ಚಿಂಚೋಳಿ(ಕಲಬುರಗಿ): ಚಿಂಚೋಳಿ ಪಟ್ಟಣದ ಸಿದ್ಧಶ್ರೀ ಎಥೆನಾಲ್ ಘಟಕದಿಂದ ಎಥೆನಾಲ್ ತುಂಬಿಕೊಂಡು ತೆಲಂಗಾಣಕ್ಕೆ ತೆರಳುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿದ್ದ ಪರಿಣಾಮ ಚಾಲಕ ಸಜೀವ ದಹನವಾಗಿರುವ ದಾರುಣ ಘಟನೆ ನೆರೆಯ ತೆಲಂಗಾಣ ರಾಜ್ಯದ ಪಿಲ್ಲಿಗುಂಡು ಗ್ರಾಮದಲ್ಲಿ ಸಂಭವಿಸಿದೆ.
ಚಿಂಚೋಳಿ ತಾಲೂಕಿನ ಹುಡದಳ್ಳಿ ಗ್ರಾಮ ನಿವಾಸಿ ನಿರಂಜನ್ ಜಮಾದಾರ (30) ಮೃತಪಟ್ಟ ಚಾಲಕ ಎಂದು ಗುರುತಿಸಲಾಗಿದೆ.
ಚಿಂಚೋಳಿ ನಗರದ ಸಿದ್ಧಸಿರಿ ಎಥೆನಾಲ್ ಕಾರ್ಖಾನೆಯಿಂದ ಎಥೆನಾಲ್ ತುಂಬಿದ್ದ ಟ್ಯಾಂಕರ್ ತೆಲಂಗಾಣಕ್ಕೆ ಹೋಗುವಾಗ ಅಪಘಾತಕ್ಕಿಡಾಗಿದೆ. ಈ ಕುರಿತು ತೆಲಂಗಾಣದ ಮಹಿಬೂಬನಗರ ಹತ್ತಿರದ ಅನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
