29ರಂದು ವಿಜಯಪುರಕ್ಕೆ ಪ್ರಧಾನಿ ಮೋದಿ

0
18
ಮೋದಿ

ವಿಜಯಪುರ: ಏ. 29ರಂದು ಪ್ರಧಾನಿ ನರೇಂದ್ರ ಮೋದಿ ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸೈನಿಕ ಶಾಲೆಯಲ್ಲಿ ಮಧ್ಯಾಹ್ನ 2ಗಂಟೆಗೆ ಜಿಲ್ಲೆಯ 8 ಕ್ಷೇತ್ರದ ಸಾರ್ವಜನಿಕ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸರ್ವೇ ಪ್ರಕಾರ ರಾಜ್ಯದಲ್ಲಿ ಬಿಜೆಪಿ 105ರಿಂದ 110 ಸ್ಥಾನ ಬರುತ್ತವೆ ಅಂತ ಇತ್ತು. ಆದರೆ, ಪ್ರಧಾನಿ ಮೋದಿ ಬಂದ ಮೇಲೆ ಮತ್ತೆ 30ರಿಂದ 40 ಸ್ಥಾನ ಹೆಚ್ಚಿಗೆ ಬರುತ್ತವೆ ಎಂದರು.
ಅಲ್ಲದೆ ದೇವರಹಿಪ್ಪರಗಿಗೆ ಏ. 25ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಆಗಮಿಸಲಿದ್ದಾರೆ ಎಂದರು.

Previous articleಬಸವ ಜನ್ಮಭೂಮಿಯಲ್ಲಿ ಸಂಭ್ರಮದ ತೊಟ್ಟಿಲೋತ್ಸವ
Next article40% ಸರ್ಕಾರಕ್ಕೆ ನಲ್ವತ್ತೇ ಸೀಟು