Home Advertisement
Home ಸುದ್ದಿ ದೇಶ ಸ್ಥಿರತೆಗೆ ಧಕ್ಕೆ ಬೇಡ: ತೀರ್ಪುಗಳು ಶಾಯಿಯಲ್ಲಿ, ಮರಳಿನ ಮೇಲಲ್ಲ, ನ್ಯಾ. ನಾಗರತ್ನ ಕಿವಿಮಾತು

ಸ್ಥಿರತೆಗೆ ಧಕ್ಕೆ ಬೇಡ: ತೀರ್ಪುಗಳು ಶಾಯಿಯಲ್ಲಿ, ಮರಳಿನ ಮೇಲಲ್ಲ, ನ್ಯಾ. ನಾಗರತ್ನ ಕಿವಿಮಾತು

1
110

ನವದೆಹಲಿ: ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು ಬದಲಾದರು ಎಂಬ ಏಕೈಕ ಕಾರಣಕ್ಕಾಗಿ, ಅವರು ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಬದಲಾಯಿಸುವ ಅಥವಾ ಮಾರ್ಪಡಿಸುವ ಪ್ರವೃತ್ತಿಯನ್ನು ಮಾಡಬಾರದು ಎಂದು, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಹೇಳಕೆ ನೀಡಿದ್ದಾರೆ.

ನ್ಯಾಯಾಂಗದ ಸ್ಥಿರತೆ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿಯುವ ಮಹತ್ವದ ಸಂದೇಶವನ್ನು ಅವರು ಈ ಮೂಲಕ ನೀಡಿದ್ದಾರೆ. ಶನಿವಾರ ಹರಿಯಾಣದ ಸೋನಿಪತ್‌ನಲ್ಲಿರುವ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ‘ನ್ಯಾಯಾಂಗದ ಸ್ವಾತಂತ್ರ್ಯ’ ಕುರಿತ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ನ್ಯಾ. ನಾಗರತ್ನ, ಹಿಂದಿನ ಪೀಠಗಳು ನೀಡಿದ ತೀರ್ಪುಗಳನ್ನು ಬದಲಾಯಿಸುವ ರೂಢಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ತೀರ್ಪುಗಳು ಶಾಯಿಯಲ್ಲಿ, ಮರಳಿನ ಮೇಲಲ್ಲ: ನ್ಯಾಯಾಂಗದ ಸ್ವಾತಂತ್ರ್ಯದ ಬಗೆಗೆ ಹಂತಹಂತವಾಗಿ ರೂಪುಗೊಂಡ ತಿಳುವಳಿಕೆಯು, ದೇಶದ ಕಾನೂನು ವ್ಯವಸ್ಥೆಯ ಮೇಲಿನ ಸಾರ್ವಜನಿಕ ಭರವಸೆಯನ್ನು ಸಮರ್ಥಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಅವರು, “ನ್ಯಾಯಮೂರ್ತಿಗಳು ನೀಡುವ ತೀರ್ಪುಗಳನ್ನು ಶಾಯಿಯಲ್ಲಿ ಬರೆಯಲಾಗುತ್ತದೆ ವಿನಃ ಮರಳಿನ ಮೇಲಲ್ಲ. ಅವುಗಳನ್ನು ಅವು ಇದ್ದಂತೆಯೇ ನಾವು ಗೌರವಿಸಬೇಕು,” ಎಂದು ಮಹತ್ವದ ಹೇಳಿಕೆ ನೀಡಿದರು.

ಯಾವುದೇ ತೀರ್ಪಿನ ಬಗ್ಗೆ ಆಕ್ಷೇಪಣೆಗಳನ್ನು ಎತ್ತುವ ಸಂದರ್ಭದಲ್ಲಿ, ಅದು ಕೇವಲ ಕಾನೂನಿನ ವ್ಯಾಪ್ತಿ ಮತ್ತು ನಿಯಮಗಳಿಗೆ ಅನುಸಾರವಾಗಿ ಮಾತ್ರವೇ ಇರಬೇಕು. ಹಾಗೇ “ನ್ಯಾಯಮೂರ್ತಿಗಳು ಬದಲಾಗಿದ್ದಾರೆ ಎಂಬ ಕಾರಣಕ್ಕಾಗಿ ತೀರ್ಪುಗಳನ್ನು ಮಾರ್ಪಡಿಸಬಾರದು,” ಎಂದು ಅವರು ಒತ್ತಿ ಹೇಳಿದರು.

ಈ ಬದ್ಧತೆಯನ್ನು ಕಾಪಾಡಿಕೊಳ್ಳುವುದು ನ್ಯಾಯಾಂಗ ವ್ಯವಸ್ಥೆಯ ಭ್ರಾತೃತ್ವ ಮತ್ತು ಆಡಳಿತದ ಚೌಕಟ್ಟಿನಲ್ಲಿ ಪಾಲ್ಗೊಳ್ಳುವ ಎಲ್ಲರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಗಳನ್ನ ಸ್ಪಷ್ಟೀಕರಿಸಿದರು.

ನ್ಯಾಯಾಂಗದ ನಡವಳಿಕೆ ಬಹುಮುಖ್ಯ: ನ್ಯಾಯಾಂಗ ವ್ಯವಸ್ಥೆಯು ದೇಶದ ಆಡಳಿತದ ಒಂದು ಅವಿಭಾಜ್ಯ ಅಂಗವಾಗಿದೆ. ನ್ಯಾಯಾಂಗದ ಸ್ವಾತಂತ್ರ್ಯ ಕೇವಲ ನ್ಯಾಯಮೂರ್ತಿಗಳು ನೀಡುವ ಬೃಹತ್ ತೀರ್ಪುಗಳಿಂದ ಮಾತ್ರ ಇರುವುದಿಲ್ಲ.

ಜೊತೆಗೆ ಅವರ ವೈಯಕ್ತಿಕ ನಡವಳಿಕೆ, ನೈತಿಕತೆ ಮತ್ತು ವರ್ತನೆಯಿಂದಲೂ ರಕ್ಷಣೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ನ್ಯಾಯಾಧೀಶರ ಪ್ರತಿಯೊಂದು ನಡೆ ಮತ್ತು ನುಡಿ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸುವಂತಿರಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಹಿಂದಿನ ಪೀಠಗಳು ನೀಡಿದ ತೀರ್ಪುಗಳಿಂದ ತಮಗೆ ತೊಂದರೆಯಾಗಿದೆ ಎಂದು ವಾದಿಸುವ ಪಕ್ಷಗಳ ಮನವಿ ಆಲಿಸಿದ ನಂತರ ತೀರ್ಪುಗಳನ್ನು ರದ್ದುಗೊಳಿಸುವ ಒಂದು ಪ್ರವೃತ್ತಿ ಇತ್ತೀಚೆಗೆ ಬೆಳೆಯುತ್ತಿದೆ. ಈ ಕುರಿತು ಸುಪ್ರೀಂಕೋರ್ಟ್ ಸ್ವತಃ ನವೆಂಬರ್ 26ರಂದು ಕಳವಳ ವ್ಯಕ್ತಪಡಿಸಿತ್ತು.

ಹಾಗೇಕೆಲವೇ ದಿನಗಳಲ್ಲಿ ನ್ಯಾ. ನಾಗರತ್ನ ಅವರು ಈ ಹೇಳಿಕೆ ನೀಡಿದ್ದು, ನ್ಯಾಯಾಂಗದ ಕಾರ್ಯವೈಖರಿಯಲ್ಲಿ ಸ್ಥಿರತೆ ಮತ್ತು ದೀರ್ಘಾವಧಿಯ ವಿಶ್ವಾಸವನ್ನು ಕಾಪಾಡುವುದು ಬಹಳ ಪ್ರಮುಖ ಎಂದರು.

1 COMMENT

LEAVE A REPLY

Please enter your comment!
Please enter your name here