ಆರೋಗ್ಯ ಇಲಾಖೆ ನೇಮಕಾತಿ: ಮಹತ್ವದ ಸೂಚನೆಗಳು

0
16

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ ಕುರಿತು ನಿರ್ದೇಶನವಿದೆ. ಖಾಲಿ ಹುದ್ದೆಗಳಿಗೆ ಜಿಲ್ಲಾಮಟ್ಟದಲ್ಲಿ ತಾತ್ಕಾಲಿಕ ಕಾರ್ಯ ವ್ಯವಸ್ಥೆ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾ ಯೋಜಿಸುವ ಕುರಿತು ನಿರ್ದೇಶನ ನೀಡಲಾಗಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಪ್ರದೀಪ್ ಕುಮಾರ್ ಬಿ.ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಖಾಲಿ ಹುದ್ದೆಗಳಿಗೆ ಜಿಲ್ಲಾ ಮಟ್ಟದಲ್ಲಿ, ತಾತ್ಕಾಲಿಕ ಕಾರ್ಯವ್ಯವಸ್ಥೆ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸುವ ಕುರಿತು ಎಂಬ ವಿಷಯವನ್ನು ಇದು ಒಳಗೊಂಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆರೋಗ್ಯ ಸೇವೆಯನ್ನು ನಿರಂತರವಾಗಿ ಲಭ್ಯವಾಗುವಂತೆ ಮಾಡಲು ಇಲಾಖೆಯಲ್ಲಿನ ಖಾಲಿ ಹುದ್ದೆಗಳಿಗೆ ಜಿಲ್ಲಾ ಮಟ್ಟದಲ್ಲಿ ತಾತ್ಕಾಲಿಕ ಕಾರ್ಯವ್ಯವಸ್ಥೆ ಮಾಡಲು ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸುವಂತೆ ಮೇಲೆ ಓದಲಾದ
ಕಡತದಲ್ಲಿ ಕೋರಲಾಗಿದೆ.

ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಜಿಲ್ಲಾ ಮಟ್ಟದ ಖಾಲಿ ಹುದ್ದೆಗಳಿಗೆ ತಾತ್ಕಾಲಿಕ ಕಾರ್ಯವ್ಯವಸ್ಥೆ ಮಾಡುವ ಅಧಿಕಾರವನ್ನು ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಪ್ರತ್ಯಾಯೋಜಿಸಲು ಸರ್ಕಾರವು ನಿರ್ಧರಿಸಿದೆ.

ಸರ್ಕಾರದ ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ, ಆರೋಗ್ಯ ಸೇವೆಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಜಿಲ್ಲಾ ಮಟ್ಟದ ಖಾಲಿ ಹುದ್ದೆಗಳಿಗೆ ತಾತ್ಕಾಲಿಕ ಕಾರ್ಯವ್ಯಸ್ಥೆ ಮಾಡಲು ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕ್ರಮವಹಿಸಲು ಅಧಿಕಾರ ಪ್ರತ್ಯಾಯೋಜಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಆರೋಗ್ಯ ಸೇವೆಗಳನ್ನು ನೀಡಲು ವಾರದಲ್ಲಿ ಗರಿಷ್ಟ 3 ದಿನಗಳ ಕಾರ್ಯವ್ಯವಸ್ಥೆ ಮಾಡುವುದು. ಇಂತಹ ಕಾರ್ಯವ್ಯವಸ್ಥೆಯು ಅವರುಗಳ ಸೇವೆಯ ಜೊತೆಗೆ ಹೆಚ್ಚುವರಿ ಜವಾಬ್ದಾರಿಯಾಗಿರತಕ್ಕದ್ದು ಹಾಗೂ ಇಂತಹ ಜವಾಬ್ದಾರಿಯನ್ನು ಅದೇ ತಾಲ್ಲೂಕಿನಲ್ಲಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಮಾತ್ರ ನೀಡತಕ್ಕದ್ದು.

ಆದಾಗ್ಯೂ ತಜ್ಞರುಗಳಿಗೆ ಸಂಬಂಧಿಸಿದಂತೆ ಇಂತಹ ತಾತ್ಕಾಲಿಕ ಕಾರ್ಯವ್ಯವಸ್ಥೆಯನ್ನು ತಾಲ್ಲೂಕಿನ ಹೊರಗೆ ಆದರೆ, ಅದೇ ಜಿಲ್ಲೆಯಲ್ಲಿನ ಒಳಗಿನ ಹುದ್ದೆಗಳಿಗೆ ವಹಿಸಬಹುದಾಗಿರುತ್ತದೆ. ಅಲ್ಲದೇ, ಕಾರ್ಯವ್ಯವಸ್ಥೆಯಡಿ ಹೆಚ್ಚಿನ ಜವಾಬ್ದಾರಿಯನ್ನು ಕೇಂದ್ರಸ್ಥಾನದಿಂದ ಬಾಹ್ಯ ಪ್ರದೇಶಗಳ ಖಾಲಿ/ ರಿಕ್ತ ಹುದ್ದೆಗಳಿಗೆ ನೀಡಬಹುದು ಆದರೆ, ಬಾಹ್ಯ ಪ್ರದೇಶದ ಸಿಬ್ಬಂದಿಗಳಿಗೆ ಕೇಂದ್ರಸ್ಥಾನದಲ್ಲಿರುವ ಹುದ್ದೆಗಳಿಗೆ ನೀಡಬಾರದು. ಮುಂದುವರೆದು, ಕಾರ್ಯವ್ಯವಸ್ಥೆಯಂತೆ ಈ ರೀತಿ ನಿಯೋಜಿಸುವ ಸಿಬ್ಬಂದಿಗಳು ಕಡ್ಡಾವಾಗಿ KAMS ರಲ್ಲಿ ಹಾಜರಾತಿಯನ್ನು ನಮೂದಿಸಿರತಕ್ಕದ್ದು ಹಾಗೂ ಅದನ್ನು ಕಾಲ-ಕಾಲಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳು ಪರಿಶೀಲಸಿ ಇಂತಹವರು ಕಾರ್ಯವ್ಯವಸ್ಥೆಯ ಜವಾಬ್ದಾರಿಯೊಂದಿಗೆ ಮೂಲ ಹುದ್ದೆಯ ಜವಾಬ್ದಾರಿಯನ್ನೂ ವಹಿಸುತ್ತಿದ್ದಾರೆಂದು ಖಚಿತಪಡಿಸತಕ್ಕದ್ದು.

ಇಂತಹ ಕಾರ್ಯವ್ಯವಸ್ಥೆಯು ಗರಿಷ, 3 ತಿಂಗಳ ಅವಧಿಯದಾಗಿರತಕ್ಕದ್ದು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರು ಈ ಬಗ್ಗೆ ಕಡ್ಡಾಯವಾಗಿ ಆಯುಕ್ತರಿಗೆ ವರದಿ ನೀಡತಕ್ಕದ್ದು.

ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ಸದರಿ 3 ತಿಂಗಳ ಅವಧಿಯನ್ನು ಮತ್ತೂ ಮುಂದಿನ 3 ತಿಂಗಳ ಅವಧಿಗೆ (ಅಂದರೆ ಒಟ್ಟು ಗರಿಷ್ಠ 6 ತಿಂಗಳ ಅವಧಿಗೆ) ವಿಸ್ತರಿಸಬಹುದು. ಮುಂದುವರೆದು, ಸದರಿ 6 ತಿಂಗಳ ನಂತರದ ಅವಧಿಯನ್ನು ವಿಸ್ತರಿಸಬೇಕಾದಲ್ಲಿ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ರವರು ಕಡ್ಡಾಯವಾಗಿ ಸರ್ಕಾರದ ಅನುಮೋದನೆ ಪಡೆಯತಕ್ಕದ್ದು.

ಇಂತಹ ಕಾರ್ಯವ್ಯವಸ್ಥೆಯು ಸರ್ಕಾರವು ಖಾಲಿ ಹುದ್ದೆಗಳನ್ನು ಖಾಯಂ ಆಗಿ ಅಥವಾ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವವರೆಗೆ ಇರತಕ್ಕದ್ದು. ಒಂದು ವೇಳೆ ಇಂತಹ ಕಾರ್ಯವ್ಯವಸ್ಥೆಯು 1 ವರ್ಷಕ್ಕೂ ಮೇಲ್ಪಟ್ಟು ಅಗತ್ಯವೆಂದು ಕಂಡುಬಂದಲ್ಲಿ, ಅದೇ ಅಧಿಕಾರಿ/ ಸಿಬ್ಬಂದಿಗಳನ್ನು ಮುಂದುವರಿಸದೇ ಇತರೆ ಅಧಿಕಾರಿ/ಸಿಬ್ಬಂದಿಗಳಿಗೆ ಇಂತಹ ಜವಾಬ್ದಾರಿಯನ್ನು ವಹಿಸತಕ್ಕದ್ದು.

Previous articleಧಾರವಾಡ: ಶಾಸಕ ವಿನಯ್ ಕುಲಕರ್ಣಿಗೆ ಮಧ್ಯಂತರ ಜಾಮೀನು
Next articleಬೀದರ್: ಡಿಜಿಟಲ್ ವಂಚನೆಗೆ ₹ 31 ಲಕ್ಷ ಕಳೆದುಕೊಂಡ ಮಾಜಿ ಶಾಸಕ

LEAVE A REPLY

Please enter your comment!
Please enter your name here