ಒಬ್ಬ ಗಂಡ, ಆರು ಪತ್ನಿಯರು, ಎಲ್ಲರೂ ಒಂದೇ ಸಮಯದಲ್ಲಿ ಗರ್ಭಿಣಿ!

0
17

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನವೂ ಒಂದಲ್ಲ ಒಂದು ವಿಚಿತ್ರ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಕೀನ್ಯಾ ದೇಶದ ವ್ಯಕ್ತಿಯೊಬ್ಬರ ಕಥೆ ಇಡೀ ಇಂಟರ್ನೆಟ್ ಲೋಕವನ್ನೇ ಹುಬ್ಬೇರಿಸುವಂತೆ ಮಾಡಿದೆ.

ಈತನಿಗೆ ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ ಆರು ಜನ ಪತ್ನಿಯರಿದ್ದು, ಅಚ್ಚರಿಯ ವಿಷಯವೆಂದರೆ, ಈ ಆರೂ ಜನ ಮಹಿಳೆಯರು ಒಂದೇ ಸಮಯದಲ್ಲಿ ಗರ್ಭಿಣಿಯಾಗಿದ್ದಾರೆ!

ಹೇಗೆ ಸಾಧ್ಯವಾಯಿತು ಈ ಅಚ್ಚರಿ?: ಕೀನ್ಯಾದ ಬುಡಕಟ್ಟು ಸಮುದಾಯವೊಂದರಲ್ಲಿ ಬಹುಪತ್ನಿತ್ವ ಸಾಮಾನ್ಯ ಸಂಗತಿಯಾಗಿರಬಹುದು. ಆದರೆ, ಎಲ್ಲಾ ಪತ್ನಿಯರೂ ಒಂದೇ ಸಮಯದಲ್ಲಿ ಗರ್ಭ ಧರಿಸುವುದು ಅತ್ಯಂತ ಅಪರೂಪದ ಮತ್ತು ಅಚ್ಚರಿಯ ವಿಷಯವಾಗಿದೆ.

ವರದಿಗಳ ಪ್ರಕಾರ, ಆತನ ಮೊದಲ ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದರೆ, ಎರಡನೇ ಪತ್ನಿ ಆರೂವರೆ ತಿಂಗಳು, ಮತ್ತು ಉಳಿದ ನಾಲ್ವರು ಪತ್ನಿಯರು ಆರು ತಿಂಗಳ ಗರ್ಭಿಣಿಯರಾಗಿದ್ದಾರೆ. ಈ ವಿಚಿತ್ರ ಕುಟುಂಬದ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು, “ಇದು ಹೇಗೆ ಸಾಧ್ಯ?” ಎಂದು ನೆಟ್ಟಿಗರು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.

ಪತಿಯೇ ಈಗ 24/7 ನರ್ಸ್!: ಈ ಬಗ್ಗೆ ಮಾತನಾಡಿರುವ ಆರು ಪತ್ನಿಯರ ಪತಿ, ತನ್ನ ಸದ್ಯದ ಪರಿಸ್ಥಿತಿಯನ್ನು ಹಾಸ್ಯಮಯವಾಗಿ ವಿವರಿಸಿಕೊಂಡಿದ್ದಾನೆ. ನನ್ನ ಆರು ಜನ ಪತ್ನಿಯರೂ ಒಂದೇ ಬಾರಿಗೆ ಗರ್ಭಿಣಿಯಾಗಿದ್ದಾರೆ. ಈಗ ನಾನು ಅವರ ಪಾಲಿಗೆ 24/7 ನರ್ಸ್ ಆಗಿ ಬದಲಾಗಿದ್ದೇನೆ.

ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಬಯಕೆ. ಒಬ್ಬರಿಗೆ ಮಾವಿನಹಣ್ಣು ಬೇಕು, ಇನ್ನೊಬ್ಬರಿಗೆ ಹುಣಸೆಹಣ್ಣು ಬೇಕು, ಅವರ ಎಲ್ಲಾ ಆಸೆಗಳನ್ನು ಪೂರೈಸುವುದೇ ನನ್ನ ಸದ್ಯದ ಕೆಲಸ, ಎಂದು ಆತ ಹೇಳಿಕೊಂಡಿದ್ದಾನೆ.

ಈ ಅಪರೂಪದ ಕುಟುಂಬವು ಇದೀಗ ಆರು ಮುದ್ದು ಕಂದಮ್ಮಗಳ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದು, ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನರ ಗಮನ ಸೆಳೆಯುತ್ತಿದೆ.

Previous articleಡಿಕೆಶಿಯನ್ನು ಕಟ್ಟಿಹಾಕಲು ಸಿದ್ದು ಬಣದ ‘2028’ ಬಾಣ: ಆಫರ್‌ಗೆ ಸತೀಶ್ ಸೈಲೆಂಟ್
Next articleನವದೆಹಲಿ ಮತ್ತೆ ಬೆಚ್ಚಿಬಿದ್ದ ಕ್ಷಣ: ಏರ್‌ಪೋರ್ಟ್ ಬಳಿ ಭಾರಿ ಸ್ಫೋಟದ ಶಬ್ದ

LEAVE A REPLY

Please enter your comment!
Please enter your name here