ಇಂದು ತಂಡದ ಹೊಸ ನಾಯಕನ ಘೋಷಣೆ.
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎನ್ನುವ ಪ್ರಶ್ನೆಗೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ಈ ಕುರಿತಂತೆ RCB ತಂಡಕ್ಕೆ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಕೆಲಸ ಮಾಡುತ್ತಿರುವ ದಿನೇಶ್ ಕಾರ್ತಿಕ್ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಹಂಚಿಕೊಂಡಿದ್ದು ಇಂದು (13-02-2025) ರಂದು 11:30 ಕ್ಕೆ ಹೊಸ ನಾಯಕನ ಘೋಷಣೆಯಾಗಲಿದೆ.
ಕಳೆದ ನಾಲ್ಕು ಆವೃತ್ತಿಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ಫಾಪ್ ಡುಪ್ಲೆಸಿಸ್‌ರನ್ನು ಕೈಬಿಡಲಾಗಿದ್ದು ಹೊಸ ನಾಯಕನ ಆಯ್ಕೆ ಅನಿವಾರ್ಯವಾಗಿದೆ. ವಿರಾಟ್ ಕೊಹ್ಲಿ ಈಗಾಗಲೇ ತಂಡವನ್ನು ಮುನ್ನಡೆಸಿದ್ದಾರೆ. ಈ ಬಾರಿಯೂ ಅವರೇ ನಾಯಕರಾಗುತ್ತಾರೆ ಎನ್ನುವ ವದಂತಿಗಳಿದೆ. ಆದರೆ ಫ್ರಾಂಚೈಸಿ ಮಾತ್ರ ಇನ್ನೂ ನಾಯಕ ಯಾರು ಎನ್ನುವ ಬಗ್ಗೆ ನಿರ್ಧಾರ ತಿಳಿಸಿರಿಲಿಲ್ಲ. ಇಂದು 11:30 ಕ್ಕೆ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ನಾಯಕನ ಘೋಷಣೆಯಾಗಲಿದೆ.