Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಅಪರೂಪದ ಅಪ್ಪೆಮಿಡಿ ಮರಗಳ ಸಂರಕ್ಷಣೆ; ಪರಿಸರ ಪ್ರೇಮಿಗಳಿಂದ ಅಘನಾಶಿನಿ ತಟದಲ್ಲಿ ವಿಶಿಷ್ಟ ಪಾದಯಾತ್ರೆ

ಅಪರೂಪದ ಅಪ್ಪೆಮಿಡಿ ಮರಗಳ ಸಂರಕ್ಷಣೆ; ಪರಿಸರ ಪ್ರೇಮಿಗಳಿಂದ ಅಘನಾಶಿನಿ ತಟದಲ್ಲಿ ವಿಶಿಷ್ಟ ಪಾದಯಾತ್ರೆ

0
19

ಶಿರಸಿ: ಅಘನಾಶಿನಿ ನದಿ ತಟದಲ್ಲಿ ಅಪರೂಪದ ಅಪ್ಪೆಮಿಡಿ ತಳಿಗಳನ್ನು ಸಂರಕ್ಷಿಸಲು ವೃಕ್ಷಲಕ್ಷ ಆಂದೋಲನ ಮತ್ತು ಪರಿಸರಾಸಕ್ತರ ತಂಡವು ಮೂರು ದಿನಗಳ ವಿಶಿಷ್ಟ ಪಾದಯಾತ್ರೆ ಆರಂಭಿಸಿದೆ. ಸರಕುಳಿ ಹೊಳೆಯ ಬೃಹತ್ ಅಪ್ಪೆಮಿಡಿ ಮರದ ಬುಡದಲ್ಲಿ ವೃಕ್ಷ ಪೂಜೆಯನ್ನು ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ತಂಡವು ಸಬಕಾರು, ಮುಚ್ಚುಳಿ, ನಾಡಗುಳಿ, ಬಾಳಗಾರ, ಮಾರಿಗದ್ದೆ ಮುತ್ಮುರ್ಡು ಹಳ್ಳಿಗಳ ಮೂಲಕ 12 ಕಿಲೋಮೀಟರ್ ದೂರ ಸಂಚರಿಸಿ ಅಪ್ಪೆಮಿಡಿಗಳ ವೈವಿಧ್ಯವನ್ನು ಅಧ್ಯಯನ ಮಾಡುತ್ತಿದೆ.

ಅಘನಾಶಿನಿ ಕಣಿವೆಯ ಹಳ್ಳಿಗಳಲ್ಲಿ ಮೂರು ದಶಕಗಳಿಂದ ಜೀವವೈವಿಧ್ಯ ಸಂರಕ್ಷಣೆಗೆ ಹೋರಾಟ ನಡೆಸಿದ ಅನುಭವವನ್ನು ಹಂಚಿದ ತಂಡದ ಅಧ್ಯಕ್ಷ ಅನಂತ ಹೆಗಡೆ, ಈ ಸಮೀಕ್ಷೆಯಿಂದ ಈ ಪ್ರದೇಶವನ್ನು ಜೀವವೈವಿಧ್ಯ ಪರಂಪರೆ ತಾಣ ಎಂದು ಅಧಿಕೃತವಾಗಿ ಗುರುತಿಸಲು ವರದಿ ಮಂಡಳಿಗೆ ಸಲ್ಲಿಸಲಾಗುವುದಾಗಿ ತಿಳಿಸಿದರು. ನದಿ ಜೋಡಣೆ, ಅಣೆಕಟ್ಟು ನಿರ್ಮಾಣದಂತಹ ಯೋಜನೆಗಳಿಂದ ಇಲ್ಲಿನ ವಿಶಿಷ್ಟ ಸಸ್ಯ ಪ್ರಭೇದಗಳು ವಿನಾಶದ ಅಂಚಿಗೆ ತಲುಪುವ ಭಯವಿದೆ.

ಪರಿಸರ ತಜ್ಞರು, ಕೃಷಿಕರು ಮತ್ತು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿರುವ ಈ ಪಾದಯಾತ್ರೆಯಲ್ಲಿ ಅಪ್ಪೆಮಿಡಿಗಳೊಂದಿಗೆ ನದೀ ತಟದ ಜೀವ ವೈವಿಧ್ಯವನ್ನು ದಾಖಲಾಗುತ್ತಿದೆ. 2002ರ ಜೀವ ವೈವಿಧ್ಯತಾ ಕಾನೂನಿನ ಅಡಿಯಲ್ಲಿ ಸಂರಕ್ಷಣೆ ಸಾಧ್ಯವಿದೆ. ಈ ಮೂಲಕ ಅಘನಾಶಿನಿಯ ಅಮೂಲ್ಯ ಮರಗಳು ಮತ್ತು ಪರಿಸರ ಪರಂಪರೆ ಉಳಿಯಲು ಒಂದು ಹೆಜ್ಜೆ ಮುಂದೆ ಇಡಲಾಗಿದೆ.