Home Advertisement
Home ಸುದ್ದಿ ರಾಜ್ಯ ಇರಾನ್–ಇಸ್ರೇಲ್ ಕದನ ವಿರಾಮದ ಎಫೆಕ್ಟ್; ಗಗನಕ್ಕೇರಿದ ಚಿನ್ನ, ಬೆಳ್ಳಿ ಬೆಲೆ!

ಇರಾನ್–ಇಸ್ರೇಲ್ ಕದನ ವಿರಾಮದ ಎಫೆಕ್ಟ್; ಗಗನಕ್ಕೇರಿದ ಚಿನ್ನ, ಬೆಳ್ಳಿ ಬೆಲೆ!

0
75

ಸತತ ಮೂರು ವಾರಗಳ ನಂತರ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಜಾಗತಿಕ ಮಟ್ಟದಲ್ಲಿ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನವಾಗುತ್ತಿರುವ ಸೂಚನೆಗಳು ಮಾರುಕಟ್ಟೆಯ ಮೇಲೆ ಸ್ಪಷ್ಟ ಪರಿಣಾಮ ಬೀರಿವೆ. ಯುದ್ಧಕ್ಕೆ ತಾತ್ಕಾಲಿಕ ವಿರಾಮ ಘೋಷಣೆಯಾದ ನಂತರ ಕಚ್ಚಾ ತೈಲದ ಬೆಲೆ ಕುಸಿತ ಕಂಡಿದ್ದರೂ, ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನ ಮತ್ತು ಬೆಳ್ಳಿಯತ್ತ ಮುಖ ಮಾಡಿದ ಪರಿಣಾಮ ಈ ಬೆಲೆ ಏರಿಕೆ ಕಂಡುಬರುತ್ತಿದೆ.

ಇಂದು 24 ಕ್ಯಾರೆಟ್ ಚಿನ್ನದ ಬೆಲೆ ಗಮನಾರ್ಹವಾಗಿ ಏರಿಕೆಯಾಗಿದೆ. ಒಂದು ಗ್ರಾಂ ಚಿನ್ನದ ಬೆಲೆ 15,382 ರೂಪಾಯಿ ಆಗಿದ್ದು, 10 ಗ್ರಾಂ ಚಿನ್ನದ ಬೆಲೆ 1,53,820 ರೂಪಾಯಿ ತಲುಪಿದೆ. ನಿನ್ನೆಗಿನ ಬೆಲೆಗೆ ಹೋಲಿಸಿದರೆ ಒಂದು ಗ್ರಾಂಗೆ 398 ರೂಪಾಯಿ ಹಾಗೂ 10 ಗ್ರಾಂಗೆ 3,980 ರೂಪಾಯಿ ಏರಿಕೆಯಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಒಂದು ಗ್ರಾಂ ಚಿನ್ನದ ಬೆಲೆ 14,100 ರೂಪಾಯಿ ಆಗಿದ್ದು, 10 ಗ್ರಾಂ ಚಿನ್ನದ ಬೆಲೆ 1,41,000 ರೂಪಾಯಿ ಆಗಿದೆ. ಇದು ನಿನ್ನೆಗಿಂತ ಒಂದು ಗ್ರಾಂಗೆ 365 ರೂಪಾಯಿ ಹೆಚ್ಚಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆಯೂ ಏರಿಕೆಯಾಗಿದ್ದು, ಒಂದು ಗ್ರಾಂಗೆ 11,537 ರೂಪಾಯಿ ಮತ್ತು 10 ಗ್ರಾಂಗೆ 1,15,370 ರೂಪಾಯಿ ಆಗಿದೆ. ಈ ದರದಲ್ಲಿ ಒಂದು ಗ್ರಾಂಗೆ 299 ರೂಪಾಯಿ ಹೆಚ್ಚಳವಾಗಿದೆ.

ಇದೇ ವೇಳೆ ಬೆಳ್ಳಿಯ ಬೆಲೆಯೂ ಗಮನಾರ್ಹವಾಗಿ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿ 260 ರೂಪಾಯಿಗೆ ತಲುಪಿದ್ದು, ಒಂದು ಕಿಲೋಗ್ರಾಂ ಬೆಳ್ಳಿ ಬೆಲೆ 2,60,000 ರೂಪಾಯಿ ಆಗಿದೆ. ನಿನ್ನೆಗಿಂತ ಕೇಜಿಗೆ 10,000 ರೂಪಾಯಿ ಹೆಚ್ಚಳವಾಗಿದೆ. ಜಾಗತಿಕ ರಾಜಕೀಯ ಬೆಳವಣಿಗೆಗಳು ಹಾಗೂ ಮಾರುಕಟ್ಟೆಯ ಅಸ್ಥಿರತೆಗಳ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಈ ಏರಿಕೆ ಕಂಡುಬರುತ್ತಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.