ನ್ಯೂಯಾರ್ಕ್: ನ್ಯೂಯಾರ್ಕ್ ವೆಸ್ಟ್ ವರ್ಜಿನಿಯಾದ ಬಫಲೋದಿಂದ ಕಾಣೆಯಾಗಿದ್ದ ನಾಲ್ವರು ಭಾರತೀಯ ಹಿರಿಯ ನಾಗರಿಕರು ಶವವಾಗಿ ಪತ್ತೆಯಾಗಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದ ಭಾರತೀಯ ಕುಟುಂಬ ಸದಸ್ಯರಾದ ಆಶಾ ದಿವಾನ್ (85), ಕಿಶೋರ್ ದಿವಾನ್ (89) ಮತ್ತು ಶೈಲೇಶ್ ದಿವಾನ್ (86) ಹಾಗೂ ಗೀತಾ ದಿವಾನ್ (84) ಎನ್ನುವವರು ಆರು ದಿನಗಳ ಹಿಂದಷ್ಟ್ರೇ ಪೆನ್ಸಿಲ್ವೇನಿಯಾದ ಎರಿಯ ಪೀಚ್ ಸ್ಟ್ರೀಟ್‌ನಲ್ಲಿರುವ ಬರ್ಗರ್ ಕಿಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಅದಾದ ಬಳಿಕ ಅವರ ಸುಳಿವು ಸಿಕ್ಕಿರಲಿಲ್ಲ.
ಮನೆಯಿಂದ ದೇವಸ್ಥಾನಕ್ಕೆ ಹೊರಟಿದ್ದ ನಾಲ್ವರು ಶನಿವಾರ ರಾತ್ರಿ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವುದು ಖಚಿತವಾಗಿದೆ ಎಂದು ಮಾರ್ಷಲ್ ಕೌಂಟಿ ಶೆರಿಫ್ ಕಚೇರಿ ದೃಢಪಡಿಸಿದೆ.
ಈ ಕುರಿತು ಮಾರ್ಷಲ್ ಕೌಂಟಿ ಶೆರಿಫ್ ಮೈಕ್ ಡೌಘರ್ಟಿ ಅವರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, “ನ್ಯೂಯಾರ್ಕ್ ಬಫಲೋದಿಂದ ಕಾಣೆಯಾಗಿದ್ದ ನಾಲ್ವರು ಭಾರತೀಯರು ವಾಹನ ಅಪಘಾತದಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಮೃತಪಟ್ಟವರನ್ನು ಡಾ. ಕಿಶೋರ್ ದಿವಾನ್, ಆಶಾ ದಿವಾನ್, ಶೈಲೇಶ್ ದಿವಾನ್ ಮತ್ತು ಗೀತಾ ದಿವಾನ್ ಎಂದು ಗುರುತಿಸಲಾಗಿದೆ. ಶನಿವಾರ, ಆಗಸ್ಟ್ 2 ರಂದು ನಾಲ್ವರು ಇದ್ದ ವಾಹನ ರಾತ್ರಿ 9.30 ರ ಸುಮಾರಿಗೆ ಬಿಗ್ ವೀಲಿಂಗ್ ಕ್ರೀಕ್ ರಸ್ತೆಯಲ್ಲಿ ವಾಹನ ಪತ್ತೆಯಾಗಿದೆ” ಎಂದು ತಿಳಿಸಿದ್ದಾರೆ. ಅಲ್ಲದೇ ಶೆರಿಫ್ ಮೈಕ್ ಡೌಘರ್ಟಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆ: ಜುಲೈ 29 ರಂದು ನಾಲ್ವರು ಕಾಣೆಯಾಗಿದ್ದಾರೆ ಎಂದು ಪೊಲೀಸರು ಹುಡುಕಾಟ ನಡೆಸಿದ್ದರು. 2009ರ ಟೊಯೋಟಾ ಕ್ಯಾಮಿ ಮಾಡೆಲ್ ಕಾರಿನಲ್ಲಿ (EKW2611) ನಾಲ್ವರು ಪ್ರಯಾಣ ಬೆಳೆಸಿದ್ದರು. ಪೆನ್ಸಿಲ್ವೇನಿಯಾದ ಎರಿಯ ಪೀಚ್ ಸ್ಟ್ರೀಟ್‌ನಲ್ಲಿರುವ ಬರ್ಗರ್ ಕಿಂಗ್‌ನಲ್ಲಿ ಕೊನೆಯ ಬಾರಿಗೆ ಅವರನ್ನು ನೋಡಲಾಗಿತ್ತು. ನಾಲ್ವರು ಕೂಡ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದರು. ಅಲ್ಲಿಯೇ ಅವರು ತಮ್ಮ ಕ್ರೆಡಿಕ್ ಕಾರ್ಡ್ ವಹಿವಾಟು ನಡೆಸಿದ್ದು, ಅದೇ ಕೊನೆಯ ವಹಿವಾಟು ಆಗಿತ್ತು.
ಹೆಲಿಕಾಪ್ಟರ್ ಸರ್ಚ್ ಆಪರೇಶನ್: ಅಲ್ಲಿಂದ ನಿಗೂಢವಾಗಿ ನಾಪತ್ತೆಯಾದ ವೃದ್ಧರಿಗಾಗಿ ಪೊಲೀಸರು ತೀವ್ರ ಶೋಧ ನಡೆಸಲು ಆರಂಭಿಸಿದರು. ಪ್ರಕರಣ ದಾಖಲಾದ ಕೂಡಲೇ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದರು ಆದರೆ, ಹೆಚ್ಚನ ಮಾಹಿತಿ ದೊರೆಯಲಿಲ್ಲ. ಬಳಿಕ ಕಾರು ಸಂಚರಿಸಿದ ಮಾರ್ಗದ ಆಧಾರದಲ್ಲಿ ಹೆಲಿಕಾಪ್ಟರ್ ಸರ್ಚ್ ಆಪರೇಶನ್ ನಡೆಸಲಾಯಿತು. ಈ ತನಿಖೆ ಸಂದರ್ಭದಲ್ಲಿ ಕಾರು ಅಪಘಾತವಾಗಿದೆ ಎಂಬ ಮಾಹಿತಿ ದೊರೆತಿದೆ. ಬಳಿಕ ಆ ಕಾರಿನ ಮತ್ತು ಪ್ರಯಾಣಿಸುತ್ತಿದ್ದವರ ಮಾಹಿತಿ ಪರಿಶೀಲಿಸಿದಾಗ ಈ ನಾಪತ್ತೆಯಾದವರೇ ಈ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.