟು ಸುಂಕ ಹೆಚ್ಚಳ ಆಗಲಿದೆ. ಇದರಿಂದಾಗಿ ಭಾರತದಲ್ಲಿ ಉತ್ಪಾದನೆಯಾಗಲಿರುವ ಮೊಬೈಲ್‌ಗಳು ಅಗ್ಗವಾಗಲಿವೆ.
ಡಿಜಿಟಲ್ ಇಂಡಿಯಾಕ್ಕೆ ಪ್ರಧಾನ ಕೊಡುಗೆ ನೀಡುತ್ತಿರುವ ಭಾರತೀಯ ಮೊಬೈಲ್ ಕ್ಷೇತ್ರ ಕಳೆದ ಹತ್ತು ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿಯನ್ನು ಸಾಧಿಸಿದೆ. ಮೊಬೈಲ್ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿದ್ದು, ದೇಸಿ ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.
ಮೊಬೈಲ್‌ಗಳ ರಫ್ತಿನಲ್ಲಿ ಹೆಚ್ಚೂ ಕಡಿಮೆ ೧೦೦ ಪಟ್ಟು ಹೆಚ್ಚಳವಾಗಿದೆ. ಭಾರತದ ಮೊಬೈಲ್ ಉತ್ಪಾದನೆ ಮತ್ತು ಬಳಕೆ ಕ್ಷೇತ್ರ ಸಂಪೂರ್ಣ ಪ್ರಬುದ್ಧವಾಗಿರುವುದನ್ನು ಇದು ತೋರಿಸುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
ದೇಸಿ ಎಲೆಕ್ಟ್ರಾನಿಕ್ಸ್ ಉದ್ಯಮದ ಮೌಲ್ಯ ವರ್ಧನೆಗಾಗಿ ಈ ವಲಯದ ಸುಂಕದಲ್ಲೂ ಕಡಿತ ಮಾಡುವ ಪ್ರಸ್ತಾವನೆಯನ್ನು ಹಣಕಾಸು ಸಚಿವೆ ಮಾಡಿದ್ದಾರೆ. ಈ ಕಡಿತವು ಆಮ್ಲಜನಕ ರಹಿತ ತಾಮ್ರದ ಪ್ರತಿರೋಧಕ ಹಾಗೂ ಕನೆಕ್ಟರ್‌ಗಳ ಕೆಲ ಭಾಗಗಳಿಗೆ ಷರತ್ತಿಗೆ ಒಳಪಟ್ಟು ಈ ವಿನಾಯ್ತಿ ದೊರೆಯಲಿದೆ.

Previous articleಷೇರುಪೇಟೆ ಏರಿಳಿತ
Next articleಇಡಿ ಬಹಿಷ್ಕಾರಕ್ಕೆ ಪ್ರಸ್ತಾಪ, ಗಲಾಟೆ