ಬೆಂಗಳೂರು: ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನಗರ ಸಂಚಾರಿ ಪೊಲೀಸರು ಹಲವು ಮಾರ್ಗದಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡುತ್ತಾರೆ. ಈಗ ನಗರದ ಹೆಚ್. ಎ. ಎಲ್. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಈ ಕುರಿತು ಪೊಲೀಸರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಹೆಚ್.ಎ.ಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ, ಈ ಕೆಳಕಂಡ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ. ಜನರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಂಚಾರ ನಿರ್ಬಂಧದ ವಿವರ: ಸಕಾ ಆಸ್ಪತ್ರೆ ಕಡೆಯಿಂದ ದೇವರಬಿಸನಹಳ್ಳಿ-ಇಕೋವರ್ಲ್ಡ್-ಇಂಟೆಲ್-ಇಕೋಸ್ಪೇಸ್ ಕಡೆಗೆ ನೇರ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
ಪರ್ಯಾಯ ಮಾರ್ಗವಾಗಿ ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿ ಕಡ್ಡಾಯ ಎಡತಿರುವು ಪಡೆದು ಕಾಡಬಿಸನಹಳ್ಳಿ ಕಡೆಯ ಸರ್ವೀಸ್ ರಸ್ತೆಯ ಮೂಲಕ ಸಾಗಿ ಕಾಡಬಿಸನಹಳ್ಳಿ ಜಂಕ್ಷನ್‌ನಲ್ಲಿ ‘ಯು’ ತಿರುವು ಪಡೆದು, ದೇವರಬಿಸನಹಳ್ಳಿ ಕಡೆಯ ಮಧ್ಯದಲ್ಲಿರುವ ಸರ್ವೀಸ್ ರಸ್ತೆ, ಹೊರವರ್ತುಲ ರಸ್ತೆ ಮುಖಾಂತರ ದೇವರಬಿಸನಹಳ್ಳಿ ಕಡೆಯ ಸರ್ವೀಸ್ ರಸ್ತೆಗೆ ಹೋಗಿ, ದೇವರಬಿಸನಹಳ್ಳಿ ಜಂಕ್ಷನ್ ಮುಖಾಂತರ ಸಂಚರಿಸಬಹುದಾಗಿರುತ್ತದೆ.
ಬೆಳ್ಳಂದೂರು ಕಡೆಯಿಂದ ಪಾಸ್‌ಪೋರ್ಟ್ ಸರ್ವೀಸ್ ರಸ್ತೆ ಮೂಲಕ ಮಾರತಹಳ್ಳಿ ಕಡೆ ಸಂಚರಿಸುವ ವಾಹನಗಳು ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿನ ಕಾಡಬಿಸನಹಳ್ಳಿ, ಕಡೆಗೆ ಹೋಗುವ ಮಧ್ಯಭಾಗದ ಸರ್ವೀಸ್ ರಸ್ತೆ ಮೂಲಕ ನೇರವಾಗಿ ಮಾರತಹಳ್ಳಿ ಕಡೆಗೆ ಸಂಚರಿಸಬಹುದು.
ಬೆಳ್ಳಂದೂರು ಕಡೆಯಿಂದ ಪಾಸ್‌ಪೋರ್ಟ್ ಸರ್ವೀಸ್ ರಸ್ತೆ ಮೂಲಕ ದೇವರಬಿಸನಹಳ್ಳಿ ರಸ್ತೆ ಕಡೆ ಸಂಚರಿಸುವ ವಾಹನಗಳು, ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿನ ಮಾರ್ಗದ ಮೂಲಕ ಮಧ್ಯ ಭಾಗದ ಸರ್ವೀಸ್ ರಸ್ತೆಯಲ್ಲಿ ಎಡ ತಿರುವು ಪಡೆದು, ಕಾಡಬಿಸನಹಳ್ಳಿ ಸರ್ವೀಸ್ ರಸ್ತೆ ಮೂಲಕ ಕಾಡಬಿಸನಹಳ್ಳಿ ಜಂಕ್ಷನ್‌ನಲ್ಲಿ ‘ಯು’ ತಿರುವು ಪಡೆದು ದೇವರಬಿಸನಹಳ್ಳಿ ಕಡೆಯ ಮಧ್ಯದಲ್ಲಿರುವ ಸರ್ವೀಸ್ ರಸ್ತೆ, ಹೊರವರ್ತುಲ ರಸ್ತೆ ಮುಖಾಂತರ ದೇವರಬಿಸನಹಳ್ಳಿ, ಕಡೆಯ ಸರ್ವೀಸ್ ರಸ್ತೆಗೆ ಹೋಗಿ ದೇವರಬಿಸನಹಳ್ಳಿ ಜಂಕ್ಷನ್ ಮುಖಾಂತರ ಸಂಚರಿಸಬಹುದು.
ಇಕೋವರ್ಲ್ಡ್(ಆರ್.ಎಂ.ಜಡ್) ಕಡೆಯಿಂದ ಮಾರತ್‌ಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿ ನೇರವಾಗಿ ಚಲಿಸಿ, ಪಾಸ್‌ಪೋರ್ಟ್ ಸರ್ವೀಸ್ ರಸ್ತೆಯಲ್ಲಿ ಬಲತಿರುವು ಪಡೆದು, ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿ ಕಾಡಬಿಸನಹಳ್ಳಿ ಕಡೆಗೆ ಹೋಗುವ ಮಧ್ಯಭಾಗದ ಸರ್ವೀಸ್ ರಸ್ತೆ ಮೂಲಕ ನೇರವಾಗಿ ಮಾರತ್‌ಹಳ್ಳಿ ಕಡೆಗೆ ಸಂಚರಿಸಬಹುದು.
ಇಕೋವರ್ಲ್ಡ್ (ಆರ್.ಎಂ.ಜಡ್) ಕಡೆಯಿಂದ ದೇವರಬೀಸನಹಳ್ಳಿ-ಕಡೆಗೆ ಸಂಚರಿಸುವ ವಾಹನಗಳು ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿ ನೇರವಾಗಿ ಚಲಿಸಿ, ಪಾಸ್‌ಪೋರ್ಟ್ ಸರ್ವೀಸ್ ರಸ್ತೆಯಲ್ಲಿ ಬಲತಿರುವು ಪಡೆದು, ದೇವರ ಬೀಸನಹಳ್ಳಿ ಜಂಕ್ಷನ್ ಬಲ ಮಾರ್ಗದ ಮೂಲಕ ಮಧ್ಯಭಾಗದ ಸರ್ವೀಸ್ ರಸ್ತೆಯಲ್ಲಿ ಎಡತಿರುವು ಪಡೆದು, ಕಾಡಬಿಸನಹಳ್ಳಿ ಸರ್ವೀಸ್ ರಸ್ತೆ ಮೂಲಕ ಕಾಡಬಿಸನಹಳ್ಳಿ ಜಂಕ್ಷನ್‌ನಲ್ಲಿ ‘ಯು’ ತಿರುವು ಪಡೆದು ದೇವರಬಿಸನಹಳ್ಳಿ ಕಡೆಯ ಮಧ್ಯದಲ್ಲಿರುವ ಸರ್ವೀಸ್ ರಸ್ತೆ, ಹೊರವರ್ತುಲ ರಸ್ತೆ ಮುಖಾಂತರ ದೇವರಬಿಸನಹಳ್ಳಿ ಕಡೆಯ ಸರ್ವೀಸ್ ರಸ್ತೆಗೆ ಹೋಗಿ, ದೇವರಬಿಸನಹಳ್ಳಿ ಜಂಕ್ಷನ್ ಮೂಲಕ ಸಂಚರಿಸಬಹುದು.