ಪಟನಾ: ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ಗುರುವಾರ ನಡೆಯಲಿದೆ. 3.75 ಕೋಟಿ ಮತದಾರರು 1314 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಮೊದಲ ಹಂತದಲ್ಲಿ ಇಂಡಿಯಾ ಬ್ಲಾಕ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಮತ್ತು ಉಪಮುಖ್ಯಮಂತ್ರಿ ಬಿಜೆಪಿಯ ಸಾಮ್ರಾಟ್ ಚೌಧರಿ ಅವರ ಭವಿಷ್ಯವೂ ನಿರ್ಧಾರವಾಗಲಿದೆ.
ತೇಜಸ್ವಿ ಯಾದವ್ ರಾಘೋಪುರದಿಂದ ಹ್ಯಾಟ್‌ಟ್ರಿಕ್ ಗೆಲುವನ್ನು ಎದುರು ನೋಡುತ್ತಿದ್ದರೆ, 2010ರಲ್ಲಿ ರಾಬಡೀ ದೇವಿ ಅವರನ್ನು ಸೋಲಿಸಿದ್ದ ಬಿಜೆಪಿಯ ಸತೀಶ್ ಕುಮಾರ್ ಅವರಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಾರೆ. ಜನ್‌ಸುರಾಜ್‌ನಿಂದ ಚಂಚಲ್ ಸಿಂಗ್ ಕೂಡ ಕಣದಲ್ಲಿದ್ದಾರೆ. ಪಕ್ಕದ ಮಹುವಾ ಕ್ಷೇತ್ರದಲ್ಲಿ ತೇಜಸ್ವಿ ಯಾದವ್ ಸೋದರ ತೇಜ್ ಪ್ರತಾಪ್ ಯಾದವ್ ತನ್ನದೇ ಪಕ್ಷ ಜನಶಕ್ತಿ ಜನತಾದಳ ಕಟ್ಟಿ ಕಣಕ್ಕಿಳಿದಿದ್ದಾರೆ. ಅಲ್ಲಿ ಬಹುಕೋನ ಸ್ಪರ್ಧೆ ಏರ್ಪಟ್ಟಿದೆ.
ಕುದ್ದಾನಿ ಮತ್ತು ಮುಜಪ್ಟರ್ ಪುರ ಕ್ಷೇತ್ರಗಳಲ್ಲಿ ಅತಿ ಹೆಚ್ಚು, ತಲಾ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
- 121 ಕ್ಷೇತ್ರದ 3.75 ಮತದಾರರ ಪೈಕಿ 10.72 ಲಕ್ಷ ಮೊದಲ ಬಾರಿ ಮತದಾರರ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ.
- 18-19 ವರ್ಷ ವಯಸ್ಸಿನ ಮತದಾರರ ಸಂಖ್ಯೆ 7.38 ಲಕ್ಷದಷ್ಟಿದೆ
- 45,341 ಪೋಲಿಂಗ್ ಬೂತ್‌ಗಳಲ್ಲಿ ಮತದಾನಕ್ಕೆ ಏರ್ಪಾಡಾಗಿದೆ. ಇದರಲ್ಲಿ 36,.733 ಕ್ಷೇತ್ರಗಳು ಗ್ರಾಮಾಂತರ ಪ್ರದೇಶದಲ್ಲಿವೆ.
ಆರ್‌ಜೆಡಿಯ ಹಾಲಿ ಎಂಎಲ್‌ಎ ಮುಕೇಶ್ ರೌಶನ್, ಲೋಕ ಜನಶಕ್ತಿಯ ಸಂಜಯ್ ಸಿಂಗ್ ಮತ್ತು ಸ್ವತಂತ್ರ ಅಭ್ಯರ್ಥಿ ಅಶ್ಮಾ ಪರ್ವೀನ್ ಕಣದಲ್ಲಿದ್ದಾರೆ. ನಿತೀಶ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಬಿಜೆಪಿಯ ವಿಜಯಕುಮಾರ್ ಸಿನ್ಹಾ ಲಖಿಸರಾಯ್ ಕ್ಷೇತ್ರದಿಂದ ನಾಲ್ಕನೇ ಬಾರಿ ಮರು ಆಯ್ಕೆ ಬಯಸಿದ್ದಾರೆ. ಕಣದಲ್ಲಿ ಕಾಂಗ್ರೆಸ್‌ನ ಅಮರೇಶ್ ಕುಮಾರ್ ಮತ್ತು ಜನ್ ಸುರಾಜ್ ಪಾರ್ಟಿಯ ಸೂರಜ್ ಕುಮಾರ್ ಕೂಡ ಇದ್ದು, ಅಂಥದ್ದೇನೂ ಪ್ರತಿಸ್ಪರ್ಧೆ ಒಡ್ಡಿಲ್ಲ. ವಿಧಾನಪರಿಷತ್ ಸದಸ್ಯರಾಗಿರುವ ಮತ್ತೊಬ್ಬ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಈಗ ತಾರಾಪುರ ಕ್ಷೇತ್ರದಿಂದ ವಿಧಾನಸಭೆಗೆ ಪ್ರವೇಶಿಸಲು
ಸ್ಟಾರ್ ಅಭ್ಯರ್ಥಿಗಳು: ಜನಪದ ಗಾಯಕಿ ಮೈಥಿಲಿ ಠಾಕೂರ್ ಬಿಜೆಪಿ ಅಭ್ಯರ್ಥಿಯಾಗಿ ಅಲಿಗಂಜ್‌ನಿಂದ, ಭೋಜಪುರಿ ಸೂಪರ್ ಸ್ಟಾರ್‌ಗಳಾದ ಕೇಸರಿ ಲಾಲ್ ಯಾದವ್ ಆರ್‌ಜೆಡಿ ಅಭ್ಯರ್ಥಿಯಾಗಿ ಛಪ್ರಾದಿಂದ ಹಾಗೂ ರಿತೇಶ್ ಪಂಡೆ ಕರ್‌ಗಹಾರ್ ಕ್ಷೇತ್ರದಿಂದ ಜನ್ ಸುರಾಜ್ ಪಾರ್ಟಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಮುಂದಾಗಿದ್ದಾರೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರೂ ಆಗಿರುವ ಚೌಧರಿಗೆ ಆರ್‌ಜೆಡಿಯ ಅರುಣ್ ಕುಮಾರ್ ಸಹಾ ಅವರಿಂದ ಕಠಿಣ ಸ್ಪರ್ಧೆ ಎದುರಾಗಿದೆ. ರಘುನಾಥಪುರ ಕ್ಷೇತ್ರದಲ್ಲಿ ಒಂದು ಕಾಲದ ಪಾತಕಿ ಕಂ ರಾಜಕಾರಣಿ ಶಹಾಬುದ್ದೀನ್ ಪುತ್ರ ಒಸಾಮಾ ಸಾಹಬ್ ಕಣದಲ್ಲಿದ್ದಾರೆ.
ಮತದಾನಕ್ಕೆ 1 ದಿನ ಮೊದಲೇ ಬಿಜೆಪಿಗೆ ಜೆಎಸ್‌ಪಿ ಅಭ್ಯರ್ಥಿ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದೇ ದಿನ ಬಾಕಿಯಿರುವಾಗ ಜನ್ ಸುರಾಜ್ ಪಕ್ಷದ ಅಭ್ಯರ್ಥಿ ಸಂಜಯ್ ಸಿಂಗ್ ಬುಧವಾರ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಮುಂಗೇರ್ ವಿಧಾನಸಭಾ ಕ್ಷೇತ್ರದಲ್ಲಿ ಜನ್ ಸುರಾಜ್ ಪಕ್ಷದಿಂದ ಕಣಕ್ಕಿಳಿದಿದ್ದ ಸಂಜಯ್ ಸಿಂಗ್ ಬಿಜೆಪಿ ಅಭ್ಯರ್ಥಿ ಕುಮಾರ ಪ್ರಣಯ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದು ಎನ್‌ಡಿಎಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ತೇಜಸ್ವಿ, ಲಾಲೂ ಪ್ರಸಾದ್ ಔರಂಗ್‌ಜೇಬ್ ಪ್ರತಿನಿಧಿಗಳು: ಪ್ರಧಾನಿ ನರೇಂದ್ರ ಮೋದಿ ಅವರು ರಾಮ-ಲಕ್ಷ್ಮಣರ ಆದರ್ಶಗಳನ್ನು ಪ್ರತಿನಿಧಿಸುತ್ತಾರೆ. ಆದರೆ ಇಂಡಿಯಾ ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಹಾಗೂ ಆರ್‌ಜೆಡಿಯ ಲಾಲೂ ಪ್ರಸಾದ್ ಬಾಬರ್ ಮತ್ತು ಔರಂಗ್‌ಜೇಬ್ ಪ್ರತಿನಿಧಿಸುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರಮಾ ಬುಧವಾರ ಟೀಕಿಸಿದ್ದಾರೆ. ಚಂಪಾರಣ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತದಲ್ಲಿ ಬಹಳ ವರ್ಷಗಳ ನಂತರ ಬಿಹಾರದಲ್ಲಿ ಹಿಂದೂಗಳು ಮಾತನಾಡುತ್ತಿದ್ದಾರೆ. ಆರಾಮವಾಗಿ ಓಡಾಡಿಕೊಂಡಿದ್ದಾರೆ ಎಂದರು.

























