ಕರ್ನಾಟಕ: ಮುದ್ರಾಂಕ ತೆರಿಗೆ ಸಂಗ್ರಹ ಕುಸಿತ

0
18

ಕರ್ನಾಟಕದಲ್ಲಿ ಸರ್ಕಾರಿ ರಜಾದಿನಗಳ ಅವಧಿಯಲ್ಲೂ ಉಪ ನೋಂದಣಾಧಿಕಾರಿಗಳ ಕಚೇರಿಗಳು ಕಾರ್ಯನಿರ್ವಹಣೆ ಮಾಡಿದರೂ ಪ್ರಸಕ್ತ ಹಣಕಾಸು ವರ್ಷದ ಮೊದಲ 5 ತಿಂಗಳುಗಳಲ್ಲಿ ರಾಜ್ಯದ ಮುದ್ರಾಂಕ ಮತ್ತು ನೋಂದಣಿ ತೆರಿಗೆ ಸಂಗ್ರಹಣೆಯಲ್ಲಿ ನಿರೀಕ್ಷೆಗಿಂತ ಶೇ.3.94ರಷ್ಟು ಕುಸಿತ ಉಂಟಾಗಿದೆ.

ಆದರೆ ರಾಜ್ಯದ ಒಟ್ಟಾರೆ ಸಂಪನ್ಮೂಲ ಸಂಗ್ರಹ ಶೇ.7.31ರಷ್ಟು ಬೆಳವಣಿಗೆ ದಾಖಲಿಸಿರುವುದು ಸರಕಾರದ ಆತಂಕ ದೂರ ಮಾಡಿದೆ. ಆದಾಗ್ಯೂ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಒಟ್ಟು ಸಂಪನ್ಮೂಲ ಸಂಗ್ರಹ ಪ್ರಮಾಣ ಕೆಲಮಟ್ಟಿಗೆ ಕಳವಳಕಾರಿ ಎಂದೇ ಹೇಳಬಹುದಾಗಿದೆ.

ಗಮನಾರ್ಹ ಅಂಶವೆಂದರೆ ಹಣಕಾಸು ವರ್ಷದ ಆರಂಭಿಕ 5 ತಿಂಗಳಲ್ಲಿ ಕಳೆದ ವರ್ಷ ಜಿಎಸ್‌ಡಿಪಿಗೆ ವಿತ್ತೀಯ ಕೊರತೆ ಶೇ.2.90ರಷ್ಟು ಇದ್ದರೆ ಈ ವರ್ಷ ಅದು ಶೇ.2.95ಕ್ಕೆ ಏರಿಕೆಯಾಗಿದೆ. ಇನ್ನು ತೆರಿಗೆ ಸಂಗ್ರಹ ವಿಚಾರದಲ್ಲಿ ಇ-ಸ್ವತ್ತು ಗೊಂದಲ ಸೇರಿದಂತೆ ಹಲವು ಕಾರಣಗಳಿಂದ ಮುದ್ರಾಂಕ ಮತ್ತು ನೋಂದಣಿ ತೆರಿಗೆ ಸಂಗ್ರಹದಲ್ಲಿ ಶೇ.3.94ರಷ್ಟು ಕುಸಿತ ಕಂಡುಬಂದಿದೆ.

ಅಂದರೆ ಈ ವರ್ಷದ ಏಪ್ರಿಲ್‌ನಿಂದ ಆಗಸ್ಟ್ ಅಂತ್ಯದವರೆಗೆ 9,440.29 ಕೋಟಿ ರೂ.ಗಳನ್ನು ಮುದ್ರಾಂಕ ಮತ್ತು ನೋಂದಣಿಯಿಂದ ಸಂಗ್ರಹಿಸಲಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 9,827 ಕೋಟಿ ರೂ.ಗಳ ಸಂಗ್ರಹವಾಗಿತ್ತು. ಕಳೆದ ವರ್ಷದ ಒಟ್ಟು ಗುರಿ 26 ಸಾವಿರ ಕೋಟಿ ರೂ.ಗಳಾಗಿದ್ದರೆ, ಈ ವರ್ಷ 28 ಸಾವಿರ ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ. ಅಂದರೆ ಒಟ್ಟು ಗುರಿಯ ಶೇ33.72ರಷ್ಟು ಮಾತ್ರ ಈವರೆಗೆ ಸಾಧನೆ ಮಡಲಾಗಿದೆ.

ರಾಜ್ಯ ಸರಕಾರ ಮೊದಲ 5 ತಿಂಗಳಲ್ಲಿ ಸ್ವಂತ ತೆರಿಗೆ ರಾಜಸ್ವದ ಮೂಲಕ 75,551.42 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ7.65ರಷ್ಟು ಬೆಳವಣಿಗೆಯಾಗಿದೆ. ಹೋದ ವರ್ಷ ಇದೇ ಅವಧಿಯಲ್ಲಿ 70,180.72 ಕೋಟಿ ರೂ. ಸಂಗ್ರಹಿಸಲಾಗಿತ್ತು.

ವಾಣಿಜ್ಯ ತೆರಿಗೆ ಮೂಲಕ 44,295.31 ಕೋಟಿ ವೃದ್ಧಿಯಾಗಿದೆ. ಆದರೆ ಕೇಂದ್ರ ಮೋಟಾರು ವಾಹನ ತೆರಿಗೆ ಮೂಲಕ 4,949.49 ಕೋಟಿ ರೂ. ರೂ.ಗಳನ್ನು ಸಂಗ್ರಹಿಸಿ ಶೇ.8.52ರಷ್ಟು ವೃದ್ಧಿ ಸಾಧಿಸಲಾಗಿದೆ. ಸಂಗ್ರಹಿಸಿ ಶೇ.5.28ರಷ್ಟು ವೃದ್ಧಿಯಾಗಿದೆ.

ರಾಜ್ಯ ಸರಕಾರಕ್ಕೆ ಖುಷಿ ತರುವ ಸಂಗತಿ ಎಂದರೆ ಅಬಕಾರಿ ತೆರಿಗೆಯಿಂದ ದೊಡ್ಡ ಪ್ರಮಾಣದ ವೃದ್ಧಿ ಕಂಡಿದೆ. ಅಂದರೆ 5 ತಿಂಗಳಲ್ಲಿ 16,358.60 ರೂ.ಗಳನ್ನು ಸಂಗ್ರಹಿಸಲಾಗಿದ್ದು, ಇದು ಶೇ.13.64ರಷ್ಟು ಬೆಳವಣಿಗೆಯಾಗಿದೆ. ಈ ವರ್ಷ ಒಟ್ಟು ಶೇ.40ರಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದ್ದು. 40 ಸಾವಿರ ಕೋಟಿ ರೂ.ಗಳ ಸಂಗ್ರಹದ ಗುರಿ ಹೊಂದಲಾಗಿದೆ.

ಸ್ವಂತ ತೆರಿಗೆಯೇತರ ರಾಜಸ್ವವು ಅಂದರೆ, ಸಾಲ ವಸೂಲಾತಿ ಮತ್ತು ವಿವಿಧ ಬ೦ಡವಾಳ ಜಮೆಗಳಿಂದ 8,566 ಕೋಟಿ ರೂ. ಗಳನ್ನು ಸಂಗ್ರಹಿಸಿ ಶೇ.49ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಕೇಂದ್ರ ಸರಕಾರದ ತೆರಿಗೆ ಹಂಚಿಕೆಯಿಂದ 5 ತಿಂಗಳಲ್ಲಿ 19,334 ರೂ.ಗಳ ಜಮೆಯಾಗಿದ್ದು, ಶೇ.16ರಷ್ಟು ವೃದ್ಧಿಯಾಗಿದೆ.

Previous articleಎಸ್.ಎಲ್. ಭೈರಪ್ಪ: ಕನ್ನಡ ಸಾಹಿತ್ಯದ ಧೀಮಂತ ಕಥಾನಕಗಳು
Next articleರೈಲ್ವೆ ನೌಕರರಿಗೆ ಗುಡ್‌ ನ್ಯೂಸ್ – ಬೋನಸ್ ಬಿಡುಗಡೆಗೆ ಸಂಪುಟ ಅಸ್ತು

LEAVE A REPLY

Please enter your comment!
Please enter your name here