ಕೊಟ್ಟಾಯಂ: ಮಾರು ವೇಷಧರಿಸಿ ಕಳ್ಳತನ, ಧರೋಡೆಮಾಡುವುದು ಹಾಗೇ ಕೀಡ್ನಾಪ್‌ಮಾಡಿ ಮಾರಾಟಮಾಡುವು ಇಂತಹ ಹಿನಕೈತ್ಯಗಳನ್ನು ಎಸುಕುವ ಜನರಿಂದ ಮಾತ್ರ ಸುರಕ್ಷತೆದಿಂದಲ್ಲ, ಮಾರು ವೇಷದ ಕಳ್ಳ ಮಾಂತ್ರಿಕರಿಂದಲೂ ಎಚ್ಚರದಿಂದ ಇರಬೇಕು.
ಹೌದು..ಕೇರಳದ ಕೋಟ್ಟಾಯಂ ಜಿಲ್ಲೆಯಲ್ಲಿ, ಯುವತಿಗೆ ದೆವ್ವ ಬಿಡಿಸುವ ನೆಪದಲ್ಲಿ ಮನೆಗೆ ಬಂದಿದ್ದನು. ಆಕೆಗೆ ತನ್ನ ಮನೆಯವರ ಆಲಸ್ಯದಿಂದ ಈ ಘಟನೆ ನಡೆದಿದೆ. ನಂತರ ಯುವತಿಗೆ ಮದ್ಯ ಕುಡಿಸಿ, ಬೀಡಿ ಸೇದಿಸಿ, ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವತಿಯ ಪತಿ, ಹಾಗು ಆತನ ತಂದೆ ಮತ್ತು ಒಬ್ಬ ಮಾಂತ್ರಿಕನನ್ನು ಬಂಧಿಸಿದ್ದಾರೆ. ಯುವತಿಯ ಮಾನಸಿಕ ಸ್ಥಿತಿ ಹದಗೆಟ್ಟ ನಂತರ ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮಾಂತಿಕನ ಕಾಮದಾಟಕ್ಕೆ ಯುವತಿಯ ಮಾನಸಿಕ ಸ್ಥಿತಿ ಹದಗೆಟ್ಟಿದ್ದು, ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ ನಂತರ ತನಿಖೆಗೆ ಒಳಪಡಿಸಿಕೊಡು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶುಕ್ರವಾರ ಮಾಂತ್ರಿಕ, ಸಂತ್ರಸ್ತೆಯ ಪತಿ ಹಾಗೂ ಆತನ ತಂದೆಯನ್ನು ಬಂಧಿಸಿದ್ದಾರೆ.
ಕಳೆದ ವಾರ, ಯುವತಿಯ ಪತಿ ಅಖಿಲ್ ದಾಸ್ ಮತ್ತು ತನ್ನ ಕುಟುಂಬ ಸದಸ್ಯನಾದ ಶಿವದಾಸ್ ಎಂಬ ಮಾಂತ್ರಿಕನನ್ನು ಮನೆಗೆ ಕರೆಸಿದ್ದರು. ಯುವತಿಗೆ ದೆವ್ವ ಹಿಡಿದಿದೆ ಹೀಗಾಗಿ ಆಕೆಯ ದೇಹದಲ್ಲಿರುವ ದೆವ್ವ ಹೊರ ಹಾಕಬೇಕೆಂದು ಮಾಂತ್ರಿಕನನ್ನು ಕರೆಸಲಾಗಿದೆ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ನಂತರ ದೆವ್ವ ಬಿಡಿಸುವ ನೆಪದಲ್ಲಿ ಮಾಟಮಂತ್ರ ಮಾಡಲು ಯುವತಿಗೆ ಸುಮಾರು ಗಂಟೆಗಳ ಕಾಲ ಹಿಂಸೆಯಿಂದ ಬಳುವಂತೆ ಮಾಡಿದ್ದಾರೆ.
ಯುವತಿಯ ಮೇಲೆ ದೈಹಿಕ ಹಲ್ಲೆ ನಡೆಸಿದ ಮತ್ತು ಇದಕ್ಕೆ ಪ್ರೋತ್ಸಹ ನೀಡಿದ ಕುಟುಂಬವನ್ನ ವಶಕ್ಕೆ ಪಡೆದು ಮಾಹಿತಿಯನ್ನ ತಿಳಿಯುವಾಗ, ಪೊಲೀಸರ ಪ್ರಕಾರ, ಸಂತ್ರಸ್ತೆ ಪತಿಯ ತಾಯಿ ಮೃತ ಸಂಬಂಧಿಕರ ದುಷ್ಟಶಕ್ತಿಗಳು ಯುವತಿಯ ದೇಹವನ್ನು ಆವರಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಹಾಗಾಗಿ ಮಾಂತ್ರಿಕನನ್ನು ಮನೆಗೆ ಕರೆಸಿ ದೆವ್ವ ಬಿಡಿಸಲು, ಮಾಟಮಂತ್ರಕ್ಕೆ ವ್ಯವಸ್ಥೆ ಮಾಡಿದ್ದರು. ಈ ಮಾಟಮಂತ್ರದ ಪ್ರಕ್ರಿಯೆ ಬೆಳಿಗ್ಗೆ 11 ಗಂಟೆಗೆ ಆರಂಭವಾಗಿ ತಡರಾತ್ರಿಯವರೆಗೂ ನಡೆದಿತ್ತು ಎಂದರು.
ದೆವ್ವ ಬಿಡಿಸುವ ಕಾರಣವಾಗಿ ವಿಧಿ ವಿಧಾನಗಳನ್ನು ಮಾಡುವುದಾಗಿ ಹೇಳಿ ಇದೇ ಸಂದರ್ಭದಲ್ಲಿ ಆಕೆಗೆ ಮದ್ಯ ಕುಡಿಸಿ, ಬೀಡಿ ಸೇದಲು ಒತ್ತಾಯಿಸಿದ್ದಾರೆ. ಅಲ್ಲದೆ ʼಪವಿತ್ರ ಭಸ್ಮʼ ಎಂದು ಬೂದಿಯನ್ನು ಸಹ ತಿನ್ನಿಸಿದ್ದಾರೆ, ಮತ್ತು ದೈಹಿಕವಾಗಿ ಹಲ್ಲೆ ನಡೆಸಿ ದೇಹದ ಮೇಲೆ ಸುಟ್ಟ ಗಾಯ ಮಾಡಿದ್ದಾರೆ. ಇದಲ್ಲದೇ ದೈಹಿಕ ಹಿಂಸೆ ನೀಡಿ ಯುವತಿಗೆ ಘೋರ ಕಿರುಕುಳ ನೀಡಿದ್ದಾರೆ. ಇದೆಲ್ಲದರಿಂದ ಬೇಸತ್ತ ಯುವತಿಯನ್ನ ಕೊನೆಗೆ ಕಾಮುಕ ಪ್ರಜ್ಞಾಹೀನ ಸ್ಥಿತಿಗೆ ತಂದಿದ್ದಾರೆ.
ಈ ಎಲ್ಲದರ ಘಟನೆಯ ಬಳಿಕ ಆರೋಪಿಗಳು ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದರು. ಇದರ ಪ್ರಮುಖ ಆರೋಪಿಯಾಗಿದ್ದ ಮಾಂತ್ರಿಕನನ್ನು ತಿರುವಲ್ಲಾದ ಮುತ್ತೂರಿನಲ್ಲಿ ಬಂಧಿಸಲಾಗಿತ್ತು. ಇನ್ನೂಳಿದವರನ್ನು ಸಹ ಬಂಧಿಸಲಾಯಿತು. ಆದರೆ ಇದೆಲ್ಲದರ ನಂತರವು ಸಂತ್ರಸ್ತೆ ಪತಿಯ ತಾಯಿ ತಲೆಮರೆಸಿಕೊಂಡಿದ್ದಾಳೆ ಎನ್ನಲಾಗಿದೆ.























