ಬೆಂಗಳೂರು: ಮುಖ್ಯ ಮಂತ್ರಿಗಳೇ, ನಿಮ್ಮ ತವರು ಜಿಲ್ಲೆಯಲ್ಲಿ 3,500 ನಿವೇಶನಗಳ ಲೆಕ್ಕವೇ ಸಿಗುತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೂಡ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಮೂಡ ಸಂಸ್ಥೆಯ ಎಲ್ಲ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ಗೋಜಿಗೆ ನೀವು ಹೋಗಿಲ್ಲ. ಪಾರದರ್ಶಕತೆ, ನಿಯಮಾವಳಿ ಇಲ್ಲದೆ ಹಂಚಿಕೆಯಾದ ನಿವೇಶನದ allotment ಗಳನ್ನು ಕೂಡಲೇ ರದ್ದು ಗೊಳಿಸಿ ಎಂದಿದ್ದಾರೆ.
