ಎಥೆನಾಲ್ ಟ್ಯಾಂಕರ್‌ಗೆ ಬೆಂಕಿ: ಚಾಲಕ ಸಜೀವ ದಹನ

0
32

ಚಿಂಚೋಳಿ(ಕಲಬುರಗಿ): ಚಿಂಚೋಳಿ ಪಟ್ಟಣದ ಸಿದ್ಧಶ್ರೀ ಎಥೆನಾಲ್ ಘಟಕದಿಂದ ಎಥೆನಾಲ್ ತುಂಬಿಕೊಂಡು ತೆಲಂಗಾಣಕ್ಕೆ ತೆರಳುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿದ್ದ ಪರಿಣಾಮ ಚಾಲಕ ಸಜೀವ ದಹನವಾಗಿರುವ ದಾರುಣ ಘಟನೆ ನೆರೆಯ ತೆಲಂಗಾಣ ರಾಜ್ಯದ ಪಿಲ್ಲಿಗುಂಡು ಗ್ರಾಮದಲ್ಲಿ ಸಂಭವಿಸಿದೆ.

ಚಿಂಚೋಳಿ ತಾಲೂಕಿನ ಹುಡದಳ್ಳಿ ಗ್ರಾಮ ನಿವಾಸಿ ನಿರಂಜನ್ ಜಮಾದಾರ (30) ಮೃತಪಟ್ಟ ಚಾಲಕ ಎಂದು ಗುರುತಿಸಲಾಗಿದೆ.

ಚಿಂಚೋಳಿ ನಗರದ ಸಿದ್ಧಸಿರಿ ಎಥೆನಾಲ್ ಕಾರ್ಖಾನೆಯಿಂದ ಎಥೆನಾಲ್ ತುಂಬಿದ್ದ ಟ್ಯಾಂಕರ್ ತೆಲಂಗಾಣಕ್ಕೆ ಹೋಗುವಾಗ ಅಪಘಾತಕ್ಕಿಡಾಗಿದೆ. ಈ ಕುರಿತು ತೆಲಂಗಾಣದ ಮಹಿಬೂಬನಗರ ಹತ್ತಿರದ ಅನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous article‘ಪದ ಶಕ್ತಿ ವಿಶ್ವ ಶಕ್ತಿ’ ಎಂದು ಹೇಳುವ ಮೂಲಕ: ಡಿಕೆಶಿ ದಿಢೀರ್‌ ಎಕ್ಸ ಫೋಸ್ಟ್
Next articleಎಐಸಿಸಿ ಅಧ್ಯಕ್ಷರಾದರೂ ಖರ್ಗೆ ಅಸಹಾಯಕ

LEAVE A REPLY

Please enter your comment!
Please enter your name here