೨೦ರಂದು ಮದ್ಯ ಮಾರಾಟ ಬಂದ್

0
32

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಮದ್ಯ ಮಾರಾಟಗಾರರು ನವೆಂಬರ್ ೨೦ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಸ್ಥಗಿತಗೊಳಿಸಲಿದ್ದಾರೆ. ಈ ಕುರಿತಂತೆ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಗುರುಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿ, ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ. ೨೦ ಲಾಭಾಂಶ, ಸಿಎಲ್-೨ಗಳಲ್ಲಿ ಪಾನೀಕರಿಗೆ ಮದ್ಯ ಸೇವಿಸಲು ಅವಕಾಶ, ಸಿಎಲ್-೯ಗಳಲ್ಲಿ ಮಾತ್ರ ಹೆಚ್ಚುವರಿ ಕೌಂಟರ್‌ಗಳನ್ನು ಶುಲ್ಕ ವಿಧಿಸಿ ನೀಡುವಂತೆ ಮತ್ತು ಮದ್ಯ ಬಿಯರ್ ಕಾನೂನು ತಿದ್ದುಪಡಿ ಆಗಬೇಕು. ಸೆ. ೧೪ ೨೦೨೩ ರಂದು ರಾಜ್ಯ ಅಬಕಾರಿ ಇಲಾಖೆ ಸರ್ಕಾರಕ್ಕೆ ಸಂಪನ್ಮೂಲ ಕ್ರೋಢಿಕರಣ ಸಂಬಂಧ ನೀಡಿರುವ ಪ್ರಸ್ತಾವನೆಗಳ ಕುರಿತು ವಿಸ್ತೃತ ಚರ್ಚೆಗೆ ಅವಕಾಶ, ಪ್ರತಿಬಂಧಕ ಕಾಯ್ದೆ ೧೯೮೮ರ ಅಡಿಯಲ್ಲಿ ಸಂಬಂಧಿಸಿದ ಪೊಲೀಸ್ ವಿಭಾಗದಿಂದ ಟ್ರ್ಯಾಪ್ ಅಥವಾ ದಾಳಿಗೊಳಗಾದ ಅಬಕಾರಿ ಅಧಿಕಾರಿಗಳನ್ನು ಅಮಾನತಿನ ನಂತರ ಸೇವೆಗೆ ಪುನರ್ ಸ್ಥಾಪಿಸುವ ಸಂದರ್ಭ ಯಾವುದೇ ಜಿಲ್ಲೆಯಲ್ಲಿ ಕಾರ್ಯನಿರ್ವಾಹಕ ಹುದ್ದೆ ನೀಡದಂತೆ ಒತ್ತಾಯಿಸಿದರು.

Previous articleಪ್ರಯತ್ನ, ಪ್ರಾರ್ಥನೆ, ಪ್ರಾಮಾಣಿಕತೆಯಿಂದ ದೇಶದ ಪ್ರಗತಿ
Next articleಮತ್ತೆ ಮುಷ್ಕರಕ್ಕೆ ಮುಂದಾದ ೧೦೮ ಅಂಬುಲೆನ್ಸ್ ಸಿಬ್ಬಂದಿ