Home Advertisement
Home ತಾಜಾ ಸುದ್ದಿ 35 ಕೆಜಿ ಗಾತ್ರದ ಮೀನು ಬಲೆಗೆ

35 ಕೆಜಿ ಗಾತ್ರದ ಮೀನು ಬಲೆಗೆ

0
111

ಬೆಳಗಾವಿ(ಚಿಕ್ಕೋಡಿ): ರಾಯಬಾಗ ತಾಲೂಕಿನ ಬಾವಾನಸೌದತ್ತಿ ಗ್ರಾಮದ ಬಳಿ ಇರುವ ಕೃಷ್ಣಾ ನದಿಯಲ್ಲಿ ಬೃಹತ್ ಗಾತ್ರದ ಮೀನು ಬುಧವಾರ ಪತ್ತೆಯಾಗಿದೆ.
ಬಾವಾನಸೌದತ್ತಿ ಗ್ರಾಮದ ಮೀನುಗಾರ ರಾವಸಾಬ ಭೋವಿ ಹಾಗೂ ಮಹಾದೇವ ಭೋವಿ ಅವರು ಕೃಷ್ಣಾ ನದಿಯಲ್ಲಿ ಬಲೆ ಹಾಕಿದಾಗ 35 ಕೆಜಿ ಬೃಹತ್ ಗಾತ್ರದ ಬಾಳೆ ಮೀನು ಪತ್ತೆಯಾಗಿದೆ.
ಬೃಹತ್ ಗಾತ್ರದ ಒಟ್ಟು ಮೂರು ಮೀನುಗಳು ಸಿಕ್ಕಿವೆ. ಒಂದು 23 ಕೆಜಿ ಸೇರಿದಂತೆ ಬೃಹತ್ ಗಾತ್ರದ ಮೀನುಗಳು ಮೀನುಗಾರರಿಗೆ ಸಿಗುತ್ತಿವೆ. ಮೀನು ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಪಕ್ಕದ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಮಹಾರಾಷ್ಟ್ರದ ಕೊಯ್ನಾ, ರಾಜಾಪುರ, ಕಾಳಮ್ಮವಾಡಿ ಡ್ಯಾಮಗಳಿಂದ ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಬೃಹತ್ ಗಾತ್ರದ ಮೀನುಗಳು ನದಿಗೆ ಹರಿದು ಬಂದು ಮೀನಗಾರರ ಬಲೆಗೆ ಬೀಳುತ್ತಿವೆ.

Previous articleವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 2000 ಅಭ್ಯರ್ಥಿಗಳ ನೇಮಕಾತಿಗೆ ಆಗ್ರಹ
Next articleದೇಶದ ಪ್ರಥಮ EV ಸಫಾರಿ ಬಸ್‌ಗೆ ಪ್ರಾಯೋಗಿಕ ಚಾಲನೆ