ದೆಹಲಿಯಲ್ಲಿ ಸ್ಫೋಟಕಗೂಂಡ ವಾಹನದ ಬಗ್ಗೆ ಕೆಲವು ಮಾಹಿತಿಗಳನ್ನ ಪತ್ತೆಹಚ್ಚಲಾಗಿದೆ. ಕಾರು ಚಲಾಯಿಸಿರುವ ವ್ಯಕ್ತಿಯ ಮಾಹಿತಿಯನ್ನ ತಿಳಿಯಲಾಗಿದೆ. ಇಂತಹ ಗಂಭೀರ ಕೃತ್ಯುದ ಹಿಂದೆ ಇರುವ ಕಾಣದ ಕೈವಾಡಿಗಳ ಕುರುಹು ಕಂಡುಹಿಡಿಯುವ ಕಾರ್ಯಾಚರಣೆ ನಡೆದಿದೆ.
ಹೌದು..ವಾಹನವನ್ನು ಡಾ.ಉಮರ್ ನಬಿ ಭಟ್ ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಮಾಡಲಾಗಿತ್ತು. ವ್ಯಕ್ತಿಯನ್ನ ಡಿಎನ್ಎಗ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೆಂಪು ಕೋಟೆ ಸ್ಫೋಟದ ಶಂಕಿತನನ್ನು ಡಾ. ಉಮರ್ ಉನ್ ನಬಿ ಎಂದು ಸ್ಪಷ್ಟೀಪಡಿಸಲಾಗಿದೆ.
ಕೆಂಪು ಕೋಟೆ ಬಳಿ ಸೋಮವಾರ ಸಂಜೆ ಒಂಬತ್ತು ಜೀವಗಳನ್ನು ಬಲಿ ಯಾಗಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಫೋಟದಲ್ಲಿ ಭಾಗಿಯಾದ ಐ20 ಕಾರನ್ನು ಚಲಾಯಿಸಿದ್ದ ಡಾ. ಉಮರ್ ನಬಿ ಭಟ್ ಅವರ ಡಿಎನ್ಎ ಮಾದರಿ ಮತ್ತು ಅವರ ತಾಯಿಯ ಡಿಎನ್ಎ ಮಾದರಿ ಎರಡು ಹೋಲಿಕೆಯಾಗಿವೆ ಎಂದು ಮೂಲಗಳು ಗುರುವಾರ ಬೆಳಿಗ್ಗೆ ತಿಳಿಸಿವೆ.
ಮೂಲಗಳ ಪ್ರಕಾರ, ಡಾ. ಉಮರ್ ನಬಿ ಭಟ್ ಅವರ ತಾಯಿಯ ಡಿಎನ್‌ಎ ಮಾದರಿಗಳನ್ನು ಪುಲ್ವಾಮಾದಲ್ಲಿ ಸಂಗ್ರಹಿಸಿ, ಲೋಕ ನಾಯಕ್ ಆಸ್ಪತ್ರೆಯಲ್ಲಿ ಇರಿಸಲಾಗಿರುವ ಗುರುತಿಸಲಾಗದ ಶವಗಳೊಂದಿಗೆ ಹೋಲಿಸಲು ದೆಹಲಿಗೆ ತರಲಾಗಿದೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೂಲಗಳು, ಭಟ್ ಮತ್ತು ಅವರ ತಾಯಿಯ ಡಿಎನ್‌ಎ ಮಾದರಿಗಳು ಹೊಂದಿಕೆಯಾಗುತ್ತಿದ್ದು, ಹೆಚ್ಚಿನ ವಿವರಗಳನ್ನು ನಂತರ ಪರಿಶೀಲಿಸಲಾಗುವುದು ಎಂದು ತಿಳಿಸಿವೆ.
ಮೃತದೇಹಗಳು ಭೌತಿಕವಾಗಿ ಗುರುತಿಸಲಾಗದಿದ್ದಾಗ, ಶಂಕಿತರನ್ನು ಅಥವಾ ಬಲಿಯಾದವರನ್ನ ಗುರುತಿಸಲು ತನಿಖಾಧಿಕಾರಿಗಳು ಡಿಎನ್‌ಎ ಮೂಲಕ ವ್ಯಕ್ತಿಗಳ ವಿವರವನ್ನ ಪತ್ತೆಹಿಡಿಯುವಂತೆ ಹೇಳಿದ್ದಾರೆ.
ಸೋಮವಾರ ಸಂಜೆ ಕೆಂಪು ಕೋಟೆ ಸ್ಫೋಟಕ್ಕೆ ಕೆಲವು ದಿನಗಳ ಮೊದಲು ಪತ್ತೆಯಾದ ಭಯೋತ್ಪಾದನಾ ಘಟಕದಲ್ಲಿ ಭಟ್ ವೈದ್ಯರ “ವೈಟ್-ಕಾಲರ್ ಗುಂಪಿನ” ನಾಯಕನೆಂದು ಪೊಲೀಸರು ಶಂಕಿಸಿದ್ದಾರೆ. “ಅವನು ಉಳಿದ ಗುಂಪನ್ನು ಮುನ್ನಡೆಸುತ್ತಿದ್ದ ಮತ್ತು ಪ್ರೇರೇಪಿಸುತ್ತಿದ್ದನೆಂದು ಶಂಕಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ (ಎಜಿಹೆಚ್) ಎಂಬ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದ “ಅಂತರ-ರಾಜ್ಯ ಮತ್ತು ಅಂತರರಾಷ್ಟ್ರೀಯ” ಭಯೋತ್ಪಾದಕ ಘಟಕವನ್ನ ಭೇದಿಸಿರುವುದಾಗಿ ಮತ್ತು ಕೆಂಪು ಕೋಟೆ ಸ್ಫೋಟಕದ ಗಂಟೆಗಳ ಮೊದಲು ಏಳು ಜನರನ್ನು ಬಂಧಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ವಾಹನ ಭಟ್ ಅವರ ಸ್ನೇಹಿತರಿಗೆ ಸೇರಿದ್ದು, ಅವರನ್ನೂ ವಶಕ್ಕೆ ಪಡೆಯಲಾಗಿದೆ. ಈಗ ವಿಚಾರಣೆ ನಡೆಸಲಾಗುತ್ತಿದೆ. ಕೆಂಪು ಕೋಟೆ ಸ್ಫೋಟದ ಮೊದಲೇ ಕೆಲವು ಭಯೋತ್ಪಾದಕರನ್ನ ಬಂಧಿಸಲಾಗಿತ್ತು. ಪುಲ್ವಾಮಾದ ಕೊಯಿಲ್ ಗ್ರಾಮದ ನಿವಾಸಿ ಭಟ್, ಫರಿದಾಬಾದ್‌ನ ಧೌಜ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದರು.
ಸ್ಫೋಟದ ಹಿಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಇತರ ಇಬ್ಬರು ವೈದ್ಯರಾದ ಕೊಯಿಲ್‌ನ ಡಾ. ಗನೈ ಮತ್ತು ಲಕ್ನೋದ ಡಾ. ಶಾಹೀನ್ ಶಾಹಿದ್ ಅನ್ಸಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳುದು ಬಂದಿದೆ.


























