ನವದೆಹಲಿ: ʻವಂದೇ ಮಾತ್ರರಂʼ ಗೀತೆಯನ್ನು ಕೇಳಿದರೆ ಜನ,ಮನ,ತನುಗಳಲ್ಲಿ ರೋಮಾಂಚನವಾಗುತ್ತದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಶಾಲಾ-ಕಾಏಜುಗಳಲ್ಲಿ ಈ ಗೀತೆಯನ್ನ ಪ್ರತಿದಿನವು ಮೂಳಗಿಸಲಾಗುತಿದೆ. ಆದರೆ ಇದೀಗ ʻವಂದೇ ಮಾತ್ರರಂʼ ಗೀತೆ 150 ವರ್ಷಗಳನ್ನ ಪೂರ್ಣಗೊಳಿಸಿದೆ. ಇದನ್ನು ಬಂಕಿಮ್ ಚಂದ್ರ ಚಟರ್ಜಿಯವರು 150 ವರ್ಷಗಳ ಹಿಂದೆ ಬರೆದಿದ್ದರು.
ಮೊದಲಿಗೆ ವಂದೇ ಮಾತರಂ ಹಾಡಿನಲ್ಲಿ ದುರ್ಗಾ ಮಾತೆಯನ್ನು ಬಣ್ಣಿಸುಂತ ಸಾಲುಗಳಿದ್ದವು. ಆ ಸಾಲುಗಳಿಗೆ ನೆಹರೂ ಅವರು ಕತ್ತರಿ ಹಾಕಿಸಿ ಅದನ್ನು ಕಾಂಗ್ರೆಸ್ಸಿನ ರಾಷ್ಟ್ರೀಯ ಗೀತೆಯನ್ನಾಗಿಸಿದ್ದರು. ಬಿಜೆಪಿಯ ವಕ್ತಾರ ಸಿಆರ್ ಕೇಶವನ್ ಅವರು ಆಪಾದಿಸಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರಿಗೆ ನೆಹರೂ ಬರೆದಿದ್ದ ಪತ್ರಗಳಲ್ಲಿ ವಂದೇ ಮಾತರಂ ಹಾಡಿನ ಸಾಲುಗಳಿಗೆ ಕತ್ತರಿ ಹಾಕಿದ್ದ ವಿಚಾರವನ್ನು ಖುದ್ದು ನೆಹರೂ ಅವರೇ ಪ್ರಸ್ತಾಪಿಸಿದ್ದರು ಎಂದು ಅವರು ಹೇಳಿದ್ದಾರೆ.
‘ವಂದೇಮಾತರಂ’ ಹಾಡನ್ನು ಈ ಮೊದಲು ಕಾಂಗ್ರೆಸ್ ಪಕ್ಷವು ತನ್ನ ರಾಷ್ಟ್ರೀಯ ಗೀತೆಯನ್ನಾಗಿ ರೂಪಿಸಿಕೊಂಡಿತ್ತು. ಈಗ ಅದರಲ್ಲಿರುವ ಸಾಲುಗಳನ್ನು ಮೊಟಕುಗೊಳಿಸಿ. ಮೊದಲಿಗೆ ಬರೆದಾಗ ಇರುವಂತಹ ಸಾಲುಗಳು ಮತ್ತು ಕೆಲವು ಪದಗಳು ʻವಂದೇ ಮಾತರಂʼ ಗೀತೆಯ ಮೂಲ ರಚನೆಯಲ್ಲಿ ದುರ್ಗಾ ಮಾತೆಯನ್ನು ವರ್ಣಿಸುವ ಸಾಲುಗಳಿದ್ದವು. ಆ ಸಾಲುಗಳು ನೆಹರೂ ಅವರಿಗೆ ಇಷ್ಟವಾಗಲಿಲ್ಲ.
ದುರ್ಗಾ ಮಾತೆಯನ್ನು ಹೊಗಳುವ ಸಾಲುಗಳು ಇರುವ ಕಾರಣ ಅದನ್ನು ರಾಷ್ಟ್ರಗೀತೆಯಾಗಿ ಎಲ್ಲಾ ಸಮುದಾಯದವರು ಹಾಡಲು ಸಾಧ್ಯವಾಗುವುದಿಲ್ಲ, ಎಂದು ನೆಹರೂ ಆ ಸಾಲುಗಳಿಗೆ ಕತ್ತರಿ ಹಾಕಿದಾರೆ. ಎಂದು ಬಿಜೆಪಿಯ ವಕ್ತಾರರಾದ ಸಿಆರ್ ಕೇಶವನ್ ಆಪಾದಿಸಿದ್ದಾರೆ.
150ನೇ ವರ್ಷದ ಸ್ಮರಣೋತ್ಸವ ಇದೇ ನ. 6 ರಂದು ವಂದೇ ಮಾತರಂ ಹಾಡಿಗೆ , ನೆಹರೂ ತಮ್ಮ ಮೇಲುಸ್ತುವಾರಿಯಲ್ಲಿ ಗೀತೆಯ ಸಾಲುಗಳಿಗೆ ಕತ್ತರಿ ಹಾಕಲಾಗಿದ್ದ ದುರ್ಗಾ ಮಾತೆಯ ಬಣ್ಣನೆಯ ಸಾಲುಗಳನ್ನು ಈಗ ಸೇರಿಸಿ ಇಡೀ ದೇಶಾದ್ಯಂತ ಹಾಡಿಸಲು ಸಿದ್ಧರಾಗಿದ್ದಾರೆ ಎಂದು ಕೇಶವನ್ ಹೇಳಿದ್ದಾರೆ. “ವಂದೇ ಮಾತರಂ ಹಾಡಿಗೆ ಕತ್ತರಿ ಹಾಕಿದ್ದಕ್ಕೆ ನೆಹರೂ ಅವರು ಸುಭಾಷ್ ಚಂದ್ರ ಬೋಸ್ ಅವರಿಗೆ ಬರೆದಿದ್ದ ಪತ್ರದಲ್ಲಿ ಇದರ ಬಗ್ಗೆಗೆ ಉಲ್ಲೇಖಿಸಿದ್ದಾರೆ, ಅದಲ್ಲದೇ ತಮ್ಮ ನಡೆಯನ್ನೂ ಅವರು ಸಮರ್ಥಿಸಿಕೊಂಡಿದ್ದಾರೆ” ಎಂದು ಕೇಶವನ್ ತಿಳಿಸಿದ್ದಾರೆ.
ಕನ್ನಡಿಗರ ಹೃದಯದಲ್ಲಿ‘ವಂದೇ ಮಾತರಂ’ ಬಹಳ ವಿಶೇಷವಾಗಿ ಮಿಡಿದ ಕಥೆಯು ಖ್ಯಾತ ಗಾಯಕ ಶಂಕರ್ ಶಾನುಭಾಗ್ ರವರ ‘ವಂದೇ ಮಾತರಂ’ ಗೀತೆಯ ಮಹತ್ವದ ಕುರಿತು ಅನುಭವವನ್ನು ತುಣುಕನ್ನು ಹಂಚಿಕೊಂಡಿದ್ದಾರೆ. ಶಾನುಭಾಗ್ ಅವರ ಪ್ರಕಾರ, ಬಾಲ್ಯದಲ್ಲಿ ಕೇವಲ ಶಿಸ್ತಿಗಾಗಿಯೇ ʻವಂದೇ ಮಾತ್ರರಂʼ ಹಾಡನ್ನ ಹಾಡುತ್ತಾರೆ ಎಂದು ತಿಳಿದು ಬೆಳದವರು. ಹೀಗೆ ಬೆಳೆಯುತ್ತಾ ಪ್ರಪಂಚದ ದೇಶಭಕ್ತಿಯ ಮಂತ್ರವಾಗಿ ಪರಿವರ್ತನೆಗೊಂಡಿತು.
ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಈ ಒಂದೇ ಗೀತೆಯು ಲಕ್ಷಾಂತರ ಜನರನ್ನು ಒಗ್ಗೂಡಿಸಿಕೊಂಡು, ಹೋರಾಟಕ್ಕೆ ಸ್ಫೂರ್ತಿ ನೀಡಿತ್ತು. ಹಾಗಾಗಿಯೇ, ಶಾನುಭಾಗ್ ಅವರು ಈ ಗೀತೆಯನ್ನು ಪೂರ್ಣವಾಗಿ ಹಾಡಲು ಆದ್ಯತೆ ನೀಡುತ್ತಾರೆ.
ರಣಮಂತ್ರ , ಏಕತೆಯ ಸ್ವರ, ಕವಿ ಮತ್ತು ಕಾದಂಬರಿಕಾರ ಬಂಕಿಮಚಂದ್ರ ಚಟರ್ಜಿಯವರು ರಚಿಸಿದ ‘ವಂದೇ ಮಾತರಂ’ ಗೀತೆಯು ಕೇವಲ ಹಾಡಾಗಿ ಗುನೂಗಿ ಬಿಡಲಿಲ್ಲ ಬದಲಿಗೆ ಹಸಿರಾಗಿ ಉಳಿಯಿತು. ಅದು ದೇಶಭಕ್ತಿಯನ್ನು ಜಾಗೃತಗೊಳಿಸುವಲ್ಲಿ ಸಹಾಯಕವಾಯಿತು. ಬ್ರಿಟಿಷ್ ಆಡಳಿತದ ಅಡಿಪಾಯವನ್ನೇ ಅಲುಗಾಡಿಸಿದ ವೀರಮಂತ್ರವಾಯಿತು. ಸ್ವದೇಶಿ ಚಳುವಳಿಗೆ ಪ್ರಬಲ ಪ್ರೇರಣೆಯಾದ ಈ ಗೀತೆ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕೋಟ್ಯಂತರ ಭಾರತೀಯರ ಮನಸ್ಸಿನಲ್ಲಿ ದೇಶಪ್ರೇಮದ ಕಿಚ್ಚು ಹಚ್ಚಿತು.
ಇದು ಬ್ರಿಟಿಷ್‌ರ ಸಾಮ್ರಾಜ್ಯದ ಪತನಕ್ಕೆ ಕಾರಣವಾದಂತ ಪ್ರಮುಖ ಶಕ್ತಿಯಲ್ಲಿ ಒಂದು ಎನ್ನಬಹುದು. ಹಾಗಾಗಿಯೇ ಸ್ವಾತಂತ್ರ್ಯಾದ ನಂತರ ʻವಂದೇ ಮಾತ್ರರಂʼಗೆ ರಾಷ್ಟ್ರೀಯ ಗೀತೆಯ ಸ್ಥಾನಮಾನ ನೀಡಲಾಗಿದೆ. “ಅಂದು ನೆಹರೂ ಅವರು ಯಾರೂ ವ್ಯಕ್ತಿಯ ಮನಸ್ಸಿಗೆ ನೋವಾಗಬಹುದು ಎಂದು ಅಂದುಕೊಂಡು ಈ ಹಾಡಿನ ಕೆಲವು ಸಾಲುಗಳಿಗೆ ಕತ್ತರಿ ಹಾಕಿದ್ದರು. ಆದರೆ, ಹಾಗೇ ವಿಚಾರಿಸಿದರೆ, ನೆಹರೂರಲ್ಲಿದ್ದ ಆ ಓಲೈಕೆಯ ರಾಜಕಾರಣವು ಈಗಿನ ನಮ್ಮ ದೇಶಕ್ಕೆ ಎಷ್ಟು ದೊಡ್ಡ ಸವಾಲುಗಳನ್ನ ಸೃಷ್ಟಿಸಿದೆ ಎಂಬುದನ್ನು ಇಂದಿನ ಯುವ ಪೀಳಿಗೆಯು ಅರ್ಥ ಮಾಡಿಕೊಳ್ಳಬೇಕು” ಎಂದು ಬಿಜೆಪಿ ವಕ್ತಾರ ಕೇಶವನ್ ಹೇಳಿದ್ದಾರೆ.
























