ಕರ್ನಾಟಕದಲ್ಲಿ ಒಟ್ಟು 21, 794 ರೌಡಿಶೀಟರ್‌ಗಳು!

0
26

ಅನಿಲ್ ಗುಮ್ಮಘಟ್ಟ

ರಾಜ್ಯದಲ್ಲಿ ಒಟ್ಟು 21,794 ಸಕ್ರಿಯ ರೌಡಿಗಳಿದ್ದು, 2023 ರಿಂದ 2025ರ ಮೇ ಅಂತ್ಯದವರೆಗೆ 1,883 ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಇದರ ಜೊತೆಗೆ, 21,456 ರೌಡಿಗಳ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದ 168 ರೌಡಿಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಿದ್ದು, ಅವರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ.

ಕೇವಲ ಪ್ರಕರಣ ದಾಖಲಿಸುವುದಷ್ಟೇ ಅಲ್ಲದೆ, ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿಗಳ ವಿರುದ್ಧ ಪೊಲೀಸರು ಗೂಂಡಾ ಕಾಯ್ದೆ ಮತ್ತು ಗಡಿಪಾರಿನಂತಹ ಕಠಿಣ ಕ್ರಮಗಳನ್ನು ಸಹ ರಾಜ್ಯ ಪೊಲೀಸರು ಕೈಗೊಳ್ಳುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ, ಒಟ್ಟು 1,883 ರೌಡಿಗಳನ್ನು ರಾಜ್ಯದಿಂದ ಗಡಿಪಾರು ಮಾಡುವ ಮೂಲಕ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ.

ಇದಲ್ಲದೆ, 114 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿ ಬಂಧಿಸಲಾಗಿದೆ. ಕೋಕಾ ಕಾಯ್ದೆ ಅಡಿ 13 ಪ್ರಕರಣಗಳು ದಾಖಲಾಗಿವೆ. ರಾಜ್ಯದ ಪ್ರಮುಖ ನಗರಗಳಲ್ಲಿ ಮತ್ತು ಸೂಕ್ತ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಸಿಸಿಟಿವಿ ಕ್ಯಾಮರಾಗಳನ್ನು ಹೆಚ್ಚಾಗಿ ಅಳವಡಿಸಲಾಗುತ್ತಿದೆ.

ಇದು ಅಪರಾಧಿಗಳನ್ನು ಸುಲಭವಾಗಿ ಗುರುತಿಸಲು ಮತ್ತು ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಒದಗಿಸಲು ಸಹಾಯ ಮಾಡಲಿದೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಗೂಂಡಾ ಕಾಯ್ದೆ ದಾಖಲು ಮಾಡಿ, ಗಡಿಪಾರು ಮಾಡಲಾಗುತ್ತಿದೆ. ರಾಜ್ಯದಲ್ಲಿ ಹಗಲು ರಾತ್ರಿ ಎನ್ನದೆ ಅಪರಾಧ ಕೃತ್ಯಗಳ ಮೇಲೆ ನಿಗಾ ಇಡಲು ಗಸ್ತು ತಿರುಗುತ್ತಿದ್ದಾರೆ. ಸಾರ್ವಜನಿಕರು ಭಯವಿಲ್ಲದೆ ಬದುಕಲು ಅನುಕೂಲವಾಗುವಂತೆ ಪೊಲೀಸರು ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ಅಪರಾಧಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸ್ ಇಲಾಖೆಗೆ ಸದಾ ಒಂದು ದೊಡ್ಡ ಸವಾಲಾಗಿದೆ. ಅದರಲ್ಲೂ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ಸಮಾಜ ವಿರೋಧಿ ಚಟುವಟಿಕೆಗಳು ಮತ್ತು ರೌಡಿಗಳ ಹಾವಳಿ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಆದಾಗ್ಯೂ, ಅಪರಾಧಗಳನ್ನು ತಡೆಗಟ್ಟಲು ಮತ್ತು ಸಮಾಜದಲ್ಲಿ ಶಾಂತಿಯನ್ನು ಪುನಃ ಸ್ಥಾಪಿಸಲು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ನಾಕಾಬಂದಿ ಕಾರ್ಯತಂತ್ರ ಹೇಗೆ ಕೆಲಸ ಮಾಡುತ್ತದೆ?

*ಅಪರಾಧ ಹೆಚ್ಚಾಗಿ ನಡೆಯುವ ಸ್ಥಳಗಳು, ಪ್ರಮುಖ ರಸ್ತೆಗಳು ಮತ್ತು ತ್ತು ನಗರದ ಗಡಿ ಪ್ರದೇಶಗಳಲ್ಲಿ ನಾಕಾಬಂದಿಗಳನ್ನು ಸ್ಥಾಪಿಸಲಾಗುತ್ತದೆ.

* ಸಿಸಿಟಿವಿ ಕ್ಯಾಮೆರಾಗಳು, ಮೊಬೈಲ್ ಡೇಟಾ ವಿಶ್ಲೇಷಣೆ ಮತ್ತು ಮುಖ ಗುರುತಿಸುವ ತಂತ್ರಜ್ಞಾನದಂತಹ ಆಧುನಿಕ ತಂತ್ರಜ್ಞಾನವನ್ನು ನಾಕಾಬಂದಿಯಲ್ಲಿ ಬಳಸುವುದರಿಂದ ಅಪರಾಧಿಗಳನ್ನು ಸುಲಭವಾಗಿ ಗುರುತಿಸಬಹುದು.

* ಅಪರಾಧಿಗಳು ನಾಕಾಬಂದಿ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳುವುದನ್ನು ತಡೆಯಲು, ಪೊಲೀಸರು ಹಠಾತ್ತಾಗಿ ಮತ್ತು ಅನಿರೀಕ್ಷಿತವಾಗಿ ನಾಕಾಬಂದಿಗಳನ್ನು ನಡೆಸುತ್ತಾರೆ.

ಗೂಂಡಾ ಕಾಯಿದೆಯಡಿ ದಾಖಲಾದ ಪ್ರಕರಣಗಳು

ವರ್ಷಪತ್ತೆ  ಬಂಧನಪ್ರಕರಣ  
2023677523
2024906416
2025 (ಮೇ)300214
ಒಟ್ಟು188311413
ವಿಚಾರಣೆ ಬಾಕಿ44912

ಅಪರಾಧ ತಡೆಗೆ ಗಡಿಗಳಲ್ಲಿ ನಾಕಾಬಂದಿ ಕಾರ್ಯತಂತ್ರ: ಅಪರಾಧ ಚಟುವಟಿಕೆಗಳು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವಿಸ್ತರಿಸದಂತೆ ತಡೆಯಲು, ರಾಜ್ಯಾದ್ಯಂತ ಅಂತರ ಜಿಲ್ಲಾ ಗಡಿಗಳಲ್ಲಿ ನಾಕಾಬಂದಿಗಳನ್ನು ಹೆಚ್ಚಿಸಲಾಗಿದೆ. ಈ ನಾಕಾಬಂದಿಗಳು ಅಪರಾಧಿಗಳ ಚಲನವಲನಗಳನ್ನು ನಿಯಂತ್ರಿಸಿ, ಗಂಭೀರ ಅಪರಾಧಗಳನ್ನು ಮೊದಲೇ ತಡೆಯುವಲ್ಲಿ ಯಶಸ್ವಿಯಾಗಿವೆ. ಪೊಲೀಸರ ಈ ಕಾರ್ಯತಂತ್ರಕ್ಕೆ ಸಾರ್ವಜನಿಕರ ಸಹಕಾರವೂ ದೊರೆಯುತ್ತಿದ್ದು, ಕಾನೂನು ಪಾಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

Previous articleಬೆಂಗಳೂರು ಈಗ ಗುಂಡಿಯೂರು: ಕಾಂಗ್ರೆಸ್‌ ಸರ್ಕಾರಕ್ಕೆ ಕೇಂದ್ರ ಸಚಿವರ ತರಾಟೆ!
Next articleಬಳ್ಳಾರಿಗೆ ತಪ್ಪಿದ 60,000 ಕೋಟಿ ರೂ. ಬಂಡವಾಳ: ಆರ್ಸೆಲರ್ ಮಿತ್ತಲ್ ಆಂಧ್ರಕ್ಕೆ ಶಿಫ್ಟ್!

LEAVE A REPLY

Please enter your comment!
Please enter your name here