ಹೋರಾಟ ಮಾಡದಿದ್ರೂ ಪರ್ವಾಗಿಲ್ಲ, ಆದ್ರೆ ಮಾರಾಟ ಆಗ್ಬೇಡ…

0
34

ಬೆಂಗಳೂರು: ಭಾರತೀಯರಿಗೆ ರಕ್ಷಾ ಕವಚವಾಗಿರುವ ಏಕೈಕ ಗ್ರಂಥ ಎಂದರೆ ಅದು ನಮ್ಮ ಸಂವಿಧಾನ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಬೆಂಗಳೂರಿನ ಭಾರತ್‌ ಜೋಡೋ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದ ಅವರು “ನೀನು ಹೋರಾಟ ಮಾಡದಿದ್ರೂ ಪರ್ವಾಗಿಲ್ಲ, ಆದ್ರೆ ಮಾರಾಟ ಆಗ್ಬೇಡ” ಅಂತ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಒಂದು ಮಾತು ಹೇಳಿದ್ರು. ಆ ಮಾತು ಇಂದಿನ ರಾಜಕೀಯ ಸನ್ನಿವೇಶದಲ್ಲಿ ತುಂಬಾ ಪ್ರಸ್ತುತ. 1976ರಲ್ಲಿ ಇಂದಿರಾಗಾಂಧಿ ಅವರ ಆಡಳಿತದಲ್ಲಿ ಸಂವಿಧಾನದ ಪೀಠಿಕೆಯಲ್ಲಿ ತಿದ್ದುಪಡಿ ತಂದು ಜಾತ್ಯತೀತ ಹಾಗೂ ಸಮಾಜವಾದ ಪದವನ್ನು ಸೇರಿಸಿದ್ದರು. ಆ ಪದಗಳನ್ನು ತೆಗೆಯಲು ಸಾಧ್ಯವಿಲ್ಲ ಎಂದು ನಿನ್ನೆ ಸುಪ್ರೀಂ ಕೋರ್ಟ್‌ ಹೇಳಿದೆ. ಎಲ್ಲ ಧರ್ಮಗಳಿಗೂ ಒಂದು ಗ್ರಂಥವಿದೆ. ಅದೇ ರೀತಿ ಭಾರತೀಯರಿಗೆ ರಕ್ಷಾ ಕವಚವಾಗಿರುವ ಏಕೈಕ ಗ್ರಂಥ ಎಂದರೆ ಅದು ನಮ್ಮ ಸಂವಿಧಾನ ಎಂದರು.

Previous articleರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಪ್ರಕಟ
Next articleಸರ್ಕಾರಿ ಹುದ್ದೆಗಳ ಹೊಸ ನೇಮಕಾತಿಗೆ ತಡೆ