ಹಾಡಿನಿಂದ ರಾಜಕೀಯದ ಅಖಾಡಕ್ಕೆ: ಸಂಗೀತ ಸಾಮ್ರಾಜ್ಞಿ ಮೈಥಿಲಿ ಠಾಕೂರ್ ಈಗ ಶಾಸಕಿ!

0
27

ಬಿಹಾರ ಮೂಲದ ಮೈಥಿಲಿ ಮತ್ತು ಭೋಜ್‌ಪುರಿ ಜಾನಪದ ಗಾಯಕಿ ಮೈಥಿಲಿ ಠಾಕೂರ್, ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದು, 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಜುಲೈ 25, 2000 ರಂದು ಜನಿಸಿದ ಠಾಕೂರ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ದರ್ಭಂಗಾ ಜಿಲ್ಲೆಯ ಅಲಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಅವರ ಉಮೇದುವಾರಿಕೆಯನ್ನು ಉತ್ತರ ಬಿಹಾರದಲ್ಲಿ ಬಿಜೆಪಿಯ ಯುವ ಮತ್ತು ಸಾಂಸ್ಕೃತಿಕ ಆಕರ್ಷಣೆಯನ್ನು ಬಲಪಡಿಸುವ ಕಾರ್ಯತಂತ್ರದ ಕ್ರಮವೆಂದು ಪರಿಗಣಿಸಲಾಗಿದೆ. ಅಲಿನಗರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಮಧುಬನಿ ಜಿಲ್ಲೆಯ ಬೆನಿಪಟ್ಟಿಯಿಂದ ಬಂದ ಠಾಕೂರ್, ತಮ್ಮ ಸಹೋದರರಾದ ರಿಷವ್ ಮತ್ತು ಅಯಾಚಿ ಠಾಕೂರ್ ಅವರೊಂದಿಗೆ ಜಾನಪದ ಸಂಗೀತ ಪ್ರದರ್ಶನಗಳಲ್ಲಿ ಭಾಗಿಯಾಗಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು.

ಬಿಹಾರದ ಶ್ರೀಮಂತ ಮನೆತನದ ಮೈಥಿಲಿಯವರು ಭೋಜ್‌ಪುರಿ ಸಂಗೀತ ಸಂಪ್ರದಾಯಗಳನ್ನು ಸಂರಕ್ಷಿಸಿಕೊಂಡು ಅದರಲ್ಲಿ ತಮ್ಮ ಉತ್ಸಾಹವನ್ನ ತೊಡುಗಿಸಿಕೊಂಡಿದ್ದರು. ಅವರು ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ್ ಸೇರಿದಂತೆ ಪುರಸ್ಕಾರಗಳನ್ನು ಗಳಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನಗಳ ಮೊದಲು ಬಿಜೆಪಿಗೆ ಸೇರಿದ ಠಾಕೂರ್, “ಪಕ್ಷ ನನಗೆ ಯಾವುದೇ ಕೆಲಸ ವಹಿಸಿದರೂ, ನಾನು ಅದನ್ನು ಪೂರ್ಣ ಸಮರ್ಪಣಾಭಾವದಿಂದ ಮಾಡುತ್ತೇನೆ” ಎಂದು ಹೇಳಿದರು. ಮೈಥಿಯವರ ಪ್ರವೇಶಿಸಿದ ನಂತರ ಈ ಪ್ರದೇಶದ ಬಿಜೆಪಿಯ ಅಭಿಯಾನಕ್ಕೆ ಶಕ್ತಿ ತುಂಬಿದ್ದಾರೆ. ಯುವ ಮತದಾರರನ್ನು ಆಕರ್ಷಿಸಲು ಅವರ ಸಾಂಸ್ಕೃತಿಕ ಜನಪ್ರಿಯತೆಯನ್ನು ಬಳಸಿಕೊಳ್ಳುವ ಆಶಯವನ್ನು ಪಕ್ಷ ಹೊಂದಿದೆ.

ರಾಜಕೀಯ ಸ್ಪರ್ಧೆ: ಮೈಥಿಲಿ ಠಾಕೂರ್ ವಿರುದ್ಧ ಬಿನೋದ್ ಮಿಶ್ರಾ ಠಾಕೂರ್ ಅವರು ರಾಷ್ಟ್ರೀಯ ಜನತಾ ದಳದ (RJD) ಬಿನೋದ್ ಮಿಶ್ರಾ ಅವರನ್ನು ಎದುರಿಸಿ, ಅವರು ಅದೇ ಕ್ಷೇತ್ರದ ಪ್ರಮುಖ ಸ್ಥಳೀಯ ನಾಯಕ ಮತ್ತು 2020 ರ ರನ್ನರ್ ಅಪ್ ಆಗಿದ್ದಾರೆ. ಠಾಕೂರ್ ಸೆಲೆಬ್ರಿಟಿ ಸ್ಥಾನಮಾನ, ಸಾಂಸ್ಕೃತಿಕ ಗುರುತು ಮತ್ತು ಯುವ ಆಕರ್ಷಣೆಯ ಪ್ರಭಾವವನ್ನು ತೊರುತ್ತಾರೆ.

ಸಾಂಸ್ಕೃತಿಕವಾಗಿ ಚೈತನ್ಯಶೀಲವಾಗಿರುವ ಮಿಥಿಲಾಂಚಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಅಲಿನಗರ ಕ್ಷೇತ್ರದಲ್ಲಿ ಬ್ರಾಹ್ಮಣರು, ಯಾದವರು, ಮುಸ್ಲಿಮರು ಮತ್ತು ಮಲ್ಲಾಗಳು ಮತ್ತು ಪಾಸ್ವಾನ್‌ಗಳಂತಹ ಅತ್ಯಂತ ಹಿಂದುಳಿದ ವರ್ಗಗಳು ಸೇರಿದಂತೆ ವೈವಿಧ್ಯಮಯ ಜನಸಂಖ್ಯೆ ಇದೆ.

ಐತಿಹಾಸಿಕವಾಗಿ ಆರ್‌ಜೆಡಿಯ ಭದ್ರಕೋಟೆಯಾಗಿದ್ದ ಈ ಕ್ಷೇತ್ರವು 2020 ರಲ್ಲಿ ಮಿಶ್ರಿ ಲಾಲ್ ಯಾದವ್ ವಿಕಾಸಶೀಲ ಇನ್ಸಾನ್ ಪಕ್ಷದ ಅಡಿಯಲ್ಲಿ ಗೆದ್ದು ಬಿಜೆಪಿಗೆ ಸೇರಿದಾಗ ಬದಲಾವಣೆ ಕಂಡಿತು. ಠಾಕೂರ್ ಮತ್ತು ಮಿಶ್ರಾ ನಡುವಿನ ಹೋರಾಟವು ಸಂಸ್ಕೃತಿ, ಜಾತಿ ಮತ್ತು ವರ್ಚಸ್ಸಿನ ಸ್ಪರ್ಧೆಯಾಗಿ ರೂಪುಗೊಳ್ಳುತ್ತಿದೆ.

ಮೈಥಿಲಿ ಠಾಕೂರ್ ಶೈಕ್ಷಣಿಕ ಅರ್ಹತೆಗಳು: ಮೈಥಿಲಿ ಠಾಕೂರ್ ಆರಂಭಿಕ ಶಾಲಾ ಶಿಕ್ಷಣವು ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಸ್ವಂತ ಹಳ್ಳಿಯಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ ಇವರ ಅಸಾಧಾರಣ ಗಾಯನ ಪ್ರತಿಭೆಯನ್ನು ಗುರುತಿಸಿ, ಅವರ ಕುಟುಂಬವು ಅವರಿಗೆ ಉತ್ತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅವಕಾಶಗಳನ್ನು ಒದಗಿಸಲು ದೆಹಲಿಗೆ ಸ್ಥಳಾಂತರಗೊಂಡರು.

ದೆಹಲಿಯ ದ್ವಾರಕಾದಲ್ಲಿರುವ CBSE-ಸಂಯೋಜಿತ ಶಾಲೆಯಾದ ಬಾಲ ಭವನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಉನ್ನತ ಶಿಕ್ಷಣಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಕಾಲೇಜಾದ ಆತ್ಮ ರಾಮ ಸನಾತನ ಧರ್ಮ ಕಾಲೇಜಿಗೆ ಸೇರಿಕೊಂಡರು.

1959 ರಲ್ಲಿ ಸ್ಥಾಪನೆಯಾದ ಕಾಲೇಜಿಗೆ 2025 ರಲ್ಲಿ NIRF ನಿಂದ ಭಾರತದಲ್ಲಿ 7 ನೇ ಸ್ಥಾನ ಸಿಕ್ಕಿತು. ಮೈಥಿಲಿಯವರ ಶಿಕ್ಷಣವು ಕಠಿಣ ಶೈಕ್ಷಣಿಕ ಕಲಿಕೆ ಮತ್ತು ಸಂಗೀತದ ಮೇಲಿನ ಒಲವು ಅವರನ್ನು ಇನ್ನಷ್ಟೂ ಎತ್ತರಕ್ಕೆ ಬೆಳೆಯಲು ಸಹಾಯ ಮಾಡಿತು.

ನಿವ್ವಳ ಮೌಲ್ಯ: 2025 ರ ಚುನಾವಣಾ ಅಫಿಡವಿಟ್ ಪ್ರಕಾರ, ಮೈಥಿಲಿ ಠಾಕೂರ್‌ರ ಒಟ್ಟು ಆಸ್ತಿಯ ಮೌಲ್ಯ ಸುಮಾರು ₹4 ಕೋಟಿಗಳಷ್ಟಿದ್ದು, ಇದರಲ್ಲಿ ಚರಾಸ್ಥಿ ಮತ್ತು ಸ್ಥಿರ ಆಸ್ತಿಗಳೂ ಸೇರಿವೆ ಎಂದು ಹೇಳಗಾಗುತ್ತಿದೆ. ಇದು ಜಾನಪದ ಗಾಯಕಿಯಾಗಿ ಮತ್ತು ಉದಯೋನ್ಮುಖ ಸಾರ್ವಜನಿಕ ವ್ಯಕ್ತಿಯಾಗಿ ಮೈಥಿಲಿಯವರ ಯಶಸ್ಸನ್ನು ಪ್ರತಿಬಿಂಬಿಸುತ್ತದೆ.

Previous articleಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆ ಸಾವು: ತನಿಖೆಗೆ ಖಂಡ್ರೆ ಆದೇಶ
Next articleKSRTC ಬಸ್ ಹರಿದು 2 ವರ್ಷದ ಬಾಲಕಿ ದುರ್ಮರಣ

LEAVE A REPLY

Please enter your comment!
Please enter your name here